Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಿಗಮಗಳ ನಿರ್ದೇಶಕರು, ಸದಸ್ಯರ ಆಯ್ಕೆ; ಸಿಎಂ ವಹಿಸಿರುವ ಜವಾಬ್ದಾರಿ ನಿಭಾಯಿಸುವೆ: ಪರಮೇಶ್ವರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ನಿಗಮಗಳ ನಿರ್ದೇಶಕರು, ಸದಸ್ಯರ ಆಯ್ಕೆ; ಸಿಎಂ ವಹಿಸಿರುವ ಜವಾಬ್ದಾರಿ ನಿಭಾಯಿಸುವೆ: ಪರಮೇಶ್ವರ್

Bengaluru City

ನಿಗಮಗಳ ನಿರ್ದೇಶಕರು, ಸದಸ್ಯರ ಆಯ್ಕೆ; ಸಿಎಂ ವಹಿಸಿರುವ ಜವಾಬ್ದಾರಿ ನಿಭಾಯಿಸುವೆ: ಪರಮೇಶ್ವರ್

Public TV
Last updated: June 25, 2024 3:51 pm
Public TV
Share
4 Min Read
G PARAMESHWAR
SHARE

ಬೆಂಗಳೂರು: ನಿಗಮ ಮಂಡಳಿಗೆ (Corporation) ನಿರ್ದೇಶಕರು ಹಾಗೂ ಸದಸ್ಯರಗಳನ್ನು ಆಯ್ಕೆ ಮಾಡಲು ಮುಖ್ಯಮಂತ್ರಿಯವರು ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಅವರು ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟೂವರೆ ವರ್ಷ ಕೆಪಿಸಿಸಿ ಅಧ್ಯಕ್ಷನಾಗಿ ಕೆಲಸ ಮಾಡಿ, ಚುನಾವಣೆಗಳಿಗೆ ಅಭ್ಯರ್ಥಿಗಳ ಆಯ್ಕೆ ಮತ್ತು ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿದ ಅನುಭವವಿದೆ. ಆದ್ದರಿಂದ ಯಾವ ತೊಂದರೆಯಾಗುವುದಿಲ್ಲ. ಒಂದು ತಿಂಗಳೊಳಗಾಗಿ ಆಯ್ಕೆ ಮಾಡಿ, ಪಟ್ಟಿ ನೀಡುತ್ತೇನೆ ಎಂದರು. ಇದನ್ನೂ ಓದಿ: ಪುಣೆ ಪೋರ್ಶೆ ಕಾರು ಅಪಘಾತ ಪ್ರಕರಣದ ಅಪ್ರಾಪ್ತ ಆರೋಪಿಗೆ ಜಾಮೀನು

ತುರ್ತು ಪರಿಸ್ಥಿತಿಗೆ 49 ವರ್ಷ ಆದ ಹಿನ್ನೆಲೆಯಲ್ಲಿ ಬಿಜೆಪಿಯವರ ಹೇಳಿಕೆಗಳ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ದೇಶದಲ್ಲಿ ಜ್ವಲಂತ ಸಮಸ್ಯೆಗಳಿವೆ. ಜನರ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು. ದೇಶದಲ್ಲಿ ಬಡತನ ಇನ್ನೂ ಇದೆ. ಮತ್ತಷ್ಟು ಅಭಿವೃದ್ಧಿಯಾಗಬೇಕು. ಉದ್ಯೋಗ ಸಿಗಬೇಕಿದೆ. ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಳ್ಳಲು ನೀಟ್ ಸಂಸ್ಥೆಗಳನ್ನು ಮಾಡಿ ಸರಿಯಾಗಿ ಕೆಲಸ ಮಾಡದಿರುವುದು, ಮಕ್ಕಳ ಭವಿಷ್ಯ ಹಾಳು ಮಾಡುತ್ತಿರುವುದು ದೊಡ್ಡ ಸಮಸ್ಯೆಯಾಗಿದೆ. ಇದನ್ನೆಲ್ಲ ಬಿಟ್ಟು 49 ವರ್ಷದ ಹಿಂದೆ ತುರ್ತು ಪರಿಸ್ಥಿತಿ ಹೇರಿರುವುದನ್ನು ಮಾತನಾಡಲು ಹೊರಟಿರುವ ಬಿಜೆಪಿಯವರಿಗೆ ದೇಶದ ಅಭಿವೃದ್ಧಿ, ಭವಿಷ್ಯ, ಜನರ ಬಗ್ಗೆ ಕಾಳಜಿ ಇಲ್ಲದಿರುವುದನ್ನು ತೋರಿಸುತ್ತದೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ನೀರಿನ ಬೆಲೆಯೂ ಲೀಟರ್‌ಗೆ 25 ರೂ.‌ಆಗಿದೆ, ರೈತರಿಂದ ಒತ್ತಡವಿತ್ತು: ಡಿಕೆಶಿ ಸಮರ್ಥನೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳನ್ನು ತುಮಕೂರು ಜೈಲಿಗೆ ಸ್ಥಳಾಂತರಿಸಿದ ಕುರಿತು ಮಾತನಾಡಿ, ಎಲ್ಲರೂ ಒಂದೇ ಜೈಲಿನಲ್ಲಿ ಇರುವುದು ಸೂಕ್ತವಲ್ಲ ಎಂಬ ಕಾರಣದಿಂದ ಬಂಧಿಖಾನೆ ಅಧಿಕಾರಿಗಳು ಮತ್ತು ಪೊಲೀಸರು ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಹೀಗಾಗಿ ತುಮಕೂರು ಜೈಲಿಗೆ ಸ್ಥಳಾಂತರಿಸಿದ್ದಾರೆ ಎಂದರು. ಇದನ್ನೂ ಓದಿ: ಕಳೆದ ವರ್ಷ 3 ರೂ. ಈಗ 2 ರೂ. ಏರಿಕೆ – ರಾಜ್ಯ ಸರ್ಕಾರದ ವಿರುದ್ಧ ಕೇಸರಿ ಕಲಿಗಳು ಕೆಂಡಾಮಂಡಲ

ಯುವತಿ ಪ್ರಬುದ್ಧಾ ಕೊಲೆ ಪ್ರಕರಣ ಸಿಐಡಿಗೆ ವಹಿಸಿರುವ ಕುರಿತು ಮಾತನಾಡಿ, ಈವರೆಗಿನ ತನಿಖೆ ಕೊಲೆಯಾದ ಯುವತಿಯ ಪಾಲಕರಿಗೆ ಸಮಾಧಾನ ತಂದಿಲ್ಲ. ಸಿಐಡಿಗೆ ವಹಿಸುವಂತೆ ಕೋರಿ ನನಗೂ ಮನವಿ ಮಾಡಿದ್ದರು. ಸಿಎಂ ಜೊತೆ ಚರ್ಚಿಸಿ, ನಿರ್ಧಾರ ಮಾಡುವುದಾಗಿ ಭರವಸೆ ನೀಡಿದ್ದೆ. ನಿನ್ನೆ ಮುಖ್ಯಮಂತ್ರಿಯವರು ಸಿಐಡಿಗೆ ವಹಿಸಿದ್ದಾರೆ ಎಂದರು. ಇದನ್ನೂ ಓದಿ: ಬೆಂಗಳೂರು ಕೋರ್ಟ್‌ಗೆ ಉದಯನಿಧಿ ಸ್ಟಾಲಿನ್‍ ಹಾಜರು- ಬಿಗ್ ರಿಲೀಫ್

ತನಿಖೆಯಲ್ಲಿ ಲೋಪ ಇರುವುದು ಗಮನಕ್ಕೆ ಬಂದಿದೆಯೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ರೀತಿ ಯುವತಿಯ ತಾಯಿಗೆ ಅನ್ನಿಸಿದೆ. ಮಗಳನ್ನು ಕಳೆದುಕೊಂಡಾಗ ಆ ಅಭಿಪ್ರಾಯ ಬರುವುದು ಸಹಜ. ಅಂತಹ ಅಭಿಪ್ರಾಯ ಮೂಡುವುದು ಬೇಡ ಎಂಬ ಕಾರಣದಿಂದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಕುಟುಂಬಕ್ಕೆ ಬೆದರಿಕೆ ಇರುವುದನ್ನು ಸಿಐಡಿ ತನಿಖೆಯಲ್ಲಿ ನೋಡಿಕೊಳ್ಳಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಪವಿತ್ರಾಗೌಡ ಬಂಧನವಾದಾಗ ವಿಚಾರಣೆ ತಂಡದಲ್ಲಿದ್ದ ಮಹಿಳಾ ಪಿಎಸ್‌ಐಗೆ ನೋಟಿಸ್

ನೀಟ್ ಅಕ್ರಮದ ಬಗ್ಗೆ ನರೇಂದ್ರ ಮೋದಿಯವರು ಮೌನ ವಹಿಸಿರುವ ಕುರಿತು ಮಾತನಾಡಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ಧ್ವನಿ ಎತ್ತಿದ್ದಾರೆ. ದೇಶದಲ್ಲಿ ಮಕ್ಕಳ ಭವಿಷ್ಯ ಹಾಳಾಗುತ್ತಿದೆ ಎಂಬುದನ್ನು ಹೇಳಿದ್ದಾರೆ. ಆದರೆ, ಪ್ರಪ್ರಧಾನಿ ಮೋದಿಯವರಿಗೆ ಈ ಬಗ್ಗೆ ಏನು ಅನ್ನಿಸಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಏನಾದರೂ ಅಂತಿಮ ನಿರ್ಧಾರ ಕೈಗೊಳ್ಳಬೇಕಲ್ಲವೇ? ಮರುಪರೀಕ್ಷೆ ನಡೆಸುವುದು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕಲ್ಲವೇ? ಇದೆಲ್ಲವನ್ನು ಪ್ರಧಾನ ಮಂತ್ರಿಯವರಾಗಲಿ ಅಥವಾ ಸಂಬಂಧಪಟ್ಟ ಮಂತ್ರಿಗಳಾಗಲಿ ಜವಾಬ್ದಾರಿಯುತವಾಗಿ ತೀರ್ಮಾನ ಪ್ರಕಟಿಸಬೇಕು. ಎಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಿಗೆ ಪ್ರವೇಶ ಆರಂಭವಾಗಬೇಕಿತ್ತು. ಮಕ್ಕಳು ಗೊಂದಲದಲ್ಲಿದ್ದು, ಇದರಿಂದ ಅವರ ಭವಿಷ್ಯ ಏನಾಗಬೇಕು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಭಾರೀ ಮಳೆಗೆ ಸೋರಿದ ರಾಮಮಂದಿರ ಗರ್ಭಗುಡಿ; ನಿರ್ಮಾಣ ಕಾರ್ಯದಲ್ಲಿ ಲೋಪ – ಪ್ರಧಾನ ಅರ್ಚಕ ಆರೋಪ

ಶಿಕ್ಷಣ ಕ್ಷೇತ್ರದಲ್ಲಿ ನಾನು ಕೆಲಸ ಮಾಡಿರುವುದರಿಂದ ನೀಟ್‌ನ ಸಾಧಕ-ಬಾಧಕಗಳ ಬಗ್ಗೆ ಗೊತ್ತಿದೆ. ಜಡ್ಜ್ಮೆಂಟ್ ಏನಾಯಿತು? 11 ನ್ಯಾಯಾಧೀಶರ ಜಡ್ಜ್ಮೆಂಟ್ ಬದಿಗೊತ್ತಿ ನೀಟ್ ಮಾಡಿದ್ದಾರೆ. ಅವರು ಮಾಡುವುದಕ್ಕೆ ನಮ್ಮದೇನು ತಕರಾರು ಇಲ್ಲ. ಮಕ್ಕಳಿಗೆ ಸರಿಯಾಗಿ, ಸುಲಭವಾಗಿ ಸೀಟು ಸಿಗುವ ರೀತಿಯಲ್ಲಿ ಮಾಡಬೇಕಲ್ಲವೇ? ರಾಜ್ಯ ಸರ್ಕಾರ ಮಾಡಿದ್ದ ಸಿಇಟಿ ಪರೀಕ್ಷೆ ಮಾದರಿಯಾಗಿತ್ತು. ರಾಜ್ಯ ಸರ್ಕಾರಗಳಿಗೆ ವಹಿಸಿದರೆ ಯಶಸ್ವಿಯಾಗಿ ನಡೆಸುತ್ತಾರೆ. ಇದನ್ನು ವ್ಯವಸ್ಥಿತವಾಗಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹಾಲಿನ ದರ ಏರಿಕೆ ಬಗ್ಗೆ ನನಗೆ ಗೊತ್ತಿಲ್ಲ: ಸಿಎಂ ಸಿದ್ದರಾಮಯ್ಯ

ಹಿರಿಯ ಶಾಸಕರಿಗೆ ಸ್ಥಾನಕ್ಕೆ ಒತ್ತಾಯದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಂಪುಟ ಪುನರ್‌ರಚನೆ ಬಗ್ಗೆ ನಾನು ಏನು ಹೇಳಲು ಹೋಗುವುದಿಲ್ಲ. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ಎಲ್ಲವೂ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದರು. ಇದನ್ನೂ ಓದಿ: ಲೋಕಸಭೆಯ ಸ್ಪೀಕರ್‌ ಚುನಾವಣೆ – ಎನ್‌ಡಿಎ ಓಂ ಬಿರ್ಲಾ v/s ಇಂಡಿಯಾ ಒಕ್ಕೂಟದ ಸುರೇಶ್‌ ಮಧ್ಯೆ ಫೈಟ್‌

ತುಮಕೂರು ಬಂದ್ ಕುರಿತು ಪ್ರತಿಕ್ರಿಯಿಸಿ, ಹೇಮಾವತಿ ಕ್ಯಾನಲ್ ಸಂಬಂಧಿಸಿದಂತೆ ನೀರಾವರಿ ಸಚಿವರಾದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಸಭೆ ನಡೆಸಿದ್ದರು. ನೀರಾವರಿ ತಜ್ಞರೊಂದಿಗೆ ಚರ್ಚಿಸಿ ವಿಚಾರ ತಿಳಿಸಲಾಗಿತ್ತು. ನೀರಿನ ಹಂಚಿಕೆಯಲ್ಲಿ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಸಭೆಯಲ್ಲಿ ಡಿಸಿಎಂ ಅವರು ಭರವಸೆ ನೀಡಿದ್ದರು. ಆಗ ಎಲ್ಲರು ಒಪ್ಪಿಕೊಂಡಿದ್ದು, ತೊಂದರೆಯಾಗುವುದಿಲ್ಲವಾದರೆ ನೀರು ತೆಗೆದುಕೊಂಡು ಹೋಗುವಂತೆ ಎಲ್ಲ ಶಾಸಕರು ತಿಳಿಸಿದ್ದರು. ಈಗ ಪ್ರತಿಭಟನೆ ಮಾರ್ಗವನ್ನು ಹಿಡಿದಿದ್ದಾರೆ. ಈ ಬಗ್ಗೆ ಮುಂದೆ ಏನು ತೀರ್ಮಾನ ತೆಗೆದುಕೊಳ್ಳಬೇಕು ಎಂಬುದನ್ನು ಉಪಮುಖ್ಯಮಂತ್ರಿಯವರೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಯಾವುದೇ ಕ್ಷಣದಲ್ಲಾದ್ರೂ ಪ್ರೀತಂ ಗೌಡಗೆ ಎಸ್‍ಐಟಿಯಿಂದ ನೊಟೀಸ್

TAGGED:bengalurucongresscorporationG Parameshwarsiddaramaiahಜಿ.ಪರಮೇಶ್ವರ್ನಿಗಮ ಮಂಡಳಿಬೆಂಗಳೂರುಸಿದ್ದರಾಮಯ್ಯ
Share This Article
Facebook Whatsapp Whatsapp Telegram

Cinema news

ravichandran bigg boss
ಬಿಗ್‌ ಬಾಸ್‌ ಮನೆಗೆ ಕ್ರೇಜಿಸ್ಟಾರ್‌ ಎಂಟ್ರಿ – ತನ್ನ ಹೃದಯ ಕದ್ದ ಚೆಲುವೆ ಬಗ್ಗೆ ಮಾತಾಡಿದ ರವಿಚಂದ್ರನ್‌
Cinema Latest Top Stories TV Shows
Nidhhi Agerwal 3
Video Viral | ಸೆಲ್ಫಿಗಾಗಿ ಮೈಮೇಲೆ ಮುಗಿಬಿದ್ದ ಫ್ಯಾನ್ಸ್ – ನಟಿ ನಿಧಿ ಅಗರ್ವಾಲ್‌ಗೆ ಭಾರೀ ಕಸಿವಿಸಿ
Cinema Latest South cinema Top Stories
Venkat Bharadwaj
ಅಪರೂಪದ ಸಾಹಸಕ್ಕೆ ಸಾಕ್ಷಿಯಾದ ನಿರ್ದೇಶಕ ವೆಂಕಟ್ ಭಾರದ್ವಾಜ್
Cinema Latest Sandalwood Top Stories
film producer harshavardhan
ಪತ್ನಿಯನ್ನೇ ಕಿಡ್ನ್ಯಾಪ್‌ ಮಾಡಿದ್ದ ಸಿನಿಮಾ ನಿರ್ಮಾಪಕ; ಕಳ್ಳತನ ಕೇಸಲ್ಲಿ ಅರೆಸ್ಟ್
Cinema Latest Main Post Sandalwood Uttara Kannada

You Might Also Like

Work begins on replacing Tungabhadra Dam crest gate
Bellary

ಟಿಬಿ ಡ್ಯಾಂ ಗೇಟ್‌ ಬದಲಿಸುವ ಕಾರ್ಯ ಆರಂಭ – ಆಳಕ್ಕೆ ಇಳಿದು, ಜೋತಾಡಿ ಗೇಟ್ ತೆರವು

Public TV
By Public TV
4 minutes ago
TVK Vijay
Latest

DMK “ದುಷ್ಟ ಶಕ್ತಿ”, TVK “ಶುದ್ಧ, ನಿರ್ಮಲ ಶಕ್ತಿ” – ಕರೂರು ಕಾಲ್ತುಳಿತ ಬಳಿಕ ಮೊದಲ ರಾಜಕೀಯ ಸಮಾವೇಶದಲ್ಲಿ ವಿಜಯ್ ವಾಗ್ದಾಳಿ

Public TV
By Public TV
19 minutes ago
Madikeri
Crime

ಕೊಡಗು | ತೇಗದ ಮರ ಕಡಿದು ಅಕ್ರಮ ಸಾಗಾಟ – ಓರ್ವ ಅರೆಸ್ಟ್‌, ಐವರು ಎಸ್ಕೇಪ್‌

Public TV
By Public TV
27 minutes ago
Vatal Nagaraj
Districts

ಸಿಎಂ ಸ್ಥಾನದಿಂದ ಇಳಿಸಿದ್ರೆ ರಾಜ್ಯದಲ್ಲಿ ದೊಡ್ಡ ಮಟ್ಟದ ಹೋರಾಟ: ವಾಟಾಳ್‌

Public TV
By Public TV
30 minutes ago
d.k.shivakumar jagadeeshwari temple
Latest

ಕಾರವಾರ| ಇಷ್ಟಾರ್ಥ ಸಿದ್ಧಿಗಾಗಿ ಅಂದ್ಲೆ ಜಗದೀಶ್ವರಿ ದೇವಿ ಮೊರೆ ಹೋದ ಡಿಸಿಎಂ

Public TV
By Public TV
42 minutes ago
Chitta Reserved Forest
Bidar

ಚಿಟ್ಟಾ ಅರಣ್ಯ ಪ್ರದೇಶದಲ್ಲಿ ಅಗ್ನಿ ಅವಘಡ – ಪ್ರಾಣಿ ಪಕ್ಷಿಗಳಿಗೆ ಕಂಟಕ

Public TV
By Public TV
43 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?