Bengaluru CityDistrictsKarnatakaLatestLeading NewsMain Post

ಪೌರ ಕಾರ್ಮಿಕರ ಕೆಲಸ ನೋಡಿದ್ರೆ ಕಣ್ಣೀರು ಬರುತ್ತೆ – ಬೊಮ್ಮಾಯಿ ಭಾವುಕ

- ಮುಂದಿನ ವಾರದಿಂದ ತವರು ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯಕ್ಕೆ ಸಿಎಂ ಪ್ಲ್ಯಾನ್‌

ಬೆಂಗಳೂರು: ಎರಡು ದಿನಗಳ ಹಿಂದೆಯಷ್ಟೇ ಸಂಪುಟದಲ್ಲಿ (Legislative Assembly) ಪೌರ ಕಾರ್ಮಿಕರ (Civic Workers) ಕಾಯಂ ಮಾಡುವ ತೀರ್ಮಾನ ತೆಗೆದುಕೊಂಡಿದ್ದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಇಂದು ಪೌರಕಾರ್ಮಿರ ದಿನಾಚರಣೆಯ ಪ್ರಯುಕ್ತ ಉಪಾಹಾರ ಸವಿದಿದ್ದಾರೆ.

ರೇಸ್‌ಕೋರ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ 500ಕ್ಕೂ ಹೆಚ್ಚು ಪೌರಕಾರ್ಮಿಕರಿಗೆ ಉಪಹಾರ ವ್ಯವಸ್ಥೆ ಏರ್ಪಡಿಸಿದ್ದರು. ಬೆಳಿಗ್ಗೆ 9.30ಕ್ಕೆ ಸಿಎಂ ಸಹ ಪೌರ ಕಾರ್ಮಿಕರೊಂದಿಗೆ ಇಡ್ಲಿ, ವಡೆ, ಉಪ್ಪಿಟ್ಟು, ಕೇಸರಿಬಾತ್ ಉಪಹಾರ ಸವಿದಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಹಿಂಸಾಚಾರ – PFI ವಿರುದ್ಧ ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ಕೇಸ್‌

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಪೌರಕಾರ್ಮಿಕರು ಯಾವ ರೀತಿ ಕೆಲಸ ಮಾಡ್ತಾರೆ ಅಂತಾ ನೋಡಿದ್ರೆ ಕಣ್ಣೀರು ಬರುತ್ತೆ ಎಂದು ಭಾವುಕರಾಗಿದ್ದಾರೆ.

ಬಹಳ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗಾಗಿ ಒಂದು ಸಮಿತಿ ಮಾಡಿದ್ದೇವೆ. ಅಲ್ಲದೇ 11,133 ಪೌರ ಕಾರ್ಮಿಕರ ಕಾಯಂ ನೇಮಕಾತಿಯನ್ನು ತಕ್ಷಣ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲ 43 ಸಾವಿರ ಪೌರಕಾರ್ಮಿಕರನ್ನೂ ಕಾಯಂ ಮಾಡಲಾಗುತ್ತದೆ. ಪೌರಕಾರ್ಮಿಕರಿಗೆ ಸೇವೆ ಮಾಡಲು ಭಗವಂತ ಅವಕಾಶ ಕೊಟ್ಟಿದ್ದಾನೆ. ಈ ವಿಚಾರದಲ್ಲಿ ಯಾರೂ ಗೊಂದಲ ಮಾಡಿಕೊಳ್ಳುವ ಅಗತ್ಯ ಇಲ್ಲ. ನಾನು ಸಿಎಂ ಆಗಿ ನನ್ನ ಕರ್ತವ್ಯ ಮಾಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: Bigg Boss 9- ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ದಿಢೀರ್ ಅಂತ ರಾಜೇಶ್ ಸಾವು: ಬಿಗ್ ಬಾಸ್ ಮನೆಗೆ ಬರ್ತಾರಾ ನಟ ಸುನೀಲ್?

ಪೌರಕಾರ್ಮಿಕರು ಯಾವ ರೀತಿ ಕೆಲಸ ಮಾಡ್ತಾರೆ ಅಂತಾ ನೋಡಿದ್ರೆ ಕಣ್ಣೀರು ಬರುತ್ತೆ, ಯಾರಾದ್ರು ಸೇವೆ ಮಾಡಬೇಕು ಅಂದ್ರೆ ಮೊದಲು ನಿಮ್ಮ ಸೇವೆ ಮಾಡಬೇಕು. ನಮ್ಮ ಸರ್ಕಾರದಲ್ಲಿ ಎಲ್ಲರಿಗೂ ಸೇವಾ ಭದ್ರತೆ ಕೊಟ್ಟೆ ಕೊಡ್ತೀವಿ. ಹಿಂದಿನ ಸರ್ಕಾರಗಳು ಮಾಡದೇ ಇರೋದನ್ನ ನಮ್ಮ ಸರ್ಕಾರ ಮಾಡಿದೆ. ಇತರೆ ಸೌಲಭ್ಯ ಏನೇ ಇದ್ರು ನಮ್ಮ ಗಮನಕ್ಕೆ ತನ್ನಿ, ಅದನ್ನೂ ಮಾಡುವ ಕೆಲಸ ಮಾಡ್ತೀನಿ ಎಂಬ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ (Govind Karjol), ಕೋಟಾ ಶ್ರೀನಿವಾಸ ಪೂಜಾರಿ, ಸಿಸಿ ಪಾಟೀಲ್ ಪರಿಷತ್ ಸದಸ್ಯರಾದ ಚಲವಾದಿ ನಾರಾಯಣ ಸ್ವಾಮಿ, ಶಾಸಕ ಎನ್.ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.

ತವರು ಕ್ಷೇತ್ರದಲ್ಲೇ ಗ್ರಾಮವಾಸ್ತವ್ಯ:
ಮುಂದಿನ ವಾರದಿಂದ ಸಿಎಂ ಬೊಮ್ಮಾಯಿ 52 ವಿಧಾನಸಭಾ ಕ್ಷೇತ್ರಗಳ ಪ್ರವಾಸದ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಹೂಡಲು ಸಿದ್ಧತೆ ನಡೆಸಿದ್ದಾರೆ. ತವರು ಕ್ಷೇತ್ರದಿಂದಲೇ ಗ್ರಾಮ ವಾಸ್ತವ್ಯಕ್ಕೆ ಚಿಂತಿಸಿರುವ ಸಿಎಂ, ಗ್ರಾಮವಾಸ್ತವ್ಯ ಮೂಲಕ ಶಿಗ್ಗಾಂವಿ ಮತದಾರರತ್ತಲೂ ಗಮನಹರಿಸಲು ಸಜ್ಜಾಗಿದ್ದಾರೆ. ರಾಜಕೀಯ ಒತ್ತಡದ ಮಧ್ಯೆಯೂ ಸ್ವಂತ ಕ್ಷೇತ್ರದತ್ತ ಹೆಚ್ಚು ಸುಳಿಯದ ಸಿಎಂ, ಇದೀಗ ಗ್ರಾಮ ವಾಸ್ತವ್ಯದ ಮೂಲಕ ಮತದಾರರ ವಿಶ್ವಾಸ ಹೆಚ್ಚಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.

Live Tv

Leave a Reply

Your email address will not be published.

Back to top button