ಬೆಂಗಳೂರು: ನೃತ್ಯ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದವರು ಎ ಹರ್ಷ. ನೃತ್ಯ ನಿರ್ದೇಶಕರಾಗಿ ಬಹು ಬೇಡಿಕೆಯಲ್ಲಿರುವಾಗಲೇ ನಿರ್ದೇಶನಕ್ಕಿಳಿದಿದ್ದ ಹರ್ಷ ಅವರದ್ದು ನಿಜಕ್ಕೂ ಕಲರ್ ಫುಲ್ ಜರ್ನಿ. ಯುವ ಆವೇಗದ ಕಥಾ ಹಂದರದಿಂದಲೇ ಗೆಲ್ಲುತ್ತಾ ಬಂದಿರೋ ಹರ್ಷ ಪಾಲಿಗೆ ನಿರ್ದೇಶಕರಾಗಿ ಸೀತಾರಾಮ ಕಲ್ಯಾಣ ಎಂಟನೇ ಸಿನಿಮಾ.
ಇದುವರೆಗೂ ಮಾಸ್ ಶೈಲಿಯ ಸಿನಿಮಾಗಳನ್ನೇ ನಿರ್ದೇಶನ ಮಾಡಿರುವವರು ಹರ್ಷ. ಅವರು ಸೀತಾರಾಮ ಕಲ್ಯಾಣ ಸಿನಿಮಾ ಮೂಲಕ ಮೊದಲ ಬಾರಿಗೆ ಫ್ಯಾಮಿಲಿ ಕಥಾನಕವೊಂದನ್ನ ಹೇಳ ಹೊರಟಿದ್ದಾರೆ. ಈ ಮೂಲಕವೇ ಅವರ ಪಾಲಿಗೆ ತಮ್ಮ ಎಂಟನೇ ಚಿತ್ರ ಬಲು ಮಹತ್ವದ್ದು.
Advertisement
Advertisement
ಸೀತಾರಾಮ ಕಲ್ಯಾಣ ಮಾಸ್ ಮತ್ತು ಫ್ಯಾಮಿಲಿ ಎಂಟರ್‍ಟೈನರ್ ಚಿತ್ರ. ಇದೇ ಮೊದಲ ಸಲ ಹರ್ಷ ಎಮೋಷನಲ್ ಸನ್ನಿವೇಶಗಳ ಮೂಲಕ ಹೊಸಾ ಬಗೆಯ ಪಾತ್ರಗಳನ್ನು ಕಟ್ಟಿದ್ದಾರಂತೆ. ಹೆಸರೇ ಸೀತಾರಾಮ ಕಲ್ಯಾಣ ಅಂತಿರೋದರಿಂದ ಇದು ಲವ್, ಮದುವೆ ಸುತ್ತಮುತ್ತ ನಡೆಯೋ ಕಥೆ ಅಂತ ಬಹುತೇಕರು ಅಂದುಕೊಂಡಿದ್ದರೂ ಅಚ್ಚರಿಯೇನಿಲ್ಲ. ಆದರೆ ಸೀತಾರಾಮನ ಕಥೆ ಕಲ್ಯಾಣದಾಚೆಗೂ ಹಬ್ಬಿಕೊಂಡಿದೆ.
Advertisement
Advertisement
ಮೊದಲ ಸಿನಿಮಾ ಜಾಗ್ವಾರ್ ನಲ್ಲಿ ನಿಖಿಲ್ ಸಕಲ ತಯಾರಿ ಮಾಡಿಕೊಂಡು ಅಖಾಡಕ್ಕಿಳಿದಿದ್ದರು. ಸೀತಾರಾಮ ಕಲ್ಯಾಣದ ಪಾತ್ರದ ಮೂಲಕ ಅವರು ತಾನೋರ್ವ ಅದ್ಭುತ ಪರ್ಫಾರ್ಮರ್ ಅನ್ನೋದನ್ನೂ ಸಾಬೀತು ಪಡಿಸಿದ್ದಾರಂತೆ. ಫ್ಯಾಮಿಲಿ, ಮಾಸ್ ಮತ್ತು ಎಮೋಷನಲ್ ಸನ್ನಿವೇಶಗಳಿಗೆಲ್ಲ ನಿಖಿಲ್ ಬೆರಗಾಗುವಂತೆ ಜೀವ ತುಂಬಿದ್ದಾರಂತೆ. ಇನ್ನು ಈವರೆಗೆ ಒಂದು ವೆರೈಟಿ ಪಾತ್ರಗಳಿಗೆ ಹೆಸರಾಗಿದ್ದ ನಟ ನಟಿಯರನೇಕರು ಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದಾರೆ.
ಇಂಥಾ ನಾನಾ ವಿಶೇಷತೆಗಳೊಂದಿಗೆ ಮೂಡಿ ಬಂದಿರೋ ಸೀತಾರಾಮ ಪ್ರೇಕ್ಷಕರಿಗೆ ಕ್ಷಣ ಕ್ಷಣವೂ ಸರ್‍ಪ್ರೈಸ್ ಕೊಡೋವಂತೆ ಮೂಡಿ ಬಂದಿದೆ ಅನ್ನೋದು ಹರ್ಷ ಭರವಸೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv