ಸೌತ್ ಬ್ಯೂಟಿ ಮೃಣಾಲ್ ಠಾಕೂರ್ (Mrunal Thakur) ಅವರು ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ಡೇಟಿಂಗ್ ವಿಷ್ಯವಾಗಿಯೇ ಹೆಚ್ಚೆಚ್ಚು ಸುದ್ದಿಯಲ್ಲಿದ್ದಾರೆ. ರ‍್ಯಾಪರ್ ಬಾದಶಾ (Rapper Badshash) ಜೊತೆ ಮೃಣಾಲ್ ಕದ್ದು ಮುಚ್ಚಿ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಇದೀಗ ಗಾಸಿಪ್ ಪ್ರಿಯರ ಚರ್ಚೆಗೆ ಕಾರಣವಾಗಿದೆ.

ಆಗ ಮೃಣಾಲ್ ಜೊತೆ ರ‍್ಯಾಪರ್ ಬಾದಶಾ ಕೂಡ ಆಗಮಿಸಿದ್ದರು. ಶಿಲ್ಪಾ ಮನೆಯ ಹಬ್ಬದ ಸಂಭ್ರಮದಲ್ಲಿ ಭಾಗಿಯಾದ ನಂತರ ಪಾರ್ಟಿ ಮುಗಿಸಿ ತೆರಳುವಾಗ ಇಬ್ಬರು ಪರಸ್ಪರ ಕೈ ಹಿಡಿದುಕೊಂಡು ಓಡಾಡಿದ್ದಾರೆ. ಈ ಬೆನ್ನಲ್ಲೇ ಇಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಎಂದೇ ಸುದ್ದಿ ಹಬ್ಬಿದೆ. ಇದನ್ನೂ ಓದಿ:ಬಾತ್ ಟಬ್ ನಲ್ಲಿ ಸಮಂತಾ: ಹಾಟ್ ಮಗಾ ಹಾಟ್ ಅಂತಿದ್ದಾರೆ ಫ್ಯಾನ್ಸ್
ಶಿಲ್ಪಾ ಶೆಟ್ಟಿ (Shilpa Shetty) ಜೊತೆಯಿರುವ ಬಾದಶಾ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ನಟಿ ಮೃಣಾಲ್ ಶೇರ್ ಮಾಡಿದ್ದಾರೆ. ಈ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ? ಎಂಬುದನ್ನ ಕಾದುನೋಡಬೇಕಿದೆ.


