ಕೋಲಾರ: ಇಂದು ಬೆಳ್ಳಂಬೆಳಗ್ಗೆ ದಾಳಿ ವೇಳೆ ಕ್ರೆಡಲ್ (ಕೆಆರ್ ಐಡಿಎಲ್) ಸೂಪರಿಂಟೆಂಡೆಂಟ್ ಎಂಜಿನಿಯರ್ ತಿಮ್ಮರಾಜಪ್ಪ (Thimmarajappa) ಒಡೆತನದ ಬಂಗಲೆ ನೋಡಿ ಲೋಕಾಯುಕ್ತ ಅಧಿಕಾರಿಗಳೇ ದಂಗಾಗಿದ್ದಾರೆ.
ತಿಮ್ಮರಾಜಪ್ಪ ಅವರಿಗೆ ಸೇರಿದ ಕೋಲಾರ (Kolar), ಬೆಂಗಳೂರು, ಬೆಳಗಾವಿ ಸೇರಿ 8 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು (Lokayukta Officers) ದಾಳಿ ಮಾಡಿದ್ದಾರೆ. ಅಂತೆಯೇ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕು ಮಾಹದೇವಪುರ ಹುಟ್ಟೂರಿನ ಮನೆ ಮೇಲೆ ದಾಳಿ ನಡೆಸಿದಾಗ ಬಂಗಲೆ ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
Advertisement
Advertisement
ಬೆಂಗಳೂರು ನಗರದಲ್ಲೇ ತಿಮ್ಮರಾಜಪ್ಪಗೆ ಸೇರಿದ 7 ಕಡೆ ದಾಳಿ ಮಡಿದ್ದು, ಬೆಂಗಳೂರು ನಗರದಲ್ಲಿ 7 ಐಷಾರಾಮಿ ಬಂಗಲೆಗಳು 3 ಪ್ಲಾಟ್ ಗಳು ಪತ್ತೆಯಾಗಿವೆ. ಕೋಟ್ಯಂತರ ರೂಪಾಯಿ ಮೌಲ್ಯದ ಮನೆ, ಆಸ್ತಿ, ಜಮೀನು ದಾಖಲೆಗಳು ಸಿಕ್ಕಿವೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ
Advertisement
Advertisement
ತಿಮ್ಮರಾಜಪ್ಪ ಅವರು ಪ್ರಸ್ತುತ ಬೆಳಗಾವಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೋಲಾರ ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ.