ಕಾರವಾರ: ಶಿರೂರು ಗುಡ್ಡ ಕುಸಿತದಲ್ಲಿ (Shirur Landslide) ನಾಪತ್ತೆಯಾದವರ ಕುಟುಂಬಸ್ಥರನ್ನು ಭೇಟಿ ಮಾಡಿದೆ. ಅವರ ಕಣ್ಣೀರು ನೋಡಿ ಮತ್ತೆ ಕಾರ್ಯಾಚರಣೆ ನಡೆಸಲು ನಿರ್ಧರಿಸಿದ್ದೇನೆ ಎಂದು ಮುಳುಗು ತಜ್ಞ ಈಶ್ವರ್ ಮಲ್ಪೆ (Eshwar Malpe) ಹೇಳಿದ್ದಾರೆ.
ಶಿರೂರು ಗುಡ್ಡ ಕುಸಿತ ಪ್ರಕರಣದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಮವಾಸ್ಯೆ ಸಂದರ್ಭದಲ್ಲಿ ನೀರಿನ ಸೆಳೆತ ಕಡಿಮೆ ಇರುತ್ತದೆ. ಮಳೆಯಾಗದೇ ಇದ್ದರೆ ಅಂದು ಕಾರ್ಯಾಚರಣೆ ಮಾಡುತ್ತೇನೆ. ಕೇರಳದಿಂದ ಬೋಟ್ ಒಂದು ಬರುತ್ತದೆ. ಬೋಟ್ ಬಂದು ಮಣ್ಣು ತೆರವು ಮಾಡಿದರೆ ಕಾರ್ಯಾಚರಣೆ ಮಾಡಬಹುದು ಎಂದರು. ಇದನ್ನೂ ಓದಿ: ಭಾರೀ ಮಳೆ, ಪ್ರವಾಹ ಪರಿಸ್ಥಿತಿ: ರಾಜ್ಯದಲ್ಲೂ ಕಟ್ಟೆಚ್ಚರ ವಹಿಸಿ, ಪೂರ್ವ ಸಿದ್ಧತೆ ಮಾಡಿಕೊಳ್ಳಿ – ಸಿಎಂ ಖಡಕ್ ಸೂಚನೆ
Advertisement
Advertisement
ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಡೆಸಿದ 13 ದಿನಗಳ ಕಾರ್ಯಾಚರಣೆಯಲ್ಲಿ 8 ಮಂದಿಯ ಮೃತದೇಹ ದೊರೆತಿದ್ದು, ಇನ್ನೂ ಮೂವರು ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆ ಮುಳುಗು ತಜ್ಞರ ತಂಡ ಕೂಡ ಕಾರ್ಯಾಚರಣೆ ನಡೆಸಿತ್ತು. ಆದರೆ ಭಾರೀ ಮಳೆ ಹಾಗೂ ಗಂಗಾವಳಿ ನದಿಯಲ್ಲಿ ಕಲ್ಲು ಬಂಡೆಗಳಿದ್ದರಿಂದ ಅಡಚಣೆ ಉಂಟಾಗಿತ್ತು. ಅಲ್ಲದೇ ನದಿಯಲ್ಲಿ ಟ್ಯಾಂಕರ್ ಹಾಗೂ ಮರದ ದಿಮ್ಮಿಗಳನ್ನು ಮುಳುಗು ತಜ್ಞರು ಪತ್ತೆಹಚ್ಚಿದ್ದರು. ಭಾರೀ ಮಳೆಯಿಂದ ಅಡಚಣೆ ಉಂಟಾದ ಹಿನ್ನೆಲೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು. ಇದನ್ನೂ ಓದಿ: 4 ಮಕ್ಕಳ ತಾಯಿಯನ್ನ ಮದ್ವೆಯಾಗಿ ಇಸ್ಲಾಂಗೆ ಮತಾಂತರವಾಗುವಂತೆ ಚಿತ್ರಹಿಂಸೆ; ಪತಿ ಅರೆಸ್ಟ್
Advertisement