ವಾಷಿಂಗ್ಟನ್: ಅಮೆರಿಕದ ಸೆನೆಟ್ (US Senate) ಮಂಗಳವಾರ ದೇಶದಲ್ಲಿ ಸಲಿಂಗ (Same-Sex Marriage) ಮತ್ತು ಅಂತರ್ಜಾತಿ ವಿವಾಹಗಳಿಗೆ (Interracial Marriage) ರಕ್ಷಣೆಯನ್ನು ನೀಡುವ ಕಾನೂನನ್ನು ಅಂಗೀಕರಿಸಿದೆ.
ಮಸೂದೆ ಅಂಗೀಕಾರಕ್ಕೆ 60 ಮತಗಳ ಅಗತ್ಯವಿದ್ದು, ಸೆನೆಟ್ 61-36 ಮತಗಳಲ್ಲಿ ಸಲಿಂಗ ಹಾಗೂ ಅಂತರ್ಜಾತಿ ವಿವಾಹ ಕಾಯಿದೆಯನ್ನು ರಕ್ಷಿಸುವ ಮಸೂದೆಯನ್ನು ಅಂಗೀಕರಿಸಿತು. ಸೆನೆಟ್‌ನ ಅನುಮೋದನೆ ಎರಡೂ ಪಕ್ಷಗಳು ಒಮ್ಮತದಿಂದ ನಿರ್ಧರಿಸಿವೆ. ರಿಪಬ್ಲಿಕನ್ ಹಾಗೂ ಡೆಮೋಕ್ರಾಟ್ ಪಕ್ಷಗಳು ಒಟ್ಟಾಗಿಯೇ ಅಂತರ್ಜಾತಿ ಹಾಗೂ ಸಲಿಂಗ ವಿವಾಹದ ಹಕ್ಕನ್ನು ಬೆಂಬಲಿಸಿವೆ.
Advertisement
Advertisement
ಈ ಬಗ್ಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ (Joe Biden) , ಇಂದು ಉಭಯಪಕ್ಷೀಯ ನಿರ್ಧಾರದೊಂದಿಗೆ ಸೆನೆಟ್ ಮದುವೆ ಕಾಯಿದೆಯನ್ನು ಅಂಗೀಕರಿಸಿದೆ. ಇದೀಗ ಅಮೆರಿಕ ಒಂದು ಮೂಲಭೂತ ಸತ್ಯವನ್ನು ಪುನರುಚ್ಚರಿಸಲು ಸಿದ್ಧವಾಗಿದೆ. ಪ್ರೀತಿ ಎಂದರೆ ಪ್ರೀತಿಯೇ, ಅಮೆರಿಕನ್ನರು ತಾವು ಪ್ರೀತಿಸುವ ವ್ಯಕ್ತಿ ಯಾರೇ ಆದರೂ ಮದುವೆಯಾಗುವ ಹಕ್ಕನ್ನು ಹೊಂದಿರಬೇಕು. ಇದೀಗ ಲಕ್ಷಾಂತರ ಅಮೆರಿಕನ್ನರಿಗೆ ಈ ಮಸೂದೆ ಸಲಿಂಗ ಹಾಗೂ ಅಂತರ್ಜಾತಿ ವಿವಾಹಕ್ಕೆ ಅರ್ಹರಾಗಿರುವ ಹಕ್ಕುಗಳನ್ನು ನೀಡುತ್ತದೆ ಎಂದು ಹೇಳಿದರು. ಇದನ್ನೂ ಓದಿ: BMTCಯಿಂದ ಕಟ್ಟಡ ಕಾರ್ಮಿಕರಿಗೆ ಗುಡ್ ನ್ಯೂಸ್ – ಸ್ಮಾರ್ಟ್ ಕಾರ್ಡ್ ಮಾದರಿಯ ಪಾಸ್ ನೀಡಲು ಚಿಂತನೆ
Advertisement
Advertisement
ಮಸೂದೆಗೆ ಜುಲೈನಲ್ಲಿ ಅಂಗೀಕಾರ ಸಿಕ್ಕಿದ್ದು, ಅಧ್ಯಕ್ಷ ಜೋ ಬೈಡನ್ ಇದಕ್ಕೆ ಸಹಿ ಹಾಕಿದ್ದರು. ಇದೀಗ ಸಲಿಂಗ, ಅಂತರ್ಜಾತಿ ವಿವಾಹಗಳನ್ನು ರಕ್ಷಿಸುವ ಮಸೂದೆಯನ್ನು ಸೆನೆಟ್ ಅಂಗೀಕರಿಸಿದೆ. ಇದನ್ನೂ ಓದಿ: ಟೊಯೋಟ ಕಿರ್ಲೋಸ್ಕರ್ ಮೋಟಾರ್ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ ಹೃದಯಾಘಾತದಿಂದ ನಿಧನ