ಔರಾಂಗಬಾದ್: ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮದಲ್ಲಿ ಬಿಹಾರ ರಾಜ್ಯದ ಔರಂಗಾಬಾದ್ ಜೆಲ್ಲೆಯ ಮ್ಯಾಜಿಸ್ಟ್ರೇಟ್ ಕನ್ವಾಲ್ ತನುಜ್ ತಮ್ಮ ಭಾಷಣದಲ್ಲಿ ಆವೇಶಭರಿತರಾಗಿ ಶೌಚಾಲಯ ಕಟ್ಟಿಸಿಕೊಳ್ಳದವರು ನಿಮ್ಮ ಪತ್ನಿಯರನ್ನು ಮಾರಿಕೊಳ್ಳಿ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಜಿಲ್ಲೆಯ ಜಾಮ್‍ಹೋರ್ ಎಂಬ ಗ್ರಾಮದಲ್ಲಿ ಸ್ವಚ್ಛ ಭಾರತ ಅಭಿಯಾನದ ಕಾರ್ಯಕ್ರಮದಲ್ಲಿ ಕನ್ವಾಲ್ ತನುಜ್ ಭಾಗಿಯಾಗಿದ್ದರು. ಈ ವೇಳೆ ಮನೆಗಳಲ್ಲಿ ಶೌಚಾಲಯಗಳ ಕೊರತೆಯಿಂದಾಗಿ ಮಹಿಳೆಯರು ಬಹಿರ್ದಸೆಗಾಗಿ ಹೊರ ಹೋಗಬೇಕಾಗಿದೆ. ಇದ್ರಿಂದಾಗಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಸೇರಿದಂತಹ ಪ್ರಕರಣಗಳು ನಡೆಯುತ್ತಿವೆ ಎಂದು ಕನ್ವಾಲ್ ತನುಜ್ ಆಕ್ರೋಶ ವ್ಯಕ್ತಪಡಿಸಿದ್ರು.
Advertisement
Advertisement
ಸರ್ಕಾರ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರತಿಯೊಂದು ಮನೆಗೆ 12 ಸಾವಿರ ರೂ. ಧನ ಸಹಾಯ ಕೊಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ಶೌಚಾಲಯ ನಿರ್ಮಿಸಿಕೊಳ್ಳಿ. ಮನೆಯ ಹೆಣ್ಣು ಮಕ್ಕಳ ಮರ್ಯಾದೆಗಿಂತ 12 ಸಾವಿರ ರೂ. ಹೆಚ್ಚಿನದಲ್ಲ. ಭಾರತದಲ್ಲಿ 12 ಸಾವಿರ ರೂ. ಕಷ್ಟಪಡುವರು ಇಲ್ಲ. ಶೌಚಾಲಯ ನಿರ್ಮಿಸಿಕೊಳ್ಳಲು ಸಾಧ್ಯವಾಗದಿದ್ರೆ, ನಿಮ್ಮ ಪತ್ನಿಯರನ್ನು ಮಾರಿಕೊಳ್ಳಿ ಎಂದು ಕನ್ವಾಲ್ ತನುಜ್ ಹೇಳಿದ್ದಾರೆ.
Advertisement
ಇನ್ನೂ ಕನ್ವಾಲ್ ತನುಜ್ ಭಾಷಣದ ವೇಳೆಯಲ್ಲಿ ಗ್ರಾಮದ ವ್ಯಕ್ತಿಯೊಬ್ಬ ನನಗೆ ಶೌಚಾಲಯ ನಿರ್ಮಿಸಿಕೊಳ್ಳಲು 12 ಸಾವಿರ ರೂ. ಹಣವಿಲ್ಲ ಎಂದು ಕೇಳಿದಾಗ, ನಾನು ನಿನ್ನ ಹತ್ರ ನಂತರ ಮಾತನಾಡುತ್ತೇನೆ ಎಂದು ಕನ್ವಾಲ್ ತನುಜ್ ಉತ್ತರಿಸಿದ್ದಾರೆ.
Advertisement
ಸರ್ಕಾರ ನೀಡುವ ಹಣವನ್ನು ನಿಮ್ಮ ಸ್ವಂತ ಖರ್ಚಿಗಾಗಿ ಬಳಸಿಕೊಳ್ಳಬೇಡಿ ಎಂದು ಅದರ ಸದುಪಯೋಗ ತೆಗೆದುಕೊಳ್ಳಬೇಕು ಎಂದು ಕನ್ವಾಲ್ ತನುಜ್ ಗ್ರಾಮಸ್ಥರಿಗೆ ತಿಳಿ ಹೇಳಿದರು. ಸದ್ಯ ತನ್ವಾಲ್ ತನುಜಾರ ಈ ವಿವಾದಾತ್ಮಕ ಹೇಳಿಕೆಯ ವಿಡಿಯೋ ವೈರಲ್ ಆಗಿದೆ.
#WATCH | Aurangabad (Bihar) District Magistrate Kanwal Tanuj’s shocking statement: ‘If you don’t have money to build toilet, sell your wife’ pic.twitter.com/H8hkF6JXEv
— TIMES NOW (@TimesNow) July 23, 2017
Bihar district magistrate Kanwal Tanuj denies saying ‘sell your wife if you can’t build toilet’ https://t.co/8vjRVbY0Vm@journoruchir pic.twitter.com/EdzNL5zgTS
— Hindustan Times (@htTweets) July 24, 2017
#WATCH Aurangabad's DM Kanwal Tanuj says, " go sell your wife" to a person while addressing a public gathering on cleanliness (22.07) #Bihar pic.twitter.com/kqkQpVdC1q
— ANI (@ANI) July 23, 2017