‘ಸೀತಾ ರಾಮ’, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ಮೂಲಕ ಮನಗೆದ್ದಿರುವ ನಟಿ ಮೇಘನಾ ಶಂಕರಪ್ಪ (Meghana Shankarappa) ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಭಾವಿ ಪತಿ ಜಯಂತ್ (Jayanth) ಜೊತೆಗಿನ ಫೋಟೋ ಹಂಚಿಕೊಂಡು ಎಂಗೇಜ್ ಆಗಿರೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ವದಂತಿಗೆ ಫುಲ್ ಸ್ಟಾಪ್- ಜೊತೆಯಾಗಿ ಕಾಣಿಸಿಕೊಂಡ ಅಭಿಷೇಕ್, ಐಶ್ವರ್ಯಾ ರೈ
ಸದ್ಯದಲ್ಲೇ ನಟಿ ಹಸೆಮಣೆ ಏರೋದಕ್ಕೆ ರೆಡಿಯಾಗಿದ್ದಾರೆ. ಭಾವಿ ಪತಿ ಜೊತೆಗಿನ ವಿಶೇಷ ವಿಡಿಯೋ ಹಂಚಿಕೊಂಡು ಫ್ಯಾನ್ಸ್‌ಗೆ ಪರಿಚಯಿಸಿದ್ದಾರೆ. ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಸಿನಿಮಾ ಸ್ಟೈಲಿನಲ್ಲಿ ಭಾವಿ ಪತಿಯನ್ನು ನಟಿ ಪರಿಚಯಿಸಿದ್ದಾರೆ. ರೆಸ್ಟೋರೆಂಟ್‌ವೊಂದರಲ್ಲಿ ಕಾಫಿ ಕುಡಿಯಲು ಬಂದು ಆ ನಂತರ ಪಾರ್ಟ್ನರ್ ಮುಖವನ್ನು ನಟಿ ರಿವೀಲ್ ಮಾಡಿದ್ದಾರೆ.
View this post on Instagram
ಇನ್ನೂ ಈ ಹಿಂದೆ ನಮ್ಮನೆ ಯುವರಾಣಿ, ಕಿನ್ನರಿ, ರತ್ನಗಿರಿ ರಹಸ್ಯ, ಸಿಂಧೂರ, ಕೃಷ್ಣ ತುಳಸಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಅವರು ನಟಿಸಿದ್ದಾರೆ. ಪ್ರಸ್ತುತ ಸೀತಾ ರಾಮ ಧಾರಾವಾಹಿಯಲ್ಲಿ ನಾಯಕಿ ಸೀತಾ ಫ್ರೆಂಡ್ ಪ್ರಿಯಾ ಪಾತ್ರದ ಮೂಲಕ ಮೇಘನಾ ಎಲ್ಲರ ಮನ ಗೆದ್ದಿದ್ದಾರೆ.