ಬೆಂಗಳೂರು: ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದಕ್ಕೆ ಕರ್ನಾಟಕ ಮೂಲದ ವೈದ್ಯ ಶ್ರೀನಿವಾಸ್ ಅವರನ್ನು ಅಮೆರಿಕದ ಜನ ಡ್ರೈವ್ ಆಫ್ ಹಾನರ್ ಮೂಲಕ ಗೌರವಿಸಿದ್ದಾರೆ.
ಅಮೆರಿಕದಲ್ಲಿ ಕೊರೊನಾ ಹಾಟ್ ಸ್ಪಾಟ್ ಎನಿಸಿರುವ ನ್ಯೂಯಾರ್ಕ್ ನಲ್ಲಿ ಈ ಗೌರವ ಸಲ್ಲಿಕೆಯಾಗಿದ್ದು ವಿಶೇಷ. ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಶ್ರೀನಿವಾಸ್ ಅವರ ನಿವಾಸಕ್ಕೆ ಕಾರಿನಲ್ಲಿ ಆಗಮಿಸಿದ ಸ್ಥಳೀಯ ಜನ ಗೌರವಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀನಿವಾಸ್ ಅವರು ಕೈ ಬೀಸಿ ಮರು ವಂದನೆ ನೀಡಿದ್ದಾರೆ.
Advertisement
Advertisement
ಶ್ರೀನಿವಾಸ್ ಅವರು ಕಲಬುರಗಿಯಲ್ಲಿ ಎಂಬಿಬಿಎಸ್ ಮುಗಿಸಿ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಪದವಿಯನ್ನು ಓದಿದ್ದಾರೆ. ಪ್ರಸ್ತುತ ನ್ಯೂಯಾರ್ಕ್ನಲ್ಲಿರುವ ಮೌಂಟ್ ಸಿನಾಯ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Advertisement
Advertisement
ಕಳೆದ ವಾರ ಓಕ್ಲ್ಯಾಂಡ್ನ ಸೌತ್ ವಿಂಡ್ಸರ್ ಆಸ್ಪತ್ರೆ ಮತ್ತು ಸ್ಥಳೀಯ ಆಡಳಿತ ಮೈಸೂರು ಮೂಲದ ಡಾ.ಉಮಾ ಮಧುಸೂದನ್ ಅವರಿಗೆ ಡ್ರೈವ್ ಆಫ್ ಹಾನರ್ ಮೂಲಕ ಗೌರವ ಸಲ್ಲಿಸಿತ್ತು. ವೈದ್ಯ ಉಮಾ ಅವರ ಮನೆ ಎದುರು ನೂರಾರು ವಾಹನಗಳಲ್ಲಿ ಬಂದ ಜನ, ಅಂಬುಲೆನ್ಸ್ ಸಿಬ್ಬಂದಿ, ಅಗ್ನಿಶಾಮಕ ಪಡೆ, ಅಧಿಕಾರಿಗಳು ನಿಮ್ಮ ಸೇವೆ ಅನನ್ಯ ಎನ್ನುತ್ತಾ ಧನ್ಯವಾದ ಹೇಳಿತ್ತು.