ಸಿಯೋಲ್: ಪ್ಯಾರಿಸ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ದಕ್ಷಿಣ ಕೊರಿಯಾ ಆಟಗಾರರ ಜೊತೆ ಸೆಲ್ಫಿ ತೆಗೆದುಕೊಂಡಿದ್ದಕ್ಕೆ ತನ್ನ ಆಟಗಾರರ ವಿರುದ್ಧ ಉತ್ತರ ಕೊರಿಯಾ ಸರ್ಕಾರ ಕ್ರಮಕ್ಕೆ ಮುಂದಾಗಿದೆ.ಇದನ್ನೂ ಓದಿ: ಜಮ್ಮು ಕಾಶ್ಮೀರ ಚುನಾವಣೆ: ಇಂದು ಬೆಳಗ್ಗೆ ಬಿಡುಗಡೆ ಮಾಡಿದ್ದ ಮೊದಲ ಪಟ್ಟಿ ಹಿಂಪಡೆದ ಬಿಜೆಪಿ
ಉತ್ತರ ಕೊರಿಯಾದ ಟೆಬಲ್ ಟೆನ್ನಿಸ್ ಆಟಗಾರರಾದ ಜಂಗ್-ಸಿಕ್ ಮತ್ತು ಕಿಮ್ ಕುಮ್ ಯಂಗ್ ಪದಕ ಗೆದ್ದ ಮೇಲೆ ತಮ್ಮ ಬದ್ದ ವೈರಿ ದೇಶವಾದ ದಕ್ಷಿಣ ಕೊರಿಯಾದ ಆಟಗಾರರ ಜೊತೆ ನಗುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಸೆಲ್ಫಿ ತೆಗೆದುಕೊಳ್ಳುವಾಗ ಚೀನಾದ ಆಟಗಾರರು ಜೊತೆಗಿದ್ದರು.
ತನ್ನ ಬದ್ದ ವೈರಿ ದೇಶ ದಕ್ಷಿಣ ಕೊರಿಯಾದ ಆಟಗಾರರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಕ್ಕೆ ಉತ್ತರ ಕೋರಿಯಾದ ಸರ್ಕಾರ ತನ್ನ ದೇಶದ ಆಟಗಾರರ ಮೇಲೆ ಕ್ರಮಕ್ಕೆ ಮುಂದಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಇದನ್ನೂ ಓದಿ: ಕೀಬೋರ್ಡ್‌ನಲ್ಲಿ ಡಾಲರ್ ಬದಲು ರೂಪಿ ಚಿಹ್ನೆ ಯಾಕಿಲ್ಲ – ಓಲಾ ಸಿಇಒ ಪ್ರಶ್ನೆ