‘ಸೀತಾರಾಮಂ’ ನಟಿ ಮೃಣಾಲ್ ಠಾಕೂರ್ (Mrunal Thakur) ಇದೀಗ ಬಂಪರ್ ಅವಕಾಶಗಳು ಅರಸಿ ಬರುತ್ತಿವೆ. ಟಾಪ್ ನಟಿಯರಿಗೆ ಠಕ್ಕರ್ ಕೊಟ್ಟು ಮೃಣಾಲ್ ಸ್ಟಾರ್ ನಟನ ಸಿನಿಮಾಗೆ ಆಯ್ಕೆಯಾಗಿದ್ದಾರೆ. ಬಹುನಿರೀಕ್ಷಿತ ಸನ್ ಆಫ್ ಸರ್ದಾರ್ 2 ಚಿತ್ರದಲ್ಲಿ ಹೀರೋಯಿನ್ ಆಗಿದ್ದಾರೆ.
ಅಜಯ್ ದೇವಗನ್ (Ajay Devgn), ಸಂಜಯ್ ದತ್ (Sanjay Dutt) ನಟನೆಯ ‘ಸನ್ ಆಫ್ ಸರ್ದಾರ್ ಪಾರ್ಟ್ 2’ನಲ್ಲಿ ಮೃಣಾಲ್ ಲೀಡ್ ರೋಲ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದು, ನಟನೆಗೆ ಸ್ಕೋಪ್ ಇದೆ. 2012ರಲ್ಲಿ ‘ಸನ್ ಆಫ್ ಸರ್ದಾರ್’ ಎಂಬ ಸಿನಿಮಾ ಬಂದಿತ್ತು. ಇದರ ಸೀಕ್ವೆಲ್ ತರಲು ತಂಡ ಈಗ ಪ್ಲ್ಯಾನ್ ಮಾಡಿದೆ. ಸದ್ಯದಲ್ಲೇ ವಿದೇಶದಲ್ಲಿ ಶೂಟಿಂಗ್ ಶುರುವಾಗಲಿದೆ. ಇದನ್ನೂ ಓದಿ:ಒಂದೇ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ರಮೇಶ್ ಅರವಿಂದ್
ಅಂದಹಾಗೆ, ಜೂನ್ 27ರಂದು ತೆರೆಕಂಡ ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ಮೃಣಾಲ್ ನಟಿಸಿದ್ದಾರೆ. ಅತಿಥಿ ಪಾತ್ರವಾಗಿದ್ರೂ ಕೆಲವೇ ನಿಮಿಷ ನಟಿಸಿದರು ಕೂಡ ಮೃಣಾಲ್ ನಟನೆಯ ಮೆಚ್ಚುಗೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಬಾಲಿವುಡ್‌ನಲ್ಲಿ ನಟಿ ಬಂಪರ್ ಆಫರ್ ಗಿಟ್ಟಿಸಿಕೊಂಡಿರೋದು ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಇದೊಂದೇ ಸಿನಿಮಾ ಅಲ್ಲ, ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಸಿನಿಮಾ ಸೇರಿದಂತೆ ತೆಲುಗಿನಲ್ಲೂ ಸ್ಟಾರ್ ನಟರ ಜೊತೆ ಡ್ಯುಯೆಟ್ ಹಾಡುವ ಚಾನ್ಸ್ ನಟಿಗೆ ಸಿಕ್ಕಿದೆ.