ತಲೆಗೂದಲಿಗೆ ಹಗ್ಗ ಕಟ್ಟಿಕೊಂಡೇ ರಾಮರಥ ಎಳೆದ ಸ್ವಾಮೀಜಿ; ಅಯೋಧ್ಯೆ ಕಡೆಗೆ 566 ಕಿಮೀ ಯಾತ್ರೆ

Public TV
1 Min Read
Lord Ram Chariot

ಭೋಪಾಲ್: ಜನವರಿ 22 ರಂದು ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಇನ್ನೆರಡು ದಿನ ಬಾಕಿ ಇದೆ. ಎಲ್ಲೆಡೆ ಭಕ್ತರು ಭಗವಾನ್‌ ರಾಮಭಕ್ತಿ ಮೆರೆಯುತ್ತಿದ್ದಾರೆ. ಅಂತೆಯೇ ಮಧ್ಯಪ್ರದೇಶದಲ್ಲಿ (Madhya Pradesh) ಸ್ವಾಮೀಜಿಯೊಬ್ಬರು ತಲೆಗೂದಲಿಗೆ ಹಗ್ಗ ಕಟ್ಟಿಕೊಂಡು ರಾಮರಥವನ್ನು ಎಳೆದು ಗಮನ ಸೆಳೆದಿದ್ದಾರೆ.

ಹೌದು, ದಾಮೋಹ್‌ನ ಸ್ವಾಮೀಜಿ ಬದ್ರಿ ಅವರು ತಮ್ಮ ಕೂದಲನ್ನು ಬಳಸಿ ಭಗವಾನ್ ರಾಮರಥವನ್ನು (Lord Rama Chariot) ಎಳೆದು ಭಕ್ತಿ ಮೆರೆದಿದ್ದಾರೆ. ಜನವರಿ 22 ರಂದು ರಾಮಲಲ್ಲಾನ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕಾಗಿ ಮಧ್ಯಪ್ರದೇಶದ ದಾಮೋಹ್‌ನಿಂದ ಅಯೋಧ್ಯೆ ರಾಮಮಂದಿರದ ವರೆಗೆ 566 ಕಿಮೀ ಪ್ರಯಾಣವನ್ನು ಸೀರ್ ಬದ್ರಿ ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಮಂತ್ರಾಕ್ಷತೆ ಬಳಿಕ ಮನೆ ಮನೆಗೂ ಭಗವಾಧ್ವಜ – ಬೀದರ್‌ನ ಮಹಿಳೆಯರ ಅಳಿಲು ಸೇವೆ!

ram mandir 3

ಜನವರಿ 11 ರಂದು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಪ್ರತಿದಿನ ಸರಿಸುಮಾರು 50 ಕಿಮೀ ಕ್ರಮಿಸುತ್ತಿದ್ದಾರೆ. ಬದ್ರಿ ಅವರು ತಮ್ಮ ತಲೆಗೂದಲಿಗೆ ಹಗ್ಗ ಕಟ್ಟಿಕೊಂಡು ರಾಮರಥವನ್ನು ಎಳೆಯುತ್ತಾ ಸಾಗಿದ್ದಾರೆ.

ಶುಕ್ರವಾರ ತಡರಾತ್ರಿ ಫತೇಪುರ್‌ನಿಂದ ರಾಯ್‌ಬರೇಲಿ ತಲುಪಿದ ಬದ್ರಿ, ಅಲ್ಲಿಯೇ ನಿಂತು ವಿಶ್ರಾಂತಿ ಪಡೆದರು. ನಿಲುಗಡೆ ಸಮಯದಲ್ಲಿ ನಗರದಾದ್ಯಂತ ಹಲವಾರು ದೇವಾಲಯಗಳಿಗೆ ಭೇಟಿ ನೀಡಿದರು. ಮತ್ತೆ ಬೆಹ್ತಾ ಛೇದಕದಲ್ಲಿರುವ ಹನುಮಾನ್ ದೇವಾಲಯದ ಸಂಕೀರ್ಣದಿಂದ ತಮ್ಮ ಪ್ರಯಾಣ ಪುನರಾರಂಭಿಸಿದ್ದಾರೆ. ಇದನ್ನೂ ಓದಿ: ವಿದೇಶಗಳಲ್ಲಿಯೂ ರಾಮೋತ್ಸವಕ್ಕೆ ಭರದ ಸಿದ್ಧತೆ

ayodhya ram mandir

ಅಯೋಧ್ಯೆಯಲ್ಲಿ ಭಗವಾನ್ ರಾಮನ ಭವ್ಯ ಮಂದಿರವನ್ನು ನಿರ್ಮಿಸಿ, ರಾಮಲಲ್ಲಾ ಪ್ರತಿಮೆಯನ್ನು ಸ್ಥಾಪಿಸಿದ ನಂತರ ರಾಮನ ರಥವನ್ನು ತನ್ನ ಜಡೆ ಕೂದಲಿನೊಂದಿಗೆ ಎಳೆದುಕೊಂಡು ಅಯೋಧ್ಯೆಗೆ ಹೋಗುವುದಾಗಿ 1992 ರಲ್ಲಿ ಬದ್ರಿ ಪ್ರತಿಜ್ಞೆ ಮಾಡಿದ್ದರು.

ಸನಾತನ ಧರ್ಮವಿದ್ದರೆ ಎಲ್ಲವೂ ಇರಲಿದೆ. ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಇಲ್ಲದೆ ರಾಮಮಂದಿರ ಸಾಧ್ಯವಿಲ್ಲ ಎಂದು ಸ್ವಾಮೀಜಿ ಬದ್ರಿ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾಭೈರಬ್ ದೇವಾಲಯದ ಸ್ವಚ್ಛತಾ ಅಭಿಯಾನದಲ್ಲಿ ಅಮಿತ್ ಶಾ ಭಾಗಿ

Share This Article