ಲಕ್ನೋ: ಉತ್ತರ ಪ್ರದೇಶದ (Uttar Pradesh) ಕಾನ್ಪುರ – ದೆಹಲಿ (Kanpur- Delhi) ಹೆದ್ದಾರಿಯಲ್ಲಿ ಮಹಿಳೆಯ ರುಂಡವಿಲ್ಲದ, ಅರೆಬೆತ್ತಲೆ ಶವ ಪತ್ತೆಯಾಗಿದೆ. ಘಟನೆ ನಡೆದು 24 ಗಂಟೆ ಕಳೆದರೂ ಮಹಿಳೆಯ ಬಗ್ಗೆ ಯಾವ ಗುರುತು ಮಾಹಿತಿ ಸಿಗಲಿಲ್ಲ.
ಉತ್ತರ ಪ್ರದೇಶದ ಕಾನ್ಪುರದ ಗುಜ್ಜೈನಿ ಎಂಬಲ್ಲಿ ಬುಧವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಿಳೆಯ ರುಂಡವಿಲ್ಲದೆ ಬೆತ್ತಲೆಯಾಗಿ ಶವ ಪತ್ತೆಯಾಗಿದ್ದನ್ನು ಸ್ಥಳೀಯರು ಪೊಲೀಸರಿಗೆ ತಿಳಿಸಿದರು. ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದ್ದು, ಮಹಿಳೆಯ ಗುರುತನ್ನು ಪತ್ತೆ ಹಚ್ಚವುದಕ್ಕೆ ಪೊಲೀಸರು ಆಸುಪಾಸಿನಲ್ಲಿರುವ ಸಿಸಿಟಿವಿಯನ್ನು ಕ್ಯಾಮೆರಾವನ್ನು ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಮಾಧ್ಯಮಗಳನ್ನು ನೋಡಿ ಅಸಭ್ಯ ಸನ್ನೆ ಮಾಡಿದ ದರ್ಶನ್
Advertisement
ತನಿಖೆ ಮುಂದುವರೆಯುತ್ತಿದೆ. ಮಹಿಳೆಯ ಮೂಳೆಗಳು ಹಾಗೂ ಹಲ್ಲುಗಳು ಮುರಿದಿವೆ ಎಂದು ಉಪ ಪೊಲೀಸ್ ಆಯುಕ್ತ ರವೀಂದ್ರ ಕುಮಾರ್ ತಿಳಿಸಿದ್ದಾರೆ. ಈ ಪ್ರಕರಣವನ್ನು ತನಿಖೆ ಮಾಡುವುದಕ್ಕೆ ಮೂರು ತಂಡಗಳನ್ನು ರಚಿಸಲಾಗಿದೆ. ಶವ ಪತ್ತೆಯಾದ ಸ್ಥಳದಲ್ಲಿ ಯಾವುದೇ ಸಿಸಿ ಕ್ಯಾಮೆರಾಗಳು ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಮಳೆ ಆರ್ಭಟ: ಮುಂದಿನ ಮೂರು ದಿನಗಳ ಕಾಲ ಹೈಅಲರ್ಟ್ ಘೋಷಣೆ
Advertisement
Advertisement
ಆದರೆ ಸುಮಾರು 3 ಕಿ.ಮೀ ದೂರದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಮಹಿಳೆಯೊಬ್ಬರು ಒಂಟಿಯಾಗಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಆಕೆ ಧರಿಸಿರುವ ಬಟ್ಟೆಗಳು ಶವ ಸಿಕ್ಕಿದ ಸಮೀಪ ಕಂಡು ಬಂದಿರುವ ಬಟ್ಟೆಯ ತುಂಡುಗಳು ಮತ್ತು ಚಪ್ಪಲಿಗಳು ಹೊಂದಿಕೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ, ಅವರ ಮಕ್ಕಳು ಬಿಜೆಪಿಗೆ ದ್ರೋಹ ಮಾಡಿದ್ರು: ಈಶ್ವರಪ್ಪ ಗುಡುಗು
Advertisement
ಸಾವಿಗೆ ಕಾರಣ ಏನೆಂಬುದನ್ನು ಪತ್ತೆಹಚ್ಚಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆ ಹೇಗೆ ನಡೆಯಿತು ಎನ್ನುವುದಕ್ಕೆ ಯಾವುದೇ ಸುಳಿವು ಸಿಕ್ಕಿಲ್ಲ. ಮೃತದೇಹವನ್ನು ನೋಡಿದರೆ ಕೊಲೆ ಮಾಡಿ ಮೃತದೇಹದಿಂದ ತಲೆಯನ್ನು ಕತ್ತರಿಸಿ ರಸ್ತೆಗೆ ಎಸೆದಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ ಯಾರೋ ಒಬ್ಬರು ಶವವನ್ನು ಎಸೆಯುವುದನ್ನಾಗಲೀ, ಈ ಮಹಿಳೆಯ ಗುರುತಾಗಲೀ ಸಿಗಲಿಲ್ಲ. ಆಕೆ ಯಾರು, ಎಲ್ಲಿಯವಳು ಎಂದು ತಿಳಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದರು.
ಈ ಘಟನೆಯ ಬಗ್ಗೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರದ ವಿರುದ್ಧ ವಿರೋಧ ಪಕ್ಷ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಮೀಸಲಾತಿ ರದ್ದು ಹೇಳಿಕೆ ವಿವಾದ – ರಾಹುಲ್ ಗಾಂಧಿ ಪರ ನಿಂತ ಸಿಎಂ