ಬೆಂಗಳೂರು: ಇನ್ನು ಮುಂದೆ ಆಯ್ದ ಸಬ್‌ರಿಜಿಸ್ಟ್ರಾರ್ (Sub Registrar Office) ಕಚೇರಿಗಳು ಭಾನುವಾರ (Sunday) ಕೂಡ ಸೇವೆ ನೀಡಲಿವೆ. ಬೆಂಗಳೂರಿನಲ್ಲಿ (Bengaluru) ಪ್ರಾಯೋಗಿಕವಾಗಿ ಪ್ರಾರಂಭ ಮಾಡಲಾಗಿದೆ.
ಮುಂದೆ ಒಂದೊಂದು ಜಿಲ್ಲೆಯಲ್ಲಿ ಭಾನುವಾರ ಒಂದೊಂದು ಸಬ್ ರಿಜಿಸ್ಟ್ರಾರ್ ಕಚೇರಿ ಪ್ರಾರಂಭ ಮಾಡುತ್ತೇವೆ. ಮುಂದೆ ರಾಜ್ಯದ ಎಲ್ಲೆಡೆ ಈ ಸೇವೆಯನ್ನು ವಿಸ್ತರಣೆ ಮಾಡುತ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byregowda) ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಅಟ್ಟಾಡಿಸಿ ಹೊಡೆದು, ನೇಣು ಬಿಗಿದು ಹತ್ಯೆ
Advertisement
Advertisement
ಬುಧವಾರದಿಂದ ಆಟೋ ಮ್ಯುಟೇಷನ್ ವ್ಯವಸ್ಥೆ ಜಾರಿ ಆಗಲಿದೆ. ವಿಲ್, ಸೇಲ್ ಡೀಡ್, ಗಿಫ್ಟ್ ಡೀಡ್, ಪಾರ್ಟನರ್ ಶಿಪ್‌ಡೀಡ್, ಕೋರ್ಟ್ ಕೇಸ್ ಸೇರಿ 5-6 ಮ್ಯೂಟೇಷನ್ ಮಾತ್ರ ಆಟೋಮಿಟಿಕ್ ಆಗಿ ಬದಲಾಗುವುದಿಲ್ಲ.
Advertisement
ನನ್ನ ಆಸ್ತಿ ಯೋಜನೆಯಡಿ ಆರ್‌ಟಿಸಿಗೆ (RTC) ಆಧಾರ್ ಜೋಡಣೆ (Aadhaar Link) ಮಾಡುವ ಪ್ರಕ್ರಿಯೆ ಶುರು ಮಾಡುತ್ತಿದ್ದೇವೆ. ಇನ್ನು ಮುಂದೆ ಆಸ್ತಿ ನೋಂದಣಿ ಮಾಡುವ ವೇಳೆ ಆಧಾರ್ ಲಿಂಕ್ ಮಾಡುವ ಸೇವೆ ಪ್ರಾರಂಭ ಮಾಡ್ತಿದ್ದೇವೆ ಎಂದು ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಇದನ್ನೂ ಓದಿ: ಕಲಬುರಗಿ-ಬೆಂಗಳೂರು, ಮೈಸೂರು-ಚೆನ್ನೈ ಸೇರಿ 10 ಮಾರ್ಗಗಳ ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ