-ಖುಷಿ ಖುಷಿಯಾಗಿ ಪೋಸ್ ಕೊಟ್ಟ ಸಿದ್ದರಾಮಯ್ಯ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ಹೋದರೂ ಜನಪ್ರಿಯತೆ ಮಾತ್ರ ಕಮ್ಮಿ ಆಗಿಲ್ಲ. ಮಾಜಿ ಸಿಎಂ ಅವರು ಎಲ್ಲೇ ಹೋದರೂ ಸೆಲ್ಫಿಗಾಗಿ ಮುಗಿ ಬೀಳುವವರ ಸಂಖ್ಯೆ ಇನ್ನೂ ಕಮ್ಮಿಯಾಗಿಲ್ಲ. ಇದಕ್ಕೆ ಪೂರಕವೆಂಬಂತೆ ಇಂದು ನಡೆದ ಕಾರ್ಯಕ್ರಮವೊಂದರಲ್ಲಿ ಕೂಡ ಮಹಿಳೆಯರು ಸಿದ್ದರಾಮಯ್ಯ ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ದುಂಬಾಲು ಬಿದ್ದ ಘಟನೆ ನಡೆದಿದೆ.
ಹೌದು. ಇಂದು 70ನೇ ಗಣರಾಜ್ಯೋತ್ಸವ ಆಚರಣೆಯ ಅಂಗವಾಗಿ ಮಾಜಿ ಮುಖ್ಯಮಂತ್ರಿಗಳು ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಅಚ್ಚರಿ ಕಾದಿತ್ತು. ಸಮಾರಂಭಕ್ಕೆ ಬಂದ ಸಾವಿರಾರು ಕಾರ್ಯಕರ್ತೆಯರು ಮಾಜಿ ಸಿಎಂ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ತಡಕಾಡಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರು, ಅಲ್ಲೇ ಇದ್ದ ಒಬ್ಬರ ಕೆನ್ನೆ ಗಿಲ್ಲಿ ಹೌ ಆರ್ ಯೂ ಯಂಗ್ ಲೇಡಿ ಎಂದು ಹೇಳಿ ಮಹಿಳಾ ಕಾರ್ಯಕರ್ತೆಯರ ನಿರೀಕ್ಷೆಯನ್ನು ಹುಸಿ ಮಾಡದೇ ಅವರ ಜೊತೆಗಿನ ಸೆಲ್ಫಿಗೆ ಖುಷಿಯಿಂದಲೇ ಪೋಸ್ ಕೊಟ್ಟರು.
ಇದೇ ವೇಳೆ, ಬಿಜೆಪಿಯ ಆಪರೇಷನ್ ಕಮಲದ ಬಗ್ಗೆ ಪ್ರಸ್ತಾಪಿಸಿದ ಸಿದ್ದು, ಬಿಜೆಪಿಯವರು ಹಡಬಿಟ್ಟಿ ದುಡ್ಡು ಮಾಡಿಕೊಂಡು ನಮ್ಮ ಶಾಸಕರನ್ನು ಬನ್ನಿ ಬನ್ನಿ ಅನ್ನುತ್ತಿದ್ದಾರೆ ಎಂದು ಟೀಕಿಸಿದ್ರು.
ಸಿದ್ದಗಂಗಾ ಶ್ರೀಗಳ ಸೇವೆಯನ್ನು ಗುರುತಿಸಿ ಅವರಿಗೆ ಭಾರತ ರತ್ನ ಕೊಡಬೇಕೆಂದು ನಾನು ಅಧಿಕಾರಿದಲ್ಲಿದ್ದಾಗಲೇ ಶಿಫಾರಸ್ಸು ಮಾಡಿದ್ದೇನೆ. ಬೆಳಗ್ಗಿಂದ ಸಂಜೆಯವರೆಗೆ ಶ್ರೀಗಳ ಪ್ರಾರ್ಥಿವ ಶರೀರದ ಎದುರು ಕುಳಿತು ಗೌರವ ಸೂಚಿಸುವುದು ಮಾತ್ರವಲ್ಲ. ಅವರಿಗೆ ಭಾರತ ರತ್ನ ಕೊಟ್ಟರೆ ಅದರ ಮೌಲ್ಯ ಹೆಚ್ಚುತ್ತದೆ ಅಂತ ಸಿದ್ದರಾಮಯ್ಯ ಅವರು ಶ್ರೀಗಳಿಗೆ ಭಾರತ ರತ್ನ ನೀಡದ ವಿಚಾರಕ್ಕೆ ಸಂಬಂಧಿಸಿದಂತೆ ಬೇಸರ ಹೊರಹಾಕಿದ್ರು.
https://www.youtube.com/watch?v=lsGYrwDbOy4
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv