ಗದಗ: ಸಾರಿಗೆ ಅಧಿಕಾರಿಗಳ ನೋಟಿಸ್‍ಗೆ ಕ್ಯಾರೆ ಎನ್ನದೇ ಹೋದ್ರೆ ಅಂತಹ ವಿಚಾರಕ್ಕೆ ಶ್ರೀರಾಮುಲು (Sriramulu) ಜಗ್ಗಲ್ಲ. ಕಾನೂನು ಬಾಹಿರ ಕೆಲಸ ಮಾಡಿದ್ರೆ ಸಹಿಸುವುದಿಲ್ಲ. ಯಾರೇ ಆದ್ರೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಅವಕಾಶ ಸಿಕ್ಕರೆ ಸರ್ಕಾರದಿಂದಲೇ ಆ್ಯಪ್ ಮಾಡಿ ಆಟೋ (Auto) ಸೇವೆಗೆ ಅವಕಾಶ ಮಾಡಿಕೊಡುವುದಾಗಿ ಸಾರಿಗೆ ಸಚಿವ ಬಿ. ಶ್ರೀರಾಮುಲು ಸ್ಪಷ್ಟಪಡಿಸಿದ್ದಾರೆ.
Advertisement
ನಗರದ ನಿವಾಸದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, 2021 ಮಾರ್ಚ್‍ನಲ್ಲಿ ಓಲಾ (Ola), ಉಬರ್ (Uber) ಲೈಸೆನ್ಸ್ ಅವಧಿ ಮುಗಿದಿದೆ. ಅವಧಿ ಮುಗಿದ್ರು ಓಲಾ, ಉಬರ್ ಆ್ಯಪ್ ಮುಂದುವರಿದಿವೆ. ಈ ಬಗ್ಗೆ ಹೆಚ್ಚಿನ ನಿಗಾ ವಹಿಸಿ ಕೆಲಸ ಮಾಡುತ್ತಿದ್ದೇನೆ. ಅವಧಿ ಮುಗಿದ್ರೂ ಗಾಡಿ ಓಡಾಡಿದ್ರೆ ಸೀಜ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಓಲಾ, ಉಬರ್ ಕಂಪನಿಗಳಿಗೆ ದಂಡ ಪ್ರಯೋಗ ಹೇಗಿರಲಿದೆ?
Advertisement
Advertisement
ಅವಧಿ ಮುಗಿದ್ರೂ, ಜನರಿಗೆ ತೊಂದರೆ ಆಗಬಾರದು ಅಂತ ಮಾನವೀಯತೆ ದೃಷ್ಟಿಯಿಂದ ಸುಮ್ಮನಿದ್ದೆ. ಹೀಗೆ ಮುಂದುವರೆದ್ರೆ ಕಠಿಣ ಕ್ರಮ ಜರುಗಿಸುತ್ತೇನೆ. ಅವಕಾಶ ಸಿಕ್ರೆ ಸರ್ಕಾರದಿಂದ ಆ್ಯಪ್ ಮಾಡಿ ಕೊಡುತ್ತೇವೆ. ಓಲಾ, ಉಬರ್‌ಗೆ ಸಾರಿಗೆ ಅಧಿಕಾರಿಗಳು 3 ಬಾರಿ ನೋಟಿಸ್ ಕೊಡಲಾಗಿದೆ. ನೋಟಿಸ್‌ಗೆ ಕ್ಲಾರಿಫಿಕೇಷನ್ ಕೊಡಬೇಕಿತ್ತು. ಲೈಸನ್ಸ್ ಕೊಡುವ ವೇಳೆ ಓಲಾ, ಉಬರ್‌ಗೆ ಕಂಡೀಷನ್ ಮಾಡಲಾಗಿತ್ತು. ಆಟೋ ಪರವಾನಿಗೆ ಇಲ್ಲದೇ ಓಲಾ, ಉಬರ್ ಓಡಿಸುತ್ತಿದ್ರು. ಸರ್ಕಾರಕ್ಕೆ ಗೊಂದಲ ಮೂಡಿಸುತ್ತಿದ್ದಾರೆ. ಹೀಗಾಗಿ ಓಲಾ, ಉಬರ್ ಆ್ಯಪ್‍ಗೆ ಮಾತ್ರ ತಡೆ ಇಡಲಾಗಿದೆ. ಬೇರೆ ಬೇರೆ ಟ್ಯಾಕ್ಸಿ, ಆಟೋಗಳು ಓಡಾಡಬಹುದು. ಸಮಸ್ಯೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು. ಈ ವೇಳೆ ನಗರಸಭೆ ಅಧ್ಯಕ್ಷೆ ಉಷಾ ದಾಸರ್, ಬಿಜೆಪಿ ಮುಖಂಡರಾದ ರಾಜು ಕುರುಡಗಿ, ಶ್ರೀಪತಿ ಉಡುಪಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಪೊಲೀಸ್ ಮನೆಗೇ ನುಗ್ಗಲು ಯತ್ನಿಸಿ, ಸಿಕ್ಕಿ ಬಿದ್ದು ಒದೆ ತಿಂದ ಕಳ್ಳರು