ಉಡುಪಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಮಾನ ಇಳಿಸಲು ರಾಜ್ಯಗಳೇ ಇಲ್ಲ ಎಂದು ಸಚಿವ ಸುನೀಲ್ ಕುಮಾರ್ ಟೀಕಿಸಿದರು.
ಪಂಚರಾಜ್ಯಗಳಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿರುವ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಈ ಗೆಲುವು ಸಾಧಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ. ಇದರಿಂದ ಬಿಜೆಪಿ ಎಷ್ಟು ಬಲಿಷ್ಠಶಾಲಿ ಎಂದು ತಿಳಿಯಬಹುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಇಲ್ಲದಂತೆ ಹೋಗುತ್ತೆ ಎಂದರು. ಇದನ್ನೂ ಓದಿ: ನಾನು ಆತಂಕವಾದಿಯಲ್ಲ ಎಂದು ಮತದಾರರು ಸಾಬೀತು ಮಾಡಿದ್ದಾರೆ: ಕೇಜ್ರಿವಾಲ್
Advertisement
Advertisement
ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ಇಲ್ಲ. ಬಸವರಾಜ ಬೊಮ್ಮಾಯಿ ಅವಧಿ ಪೂರ್ಣ ಮಾಡುತ್ತಾರೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎಂದು ಅಮಿತ್ ಶಾ ಕೂಡಾ ಹೇಳಿದ್ದಾರೆ. ರಾಜ್ಯಾಧ್ಯಕ್ಷರ ವಿಚಾರದಲ್ಲಿ ಇವತ್ತಿನವರೆಗೆ ಯಾವುದೇ ಬದಲಾವಣೆ ಇಲ್ಲ. ಪಕ್ಷದ ನಾಯಕತ್ವ ಬದಲಾವಣೆ ಹೈಕಮಾಂಡ್‍ಗೆ ಬಿಟ್ಟ ವಿಚಾರ ಎಂದು ತಿಳಿಸಿದರು.
Advertisement
ಡಿಕೆಶಿ ವಿಮಾನ ಇಳಿಸಲು ರಾಜ್ಯಗಳೇ ಇಲ್ಲ. ಕಾಂಗ್ರೆಸ್ ಪಕ್ಷ ವರ್ತಮಾನ ಮತ್ತು ಭವಿಷ್ಯದಲ್ಲಿ ಇಲ್ಲ. ಕಾಂಗ್ರೆಸ್ ಭೂತಕಾಲದ ಪಕ್ಷ, ಇತಿಹಾಸ ಸೇರಿಯಾಯ್ತು. ಎಲ್ಲ ಚುನಾವಣೆಗಳನ್ನು ನಾವು ಸವಾಲಾಗಿ ಸ್ವೀಕಾರ ಮಾಡಿದ್ದೇವೆ. ಡಿ.ಕೆ.ಶಿವಕುಮಾರ್ ಗೋವಾದಲ್ಲಿ ಕಸರತ್ತು ಮಾಡಲು ಹೋಗಿದ್ದರು. ಮೇಕೆದಾಟು ಮತ್ತು ರಾಜ್ಯ ಕಾಂಗ್ರೆಸ್ ಮುನ್ನಡೆಸುವಲ್ಲಿ ಡಿಕೆಶಿ ವಿಫಲ ಆಗಿದ್ದಾರೆ. ಡಿಕೆಶಿ ವಿಮಾನವನ್ನು ಪಂಜಾಬ್ ಕಡೆ ತಿರುಗಿಸುವುದು ಒಳ್ಳೆಯದು. ಕಾಂಗ್ರೆಸ್, ಪಂಜಾಬ್ ರಾಜ್ಯದಲ್ಲೂ ವಿಫಲವಾಗಿದೆ. ಡಿಕೆಶಿ ವಿಮಾನ ಎಲ್ಲೂ ಲ್ಯಾಂಡ್ ಆಗಲು ಸಾಧ್ಯವಿಲ್ಲ. ಡಿಕೆಶಿ ಆಕಾಶದಲ್ಲಿ ಹಾರುತ್ತಿರಲಿ, ಎಲ್ಲೂ ಇಳಿಯುವ ಅವರಿಗೆ ಅವಕಾಶ ಇಲ್ಲ ಎಂದು ವ್ಯಂಗ್ಯವಾಡಿದರು.
Advertisement
ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಬೇಗುದಿ ಆರಂಭವಾಗಿದೆ. ಮುಂದಿನ ಒಂದು ವರ್ಷ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇವೆ. ಪಂಜಾಬ್‍ನಲ್ಲಿ ಆಪ್ ಗೆ ಅಭಿನಂದನೆ, ಒಳ್ಳೆಯ ಆಡಳಿತ ಮಾಡಲಿ. ಪಂಜಾಬ್‍ನಲ್ಲಿ ಲೋಕಸಭೆಗೆ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತದೆ. ನಮ್ಮಲ್ಲಿ ಎಬಿಸಿ ಟೀಂ ಇಲ್ಲ, ಮೋದಿ ಟೀಂ, ಬಿಜೆಪಿ ಟೀಂ ಮಾತ್ರ ಇದೆ ಎಂದು ಸಂತೋಷ ವ್ಯಕ್ತಪಡಿಸಿದರು. ಇದನ್ನೂ ಓದಿ: ಜನರ ತೀರ್ಪನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ, ನಾವು ಕಲಿಯುತ್ತೇವೆ: ರಾಹುಲ್ ಗಾಂಧಿ
ರಾಮಮಂದಿರ ನಿರ್ಮಾಣ ಮತ್ತು ಕಾಶಿ ವಿಶ್ವನಾಥನ ಕಾರಿಡಾರ್ ಯೋಜನೆಯ ನಂತರ ಇಡೀ ದೇಶದಲ್ಲಿ ವಾತಾವರಣ ಬದಲಾಗಿತ್ತು. ಯೋಗಿ ಆಡಳಿತ ಉತ್ತರಪ್ರದೇಶದ ವಾತಾವರಣವನ್ನು ಬದಲು ಮಾಡಿದೆ. ಈ ಚುನಾವಣೆ ಇಡೀ ದೇಶಕ್ಕೆ ದಿಕ್ಸೂಚಿ ಚುನಾವಣೆಯಾಗಿದೆ. ಇಡೀ ದೇಶದಲ್ಲಿ ಕಾರ್ಯಕರ್ತರ ಉತ್ಸಾಹ ಜಾಸ್ತಿಯಾಗಿದೆ. ಉತ್ತರಪ್ರದೇಶದಲ್ಲಿ ಒಂದೇ ಪಕ್ಷ ಎರಡು ಬಾರಿ ಗೆದ್ದ ಉದಾಹರಣೆ ಇಲ್ಲ. ಕರ್ನಾಟಕದಲ್ಲಿ ನಮ್ಮಂತಹ ಎಲ್ಲ ಕಾರ್ಯಕರ್ತರು ಉತ್ಸಾಹ ಇಮ್ಮಡಿಗೊಳಿಸಿದೆ ಎಂದರು.