ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಕೊನೆಯ ಸ್ವಾತಂತ್ರ‍್ಯ ದಿನದ (77th Independence Day) ಭಾಷಣದಲ್ಲಿ ಮುಂದಿನ ವರ್ಷ ಇದೇ ಸ್ಥಳದಿಂದ ಭರವಸೆಗಳ ಪ್ರಗತಿಯ ಬಗ್ಗೆ ಮಾತನಾಡುವುದಾಗಿ ಹೇಳಿದ್ದಾರೆ. ಈ ಮೂಲಕ ಅವರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಮತ್ತೊಮ್ಮೆ ಆಯ್ಕೆಯಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆ ಕೆಂಪುಕೋಟೆಯ ಮೇಲೆ ನಿಂತು ಭಾಷಣ ಮಾಡಿದ ಅವರು, 2014 ರಲ್ಲಿ ಬದಲಾವಣೆ ಭರವಸೆಯೊಂದಿಗೆ ನಿಮ್ಮ ಮುಂದೆ ಬಂದೆ. ಅಭೂತಪೂರ್ವ ಜಯ ನೀಡುವ ಮೂಲಕ ಅವಕಾಶ ನೀಡಿದ್ದೀರಿ. 5 ವರ್ಷದಲ್ಲಿ ಮಾಡಿದ ಕೆಲಸ ನಿಮಗೆ ಭರವಸೆಯಿಂದ ವಿಶ್ವಾಸ ಮೂಡಿಸಿದೆ ಎಂದರು.
Advertisement
Advertisement
ನೀವು ನನ್ನ ಮೇಲೆ ನಂಬಿಕೆ ಇಟ್ಟಿದ್ದೀರಿ, ನೀವು ನನ್ನ ಮೇಲೆ ಇಟ್ಟಿದ್ದ ನಂಬಿಕೆಯನ್ನು ಈಡೇರಿಸಲು ನಾನು ಪ್ರಯತ್ನಿಸಿದೆ. ಕಳೆದ 5 ವರ್ಷಗಳಲ್ಲಿ ನಾನು ನೀಡಿದ ಭರವಸೆಗಳು ನನಗೆ ಆತ್ಮವಿಶ್ವಾಸವನ್ನು ತಂದುಕೊಟ್ಟಿವೆ. ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ಮೂಲಕ ನಾನು ನಿಮಗೆ ಭರವಸೆ ನೀಡಿದ್ದೇನೆ. ನಾನು ಶ್ರಮಿಸಿದ್ದೇನೆ. ರಾಷ್ಟ್ರ ಮತ್ತು ನಾನು ಹೆಮ್ಮೆಯಿಂದ ಕೆಲಸ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ತಾಯಿ, ಸಹೋದರಿಯರಿಗೆ ಅವಮಾನ – ದೇಶವೇ ಮಣಿಪುರದೊಂದಿಗೆ ನಿಂತಿದೆ: ಮೋದಿ
Advertisement
ಮುಂದಿನ ವರ್ಷ ಆಗಸ್ಟ್ 15 ರಂದು ಇದೇ ಕೆಂಪು ಕೋಟೆಯಿಂದ ನಾನು ರಾಷ್ಟ್ರವು ಸಾಧಿಸಿದ ಪ್ರಗತಿಯನ್ನು ಓದುತ್ತೇನೆ. ನಿಮ್ಮ ಶಕ್ತಿ, ನಿಮ್ಮ ಸಂಕಲ್ಪ ಮತ್ತು ನಿಮ್ಮ ಯಶಸ್ಸಿಗೆ ಹೆಚ್ಚಿನ ವಿಶ್ವಾಸದಿಂದ ಕೆಲಸ ಮಾಡುತ್ತೇನೆ ಎಂದರು.
Advertisement
ಜನಸಂಖ್ಯಾಶಾಸ್ತ್ರ, ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆಯು ದೇಶದ ಕನಸನ್ನು ನನಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದ ಅವರು, 3 ಅಂಶಗಳಿಂದ ಭಾರತದ ಎಲ್ಲಾ ಕನಸುಗಳನ್ನು ನನಸಾಗಿಸಬಹುದು ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾವು ತೆಗೆದುಕೊಳ್ಳುವ ನಿರ್ಧಾರ ಮುಂದಿನ 1,000 ವರ್ಷ ಭಾರತಕ್ಕೆ ದಿಕ್ಕು ತೋರಲಿದೆ: ಮೋದಿ
Web Stories