– ಸುಮಾರು 2 ಕೆಜಿಯಷ್ಟು ಮಾದಕ ವಸ್ತು ವಶಕ್ಕೆ
ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ಹಾವೇರಿ (Haveri) ಜಿಲ್ಲೆ ಹಾನಗಲ್ (Hanagal) ತಾಲೂಕಿನ ಅಕ್ಕಿಆಲೂರು ಪಟ್ಟಣದಲ್ಲಿ ಬಳಿ ನಡೆದಿದೆ.
ಅಕ್ಕಿಆಲೂರು ಪಟ್ಟಣದ ದನಮಾರುಕಟ್ಟೆಯಲ್ಲಿ ಬಳಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1.20 ಲಕ್ಷ ಮೌಲ್ಯದ 2 ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನ ಮುಬಾರಕ್ ಮಕಾಂದರ್, ಮುಕ್ತಿಯಾರ್ ಮಕಾಂದರ್, ಮಹಮ್ಮದ್ ಫಜ್ಜಲ್ ಹಾಗೂ ಮಹಮ್ಮದ್ ಸಾಧಿಕ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯೋಗಕ್ಕೆ ವಿಪಕ್ಷಗಳ ಸಿದ್ಧತೆ
ಆರೋಪಿತರು ಹಾನಗಲ್ ಮತ್ತು ಹಾವೇರಿ ಮೂಲದ ನಿವಾಸಿಗಳು ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಾನಗಲ್ ಪಿಎಸ್‌ಐ ಸಂಪತ್ತ ಆನಿಕಿವಿ ನೇತೃತ್ವದಲ್ಲಿ ಗಾಂಜಾ ಮಾರಾಟಗಾರರ ಬಂಧನ ಮಾಡಲಾಗಿದೆ. ಇದನ್ನೂ ಓದಿ: ಸಿಎಂ ವಿರುದ್ಧ 24 ಕೊಲೆಗಳ ಆರೋಪ – ಯಾವುದೇ ಕ್ಷಣದಲ್ಲಿ ತಿಮರೋಡಿ ಬಂಧನ ಸಾಧ್ಯತೆ