ಬೀದರ್: ಮೇ 13 ರಂದು ಹನುಮಾನ್ ಗದಾ ಕಾಂಗ್ರೆಸ್ ಮೇಲೆ ಏರಿ ಹೇಗೆ ಪ್ರಹಾರ ಮಾಡುತ್ತೆ ನೋಡಿ ಎಂದು ಕಾಂಗ್ರೆಸ್ (Congress) ಪ್ರಣಾಳಿಕೆಯಲ್ಲಿ ಬಜರಂಗದಳ (Bajrang Dal) ಬ್ಯಾನ್ ವಿಚಾರಕ್ಕೆ ಬೀದರ್‌ನಲ್ಲಿ (Bidar) ಕೇಂದ್ರ ಸಚಿವ ಭಗವಂತ್ ಖೂಬಾ (Bhagwanth Khuba) ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಳಕಾಪೂರ್‌ದಲ್ಲಿರುವ ಐತಿಹಾಸಿಕ ಹನುಮಾನ್ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡಿ ಕಾಂಗ್ರೆಸ್ ಭಜರಂಗದಳ ಬ್ಯಾನ್ ಅಸ್ತ್ರಕ್ಕೆ ಟಾಂಗ್ ನೀಡಲಿದ್ದಾರೆ. ಹನುಮಾನ್ ಚಾಲೀಸಾ ಪಠಣೆ ಮಾಡುವ ಮೂಲಕ ಪರೋಕ್ಷವಾಗಿ ಬಜರಂಗದಳ ಬ್ಯಾನ್‌ಗೆ ಕೌಂಟರ್ ಕೊಡಲಿರುವ ಕೇಂದ್ರ ಸಚಿವ ಭಗವಂತ್ ಖೂಬಾ, ನಾನು ಹನುಮಾನ್ ಭಕ್ತನಾಗಿ ಕಾರ್ಯಕರ್ತರ ಜೊತೆ ಪವಿತ್ರ ಸ್ಥಳದಲ್ಲಿ ಹನುಮಾನ್ ಚಾಲೀಸಾ ಪಠಣೆ ಮಾಡುತ್ತೆನೆ ಎಂದರು.
ಬಜರಂಗದಳ ಹಾಗೂ ಬಜರಂಗಿಗೆ ಸಂಬಂಧವಿಲ್ಲ ಎಂಬ ಕಾಂಗ್ರೆಸ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಖೂಬಾ, ಕಾಂಗ್ರೆಸ್ ಬ್ಯಾಕ್ ಪುಟ್‌ಗೆ ಹೋಗುತ್ತದೆ. ಹೀಗಾಗಿ ಸಿದ್ದರಾಮಯ್ಯ ಕೂಡಾ ಲಿಂಗಾಯತರ ಬಗ್ಗೆ ಮಾತನಾಡಿ ಬ್ಯಾಕ್ ಪುಟ್ ಅನುಸರಿಸಿದರು. ಕಾಂಗ್ರೆಸ್ ರಿವರ್ಸ್ ಗೇರ್‌ನಲ್ಲಿ ನಡೆಯುವ ಪಕ್ಷವಾಗಿದ್ದು ಎಲ್ಲಾ ಹೇಳಿಕೆಯ ಜೊತೆಗೆ ರಿವರ್ಸ್ ಹೋಗುತ್ತದೆ. ಹೀಗಾಗಿ ಚುನಾವಣೆಯಲ್ಲೂ ಕಾಂಗ್ರೆಸ್ ರಿವರ್ಸ್ ಆಗುತ್ತದೆ ಎಂದು ಭವಿಷ್ಯ ನುಡಿದರು. ಇದನ್ನೂ ಓದಿ: ಇದು ನನ್ನ ಕೊನೆಯ ಚುನಾವಣೆ, ಆದರೆ ಸಕ್ರಿಯ ರಾಜಕೀಯದಲ್ಲಿರುತ್ತೇನೆ: ಜಗದೀಶ್ ಶೆಟ್ಟರ್
ಭಾಲ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 4 ಲಕ್ಷ ರೂ. ಮೌಲ್ಯದ ಸಾರಾಯಿ ಹಂಚಲು ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಿರುದ್ಧ ಭಗವಂತ್ ಖೂಬಾ ಆರೋಪ ಮಾಡಿದರು. ಇದನ್ನೂ ಓದಿ: ಹೆಣ್ಮಕ್ಕಳಿಗಾಗಿ ತಾಯಿ-ಮಗು ಆಸ್ಪತ್ರೆ ನಿರ್ಮಾಣ ಮಾಡ್ತೀವಿ – ಪ್ರಚಾರದ ಕೊನೇ ದಿನ ಡಿಕೆಶಿ ಗ್ಯಾರಂಟಿ