ರಾಂಚಿ: ಮನೆ ಕೆಲಸದಾಕೆಗೆ ಕ್ರೂರವಾಗಿ ಚಿತ್ರಹಿಂಸೆ ನೀಡಿದ ಆರೋಪದ ಮೇರೆಗೆ ಜಾರ್ಖಂಡ್‍ನ ಬಿಜೆಪಿ ನಾಯಕಿ ಸೀಮಾ ಪಾತ್ರಾ ಅವರನ್ನು ಬಿಜೆಪಿ ಇಂದು ಅಮಾನತುಗೊಳಿಸಿದೆ.
ಸೀಮಾ ಪಾತ್ರಾ ಅವರು ಬಿಜೆಪಿ ಮಹಿಳಾ ವಿಭಾಗದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. ಜೊತೆಗೆ ಅವರ ಪತಿ ಮಹೇಶ್ವರ್ ಪಾತ್ರಾ ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದಾರೆ. ಮನೆಕೆಲಸದಾಕೆಗೆ ಸೀಮಾ ಪಾತ್ರಾ ಚಿತ್ರಹಿಂಸೆ ನೀಡುತ್ತಿರುವ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸೀಮಾ ಪಾತ್ರಾ ಅವರನ್ನು ಜಾರ್ಖಂಡ್ ಬಿಜೆಪಿ ಮುಖ್ಯಸ್ಥ ದೀಪಕ್ ಪ್ರಕಾಶ್ ಅಮಾನತುಗೊಳಿಸಿದ್ದಾರೆ.
ವೀಡಿಯೋದಲ್ಲಿ ಏನಿದೆ?: ವೈರಲ್ ಆದ ವೀಡಿಯೋದಲ್ಲಿ ಸುನೀತಾ ಎಂಬಾಕೆ ಆಸ್ಪತ್ರೆಯ ಹಾಸಿಗೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರು ಕುಳಿತುಕೊಳ್ಳಲು ಅಸಮರ್ಥರಾಗಿದ್ದು, ಅವರ ಬಾಯಲ್ಲಿ ಅನೇಕ ಹಲ್ಲುಗಳು ಇಲ್ಲದಿರುವುದನ್ನು ನೋಡಬಹುದಾಗಿದೆ. ಅಷ್ಟೇ ಅಲ್ಲದೇ ಅವರ ದೇಹದ ಮೇಲೆ ಅನೇಕ ಗಾಯದ ಗುರುತುಗಳಿದ್ದು, ಇವೆಲ್ಲವೂ ಸುನೀತಾಗೆ ಚಿತ್ರಹಿಂಸೆ ನೀಡಿರುವುದು ಸೂಚಿಸುತ್ತದೆ. ಘಟನೆ ಸಂಬಂಧಿಸಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಕೂಡಲೇ ಸೀಮಾ ಪಾತ್ರಾ ಅವರನ್ನು ಬಂಧಿಸಲು ಒತ್ತಾಯಿಸಿದ್ದಾರೆ.
रांची में रिटायर्ड IAS महेश्वर पात्रा की पत्नी भाजपा नेता सीमा पात्रा ने आदिवासी महिला सुनीता खाखा को 8 साल तक अपने घर में कैद कर सूरज भी नहीं देखने दिया। सुनीता से जीभ से फर्श साफ करवाया। पेशाब चटाया। रॉड से दांत तोड़ डाले। गर्म तबे से चेहरा जला डाला। शर्मनाक। #ArrestSeemaPatra pic.twitter.com/oTdJXMINJ1
— Hansraj Meena (@HansrajMeena) August 30, 2022
ಘಟನೆಯೇನು?: ಸುನೀತಾ ಜಾರ್ಖಂಡ್‍ನ ಗುಮ್ಲಾ ಮೂಲದವರಾಗಿದ್ದು, ಸುಮಾರು 10 ವರ್ಷಗಳ ಹಿಂದೆ ಪತ್ರಾಸ್‍ನಲ್ಲಿ ಮನೆ ಕೆಲಸ ಮಾಡುತ್ತಿದ್ದರು. ಇದಾದ ನಂತರ ಸ್ವಲ್ಪ ಸಮಯ ದೆಹಲಿಗೆ ಕೆಲಸಕ್ಕೆಂದು ತೆರಳಿದ್ದರು. ಇದಾದ ನಂತರ 6 ವರ್ಷದ ಹಿಂದ ಮತ್ತೆ ರಾಂಚಿಗೆ ಮರಳಿದ್ದರು.
ಕಳೆದ 6 ವರ್ಷಗಳಿಂದ ಸೀಮಾ ಪಾತ್ರಾ ಮನೆಯಲ್ಲಿ ಕ್ರೂರ ಚಿತ್ರ ಹಿಂಸೆ ಅನುಭವಿಸುತ್ತಿದ್ದ ಸುನೀತಾ ಮಾತನಾಡಿ, ಸೀಮಾ ಪಾತ್ರಾ ನೀಡಿದ ಚಿತ್ರಹಿಂಸೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಪಘಾತದಲ್ಲಿ ಗಾಯಗೊಂಡಿದ್ದಾತ ಅಂಬುಲೆನ್ಸ್ ಬಾಗಿಲು ತೆಗೆಯೋಕಾಗದೆ ಸಾವನ್ನಪ್ಪಿದ!
ಬಿಜೆಪಿ ನಾಯಕಿ ಆಗಿರುವ ಸೀಮಾಪಾತ್ರ, ಬಿಸಿ ತವಾ ಹಾಗೂ ರಾಡ್‍ಗಳಿಂದ ನನ್ನ ಹಲ್ಲುಗಳನ್ನೆಲ್ಲಾ ಒಡೆದು ಹಾಕಿದ್ದಾಳೆ. ಅದಾದ ನಂತರ ಮೂತ್ರ ಸೇವನೆ ಮಾಡುವಂತೆ ಆದೇಶಿಸುತ್ತಿದ್ದಳು. ಆದರೆ ನಾನೇನು ತಪ್ಪು ಮಾಡಿದೆ ಎಂದೇ ಹೇಳದೆಯೇ ನಿರಂತರವಾಗಿ ಚಿತ್ರಹಿಂಸೆ ನೀಡುತ್ತಿದ್ದಳು. ಆದರೆ ಸೀಮಾಪಾತ್ರಾ ಮಗ ಆಯುಷ್ಮಾನ್ ಮಾತ್ರ ನನಗೆ ಸಹಾಯ ಮಾಡುತ್ತಿದ್ದ, ಅತನಿಂದಲೇ ನಾನು ಬದುಕಿದ್ದೇನೆ ಎಂದು ಸುನೀತಾ ಅಳಲು ತೋಡಿಕೊಂಡಿದ್ದಾರೆ.
ವರದಿಗಳ ಪ್ರಕಾರ ಸುನೀತಾಳ ಪರಿಸ್ಥಿತಿಯನ್ನು ಆಯುಷ್ಮಾನ್ ಆತನ ಸ್ನೇಹಿತರಿಗೆ ವಿವರಿಸಿ ಸಹಾಯಕ್ಕೆ ಮನವಿ ಮಾಡಿದ್ದಾರೆ. ನಂತರ ಆತನ ಸ್ನೇಹಿತರು ಪೊಲೀಸರಿಗೆ ದೂರು ನೀಡಿ, ಸುನೀತಾಳನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ಮೋದಿ, ಬಿಜೆಪಿಯವರು ಸೇರಿ ದೇಶವನ್ನ ಬರ್ಬಾದು ಮಾಡಿಬಿಟ್ರು – ಸಿದ್ದು ಗುದ್ದು