ಮುಂಬೈ: ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಅವರ ಶಿಬಿರಕ್ಕೆ ತಕ್ಷಣ ಪರಿಹಾರವಿಲ್ಲ. ಈ ಕುರಿತು ವಿಚಾರಣೆಯನ್ನು ಆ.1ಕ್ಕೆ ಮುಂದೂಡಲಾಗಿದೆ ಎಂದು ಮಹಾರಾಷ್ಟ್ರ ಸುಪ್ರೀಂ ಕೋರ್ಟ್ ತಿಳಿಸಿದೆ.
ಶಿವಸೇನೆ ಪಕ್ಷದಲ್ಲಿ ಸ್ವ-ಪಕ್ಷದ ಸದಸ್ಯರ ನಡುವೆ ಭಿನ್ನಭಿಪ್ರಾಯ ಮತ್ತು ಗೊಂದಲಗಳು ಕಾಣಿಸಿಕೊಳ್ಳುತ್ತಿವೆ. ಈ ಹಿನ್ನೆಲೆ ಶಿವಸೇನೆಯ ಬಂಡಾಯದ ಕುರಿತು ಕಾನೂನು ಹೋರಾಟಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಆಲಿಸಿದೆ. ಅರ್ಜಿಗಳಲ್ಲಿ ಒಳಗೊಂಡಿರುವ ಸಮಸ್ಯೆಗಳ ಬಗ್ಗೆ ದೊಡ್ಡ ಪೀಠಕ್ಕೆ ಉಲ್ಲೇಖಿಸಬೇಕಾಗಿದೆ ಎಂದು ಬುಧವಾರ ಹೇಳಿದೆ. ಇದನ್ನೂ ಓದಿ: 16 ಗೇಟ್‍ಗಳನ್ನು ರಿಪ್ಲೇಸ್ ಮಾಡಲಾಗಿದ್ದು, ಇವತ್ತಿಗೂ 61 ಗೇಟ್ ಬದಲಿಸಬೇಕಾಗಿದೆ: ಸಿಎಂ
Advertisement
Advertisement
ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯವು ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೆ ಎಂದು ಭರವಸೆ ಕೊಟ್ಟಿದ್ದು, ಆಗಸ್ಟ್ 1 ರಂದು ದಿನಾಂಕ ನಿಗದಿ ಮಾಡಿದೆ. ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ನೇತೃತ್ವದ ಪೀಠ, ಠಾಕ್ರೆ ಮತ್ತು ಶಿಂಧೆ ವಿಚಾರಣೆ ನಡೆಯಲಿದೆ.
Advertisement
Advertisement
ಪ್ರತಿವಾದಿಗಳು ಯಾವುದೇ ಆರೋಪಗಳನ್ನು ನಿರಾಕರಿಸಲು ಬಯಸಿದರೆ ಸಾಮಾನ್ಯ ಅಫಿಡವಿಟ್ ಸಲ್ಲಿಸುವಂತೆಯೂ ಸೂಚಿಸಲಾಗಿದೆ. ಸ್ಪೀಕರ್ ಆಯ್ಕೆ, ವಿಪ್ ಮಾನ್ಯತೆ ಮತ್ತು ಇತರ ವಿಷಯಗಳ ಬಗ್ಗೆ ಇರುವ ಸಮಸ್ಯೆಗಳನ್ನು ಚರ್ಚೆ ಮಾಡಲಾಗುವುದು ಎಂದು ಕೋರ್ಟ್ ತಿಳಿಸಿದೆ. ಇದನ್ನೂ ಓದಿ: ನಮ್ಮ ಪ್ರಧಾನಿ ತಾಯಿ ಹೃದಯದವರು: ಶೋಭಾ ಕರಂದ್ಲಾಜೆ