ಇಸ್ಲಾಮಾಬಾದ್/ಲಕ್ನೋ: ಪಬ್‌ಜಿ (PUBG) ಪ್ರೇಮಿಗಾಗಿ ವೀಸಾ ಇಲ್ಲದೇ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ (Pakistani Woman) ಸೀಮಾ ಹೈದರ್ ಮೊದಲ ಪತಿ ಗುಲಾಮ್ ಹೈದರ್, ತನ್ನ ಮಕ್ಕಳನ್ನು ಭಾರತದಿಂದ ವಾಪಸ್ ಕರೆದುಕೊಂಡು ಹೋಗಲು ನಿರ್ಧಾರ ಮಾಡಿದ್ದಾರೆ.
ತನ್ನ ಅಪ್ರಾಪ್ತ ಮಕ್ಕಳನ್ನು ಭಾರತದಿಂದ ವಾಪಸ್ ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಲು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿ ಭಾರತೀಯ ವಕೀಲನನ್ನು ನೇಮಿಸಿಕೊಂಡಿದ್ದಾರೆ ಎಂದು ಪಾಕ್ ವಕೀಲ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಅನ್ಸಾರ್ ಬರ್ನಿ ತಿಳಿಸಿದ್ದಾರೆ.
ಅಲಿ ಮೊಮಿನ್ ಎಂಬ ಭಾರತೀಯ ವಕೀಲರನ್ನು ನೇಮಿಸಿಕೊಂಡಿದ್ದು, ಭಾರತದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಪವರ್ ಆಫ್ ಅಟಾರ್ನಿ ಕಳುಹಿಸಲಾಗಿದೆ ಎಂದು ಬರ್ನಿ ಹೇಳಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಭಾರತದಲ್ಲೇ ಇರಲು ಅವಕಾಶ ಕೊಡಿ – ರಾಷ್ಟ್ರಪತಿಗೆ ಸೀಮಾ ಹೈದರ್ ಪತ್ರ
ಗುಲಾಮ್ ಹೈದರ್ ಮಕ್ಕಳು ಇನ್ನೂ ಅಪ್ರಾಪ್ತ ವಯಸ್ಸಿನವರು ಆಗಿರುವುದರಿಂದ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಧಾರ್ಮಿಕ ಮತಾಂತರ ನಿಷೇಧ ಇರೋದ್ರಿಂದ ಮಕ್ಕಳನ್ನು ಕರೆತರಲು ಮುಂದಾಗಿದ್ದಾರೆ. ಅಲ್ಲದೇ ಸೀಮಾ ನೋಯ್ಡಾದಲ್ಲಿ ನೆಲೆಸಿದ್ದರೂ ಅವರಿನ್ನೂ ಪಾಕಿಸ್ತಾನಿ ಪ್ರಜೆಯೇ ಆಗಿರುವುದರಿಂದ ಮೊದಲ ಪತಿ ಗುಲಾಮ್ ಹೈದರ್ ಮಕ್ಕಳ ಮೇಲೆ ಎಲ್ಲಾ ಹಕ್ಕುಗಳನ್ನು ಹೊಂದಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ
ಸೀಮಾ ಹೇಳಿದ್ದೇನು?
ತಾನು ಎಂದೂ ಕಾಣದ ಪ್ರೀತಿಯನ್ನು ನನ್ನ ಪತಿ ಸಚಿನ್ ಮೀನಾ ಹಾಗೂ ಅವರ ತಂದೆ-ತಾಯಿಯಿಂದ ಕಂಡಿದ್ದೇನೆ. ನಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ. ನನ್ನ ನಾಲ್ವರು ಮಕ್ಕಳೊಂದಿಗೆ ಭಾರತದಲ್ಲೇ ಉಳಿಯಲು ಅವಕಾಶ ಕೊಡಿ ಎಂದು ಈ ಹಿಂದೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಗೆ ಪತ್ರ ಬರೆದಿದ್ದರು. ಅಲ್ಲದೇ ಪಾಕಿಸ್ತಾನಕ್ಕೆ ಹಿಂತಿರುಗುವ ಬಯಕೆ ನನಗಿಲ್ಲ. ನಾನು ವಾಪಸ್ ಹೋದರೂ ನನ್ನನ್ನು ಕೊಲ್ಲುತ್ತಾರೆ ಎಂದು ಹೇಳಿಕೊಂಡಿದ್ದರು.
ಈ ಬೆನ್ನಲ್ಲೇ ಸೌದಿಯಲ್ಲಿ ಕೆಲಸ ಮಾಡುತ್ತಿದ್ದ ಸೀಮಾ ಪತಿ, ನಾನು ನಿನ್ನನ್ನ ಎಷ್ಟು ಪ್ರೀತಿಸುತ್ತೇನೆ ಅನ್ನೋದು ನಿನಗೇ ಚೆನ್ನಾಗಿ ಗೊತ್ತು. ಈಗಲೂ ಅಷ್ಟೇ ಪ್ರೀತಿ (Love) ಮಾಡ್ತೀನಿ ಸೀಮಾ, ದಯವಿಟ್ಟು ಹಿಂತಿರುಗಿ ಬಂದುಬಿಡು, ನಿನಗೆ ಏನಾದ್ರೂ ಆದ್ರೆ ಯಾರು ನೋಡಿಕೊಳ್ತಾರೆ? ಮಕ್ಕಳ ಜವಾಬ್ದಾರಿ ಯಾರು ತೆಗೆದುಕೊಳ್ತಾರೆ? ವಾಪಸ್ ಬಂದುಬಿಡು ನಾವಿಬ್ಬರು ಹೊಸ ಜೀವನ ಶುರು ಮಾಡೋಣ ಎಂದು ಕೋರಿದ್ದರು. ತನ್ನ ಪತ್ನಿ-ಮಕ್ಕಳನ್ನು ವಾಪಸ್ ಕಳುಹಿಸಿಕೊಡುವಂತೆ ಭಾರತ ಸರ್ಕಾರಕ್ಕೂ ಮನವಿ ಮಾಡಿದ್ದರು. ಆದರೀಗ ಸೀಮಾ ಬರದಿದ್ದರೂ ಚಿಂತೆಯಿಲ್ಲ. ತನ್ನ ಮಕ್ಕಳನ್ನು ಪಾಕಿಸ್ತಾನಕ್ಕೆ ಹಿಂದಿರುಗಿಸುವಂತೆ ಕೇಳಿಕೊಂಡಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.
ಪಬ್‌ಜೀ ಪ್ರೇಮಕಥೆ ಶುರುವಾಗಿದ್ದೇ ಥ್ರಿಲ್ಲಿಂಗ್:
ಸೀಮಾ ಹಾಗೂ ಸಚಿನ್ ಲವ್‌ಸ್ಟೋರಿ ಬಾಲಿವುಡ್ ಸಿನಿಮಾದಷ್ಟೇ ಥ್ರಿಲ್ಲಿಂಗ್ ಆಗಿದೆ. ಸಚಿನ್ ಮೀನಾ ಮೂಲತಃ ಉತ್ತರಪ್ರದೇಶದವನಾಗಿದ್ದು, 2019ರಲ್ಲಿ ಆನ್‌ಲೈನ್ ಗೇಮ್ ಪಬ್‌ಜೀ ಆಡುತ್ತಿದ್ದ. ಈ ವೇಳೆ ಇವರಿಬ್ಬರ ಪರಿಚಯವಾಗಿ, ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಬಳಿಕ ಸೀಮಾ ಹೈದರ್ ಆತನೊಂದಿಗೆ ನೋಯ್ಡಾದಲ್ಲಿ ವಾಸಿಸುವ ಸಲುವಾಗಿ ಪಾಕಿಸ್ತಾನದಿಂದ ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಳು. ಇದನ್ನೂ ಓದಿ: NRIಗಳ ನಡುವಿನ ವಿವಾಹಗಳನ್ನು ಭಾರತದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು: ಕಾನೂನು ಆಯೋಗ ಶಿಫಾರಸು