ನವದೆಹಲಿ: ಸೇನಾ ಲಾಂಛನ ಇರುವ ಕೀಪಿಂಗ್ ಗ್ಲೌಸನ್ನು ಧೋನಿ ಬಳಕೆ ಮಾಡಿದ ವಿವಾದ್ದಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರು ಧೋನಿಗೆ ಸಲಹೆ ನೀಡಿದ್ದಾರೆ.
ಸದ್ಯ ಗ್ಲೌಸ್ ಮೇಲೆ ಸೇನಾ ಲಾಂಛನ ಬಳಸಲು ಐಸಿಸಿ ನಿಯಮಗಳನ್ನು ಮುಂದಿಟ್ಟು ಅವಕಾಶವನ್ನು ನಿರಾಕರಿಸಿದೆ. ಆದರೆ ಈ ಸೇನಾ ಲಾಂಛನವನ್ನು ಗ್ಲೌಸ್ ಬದಲಾಗಿ ಬ್ಯಾಟ್ ಮೇಲೆ ಬಳಸಿದರೆ ಯಾವುದೇ ನಿಯಮ ಉಲ್ಲಂಘನೆ ಆಗಲ್ಲ ಎಂದಿದ್ದಾರೆ.
Advertisement
Advertisement
ವಿವಾದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮನವಿ ತಿರಸ್ಕರಿಸಿದ್ದ ಐಸಿಸಿ, ಯಾವುದೇ ತಂಡದ ಆಟಗಾರರ ಗ್ಲೌಸ್ ಮೇಲೆ 2 ಚಿಹ್ನೆ ಬಳಸಲು ಅವಕಾಶ ಇಲ್ಲ. ಈಗಾಗಲೇ ಧೋನಿ ವಾಣಿಜ್ಯ ಚಿಹ್ನೆಯೊಂದನ್ನು ಬಳಕೆ ಮಾಡುತ್ತಿದ್ದಾರೆ. ಆದ್ದರಿಂದ 2ನೇ ಚಿಹ್ನೆ ಬಳಸಲು ಅವಕಾಶ ಇಲ್ಲ ಎಂದು ಸ್ಪಷ್ಟನೆ ನೀಡಿತ್ತು.
Advertisement
ಐಸಿಸಿ ತನ್ನ ನಿಯಮಗಳ ಪರ ಸರಿಯಾಗಿದ್ದು, ಧೋನಿ ಅವರು ಕೂಡ ತಮ್ಮ ಕಡೆಯಿಂದ ಸರಿ ಇದ್ದಾರೆ. ಆದರೆ ಈ ಸಮಸ್ಯೆಗೆ ಪರಿಹಾರ ಎಂದರೆ ಮೊದಲು ಲಿಖಿತವಾಗಿ ಬ್ಯಾಟ್ ಮೇಲೆ ಸೇನಾ ಲಾಂಛನ ಬಳಸಲು ಐಸಿಸಿಯಿಂದ ಅವಕಾಶ ಪಡೆದುಕೊಂಡು ಬಳಕೆ ಮಾಡಬಹುದು ಎಂದಿದ್ದಾರೆ. ಈ ಮೂಲಕ ತಮ್ಮದೇ ಶೈಲಿಯಲ್ಲಿ ಸೆಹ್ವಾಗ್ ಸಮಸ್ಯೆಗೆ ಸಲಹೆ ನೀಡಿದ್ದಾರೆ.
Advertisement
ಬ್ಯಾಟ್ ಮೇಲೆ 2 ಚಿಹ್ನೆ ಬಳಸಲು ಅವಕಾಶ ಇದ್ದು, ಒಂದು ಬ್ಯಾಟ್ ತಯಾರಕರು ಹಾಗೂ 2ನೇ ಚಿಹ್ನೆ ಬೇರೆ ಸಂಸ್ಥೆಯದ್ದು ಬಳಸಲು ಅವಕಾಶ ಇದೆ. ನಾನು ಕೂಡ ಐಸಿಸಿಯಿಂದ ಅನುಮತಿ ಪಡೆದು 2 ಲೋಗೋ ಬಳಸಿ ಹಲವು ಪಂದ್ಯಗಳನ್ನು ಆಡಿದ್ದೆ ಎಂದಿದ್ದಾರೆ. 40 ವರ್ಷದ ಸೆಹ್ವಾಗ್, ಧೋನಿಗೆ ಸಲಹೆ ನೀಡಿರುವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
My views on the controversy surrounding Dhoni’s Balidaan badge on my You Tube channelhttps://t.co/inhS9HQAT1
— Virender Sehwag (@virendersehwag) June 8, 2019
ದಕ್ಷಿಣ ಆಫಿಕಾ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ ತಮ್ಮ ಕೀಪಿಂಗ್ ಗ್ಲೌಸ್ ಮೇಲೆ ಸೇನಾ ಲಾಂಛನವನ್ನು ಬಳಕೆ ಮಾಡಿದ್ದರು. ಧೋನಿ ಅವರು ಸೈನಿಕರ ಮೇಲೆ ಹೊಂದಿರುವ ಪ್ರೀತಿ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಈ ಕುರಿತು ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ಕೇಳಿ ಬಂದಿತ್ತು. ಪರಿಣಾಮ ಐಸಿಸಿ, ಬಿಸಿಸಿಐಗೆ ಧೋನಿ ಗ್ಲೌಸ್ ಮೇಲಿನ ಚಿಹ್ನೆ ತೆಗೆಯುವಂತೆ ಸೂಚನೆ ನೀಡಿತ್ತು. ಆ ಬಳಿಕ ಬಿಸಿಸಿಐ ಪತ್ರದ ಮೂಲಕ ವಿಶೇಷ ಮನವಿ ಮಾಡಿದ ಬಳಿಕವೂ ನಿಯಮಗಳ ಕಾರಣ ನೀಡಿ ಧೋನಿ ಆ ಗ್ಲೌಸ್ ಧರಿಸಲು ಅವಕಾಶ ಇಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿತ್ತು.