ರಾಯಚೂರು: ಗುರುರಾಯರ ಆರಾಧನೆಯ ಕೊನೆಯ ದಿನವಾದ ಇಂದು ಮಂತ್ರಾಲಯದಲ್ಲಿ ಉತ್ತರಾರಾಧನೆ ಅದ್ಧೂರಿಯಾಗಿ ನಡೆಯಲಿದೆ.
ಬೆಳಗ್ಗೆ 10 ಗಂಟೆ ವೇಳೆಗೆ ಮಹಾರಥೋತ್ಸವ ಜರುಗಲಿದೆ. ಮಠದ ಬೀದಿಯಲ್ಲಿ ಮೆರವಣಿಗೆ ನಡೆಯಲಿದ್ದು, ದೇಶದ ಮೂಲೆ ಮೂಲೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.
Advertisement
ಮಹಾರಥೋತ್ಸವದ ವೇಳೆ ರಥಕ್ಕೆ ಹೆಲಿಕ್ಯಾಪ್ಟರ್ ಮೂಲಕ ಪುಪ್ಪವೃಷ್ಠಿ ನಡೆಯಲಿದೆ. ಪ್ರಹಲ್ಲಾದರಾಜರಾಗಿ ರಾಯರು ಇಂದು ಭಕ್ತರಿಗೆ ಬಹಿರ್ಮುಖವಾಗಿ ದರ್ಶನ ಕೊಡುತ್ತಾರೆ ಅನ್ನೋ ನಂಬಿಕೆಯಿದೆ. ರಥೋತ್ಸವಕ್ಕೂ ಮುನ್ನ ಪ್ರಹ್ಲಾದರಾಯರಿಗೆ ಶ್ರೀಗಳು ಅಡ್ಡ ಮಲಗಿ ಸಮಸ್ಕಾರ ಹಾಕುವ ಮೂಲಕ ಪ್ರಾರ್ಥನೆ ಸಲ್ಲಿಸಲಿದ್ದಾರೆ.
Advertisement
ಮಹಾ ರಥೋತ್ಸವದ ಮೂಲಕ ಮೂರು ದಿನಗಳ ಆರಾಧನಾ ಮಹೋತ್ಸವಕ್ಕೆ ಇಂದು ವಿದ್ಯುಕ್ತ ತೆರೆ ಬೀಳಲಿದೆ. ಆದರೆ ಸಪ್ತರಾತ್ರೋತ್ಸವ ಅಂಗವಾಗಿ ಇನ್ನೂ ಎರಡು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯುತ್ತವೆ.