LatestMain PostNational

ದೇಶದ್ರೋಹ ಕಾಯ್ದೆಯನ್ನು ಪುನರ್ ಪರಿಶೀಲಿಸಲಾಗುತ್ತಿದೆ: ಸುಪ್ರೀಂಗೆ ಕೇಂದ್ರ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 124ಎ (ದೇಶದ್ರೋಹ)  ಪುನರ್ ಪರಿಶೀಲಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‍ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ದೇಶದ ಸಾರ್ವಭೌಮತ್ವದ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಕಾಯ್ದೆಯ ಪುನರ್ ಪರಿಶೀಲನೆ ಪೂರ್ಣಗೊಳ್ಳುವವರೆಗೂ ದೇಶದ್ರೋಹದ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಬಾರದು ಎಂದು ಕೇಂದ್ರ ಅಫಿಡವಿಟ್‌ ಸಲ್ಲಿಸಿದೆ. ಇದನ್ನೂ ಓದಿ: ಶಾಹೀನ್‌ ಬಾಗ್‌ ತೆರವು ಕಾರ್ಯಾಚರಣೆ – ರಾಜಕೀಯ ಪಕ್ಷದ ಯಾವ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ: ಸಿಪಿಐ(ಎಂ)ಗೆ ಸುಪ್ರೀಂ ಪ್ರಶ್ನೆ

ಬ್ರಿಟೀಷರ ಕಾಲದ ಕಾಯ್ದೆಗಳನ್ನು ಬದಿಗೆ ಸರಿಸಲು ಸರ್ಕಾರ ತೀರ್ಮಾನಿಸಲಾಗಿದೆ. ಇದರ ಭಾಗವಾಗಿ ದೇಶದ್ರೋಹ ಪರಿಶೀಲನೆ ಮಾಡುತ್ತಿದ್ದೇವೆ. ದೇಶದ್ರೋಹ ಕಾನೂನಿಗೆ ಸಂಬಂಧಿಸಿ ಹಲವು ವರ್ಗಗಳಿಂದ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳನ್ನು ಪ್ರಧಾನಿ ಮೋದಿ ಪರಿಗಣಿಸಿದ್ದಾರೆ. ಈ ಕಾಯ್ದೆಯ ದುರ್ಬಳಕೆ ಆಗುತ್ತಿರುವ ಬಗ್ಗೆಯೂ ಗಮನ ಹರಿಸಿದ್ದಾರೆ ಎಂದು ಕೇಂದ್ರ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದೆ.

ಸ್ವಾತಂತ್ರ್ಯ ಸಿಕ್ಕಿದ ಬಳಿಕವೂ 75 ವರ್ಷದ ಹಿಂದಿನ ಕಾನೂನು ಅಗತ್ಯವಿದೆಯೇ ಎಂದು 2021ರ ಜುಲೈನಲ್ಲಿ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು. ಇದನ್ನೂ ಓದಿ: ಭಾಷಣದ ವೇಳೆ ನೀರು ಕೇಳಿದ್ದ ಅಧಿಕಾರಿಯ ನೆರವಿಗೆ ಬಂದ ನಿರ್ಮಲಾ ಸೀತಾರಾಮನ್

ಸದ್ಯ ಈಗ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸಂವಿಧಾನ ಪೀಠದಲ್ಲಿ ನಡೆಸಬೇಕೇ ಅಥವಾ ಐದಕ್ಕಿಂತ ಹೆಚ್ಚಿನ ನ್ಯಾಯಾಧೀಶರ ಪೀಠದಲ್ಲಿ ನಡೆಸಬೇಕೇ ಎಂಬುದರ ಬಗ್ಗೆ ಕೋರ್ಟ್‌ ಪರಿಶೀಲಿಸುತ್ತಿದೆ.

Leave a Reply

Your email address will not be published.

Back to top button