ನವದೆಹಲಿ: ಸಂಸತ್ (Parliament) ಭವನದಲ್ಲಿ ವೀಕ್ಷಕರ ಗ್ಯಾಲರಿಯಿಂದ ಹಾರಿಬಂದು ಸ್ಮೋಕ್ ಬಾಂಬ್ (Smoke Bomb) ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪೈಕಿ 6ನೇ ಆರೋಪಿ ಮಹೇಶ್ ಕುಮಾವತ್ (Mahesh Kumawat) ಅನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಪ್ರಕರಣದಲ್ಲಿ ಮಾಸ್ಟರ್‌ಮೈಂಡ್ ಆಗಿರುವ ಲಲಿತ್ ಝಾ ದೆಹಲಿಯಿಂದ ತಪ್ಪಿಸಿಕೊಳ್ಳವಲ್ಲಿ ಮಹೇಶ್ ಕುಮಾವತ್ ಸಹಾಯ ಮಾಡಿದ ಆರೋಪದ ಮೇರೆಗೆ ಆತನನ್ನು ಇಂದು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 13ರಂದು ದೆಹಲಿಯ ಸಂಸತ್ ಭವನದಲ್ಲಿ ನಡೆದ ಘಟನೆಯನ್ನು ಮರುಸೃಷ್ಟಿಸಲು ಪೊಲೀಸರು ಸಂಸತ್ತಿನ ಅನುಮತಿಯನ್ನು ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಗೆಳತಿ ಕಾಲಿನ ಮೇಲೆ ಕಾರು ಹರಿಸಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ!
ಪ್ರಕರಣದ ಪ್ರಮುಖ ಪಾತ್ರಧಾರಿ ಪಶ್ಚಿಮ ಬಂಗಾಳ ಮೂಲದ ಲಲಿತ್ ಝಾನನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದು, ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸುವ ಸಂಚು ರೂಪಿಸಲು ಎಲ್ಲಾ ಆರೋಪಿಗಳು ಹಲವು ಬಾರಿ ಭೇಟಿಯಾಗಿದ್ದರು ಎಂದು ಸ್ವತಃ ಆರೋಪಿಗಳೇ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಕ್ರೀಡಾ ವಿದ್ಯಾರ್ಥಿಯೊಂದಿಗೆ ಕಾರಿನಲ್ಲಿ ಸೆಕ್ಸ್ – ಶಿಕ್ಷಕಿಯನ್ನ ರೆಡ್‌ಹ್ಯಾಂಡಾಗಿ ಹಿಡಿದು ಪೊಲೀಸರಿಗೊಪ್ಪಿಸಿದ ತಾಯಿ
ಅಲ್ಲದೇ ಆರೋಪಿಯು ಯಾವುದೇ ಶತ್ರು ದೇಶ ಅಥವಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆಯೇ ಎಂದು ಖಚಿತಪಡಿಸಿಕೊಳ್ಳಲು ಆರೋಪಿಯನ್ನು ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಗಂಡ-ಹೆಂಡತಿ ಹನಿಟ್ರ್ಯಾಪ್; ಕೋಟ್ಯಧಿಪತಿ ಉದ್ಯಮಿಗೆ ವಂಚನೆ – 6 ಮಂದಿ ಬಂಧನ
ಪ್ರಕರಣದಲ್ಲಿ ವಿವಿಧ ರಾಜ್ಯಗಳ 6 ಮಂದಿ ಆರೋಪಿಗಳು ಭಾಗಿಯಾಗಿದ್ದು, ಇಬ್ಬರು ಸಂಸತ್‌ನ ಒಳಗಡೆ ಸ್ಮೋಕ್ ಬಾಂಬ್ ಸಿಡಿಸಿದರೆ ಇನ್ನಿಬ್ಬರು ಸಂಸತ್ ಭವನದ ಹೊರಗಡೆ ಸ್ಮೋಕ್ ಬಾಂಬ್ ಸಿಡಿಸಿ ಘೋಷಣೆ ಕೂಗಿದ್ದರು. ಇನ್ನೋರ್ವ ಆರೋಪಿ ಸ್ಮೋಕ್ ಬಾಂಬ್ ದಾಳಿಯ ದೃಶ್ಯವನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದು ಪರಾರಿಯಾಗಿದ್ದ. ಇದೀಗ ಆರೋಪಿಗಳ ಪೈಕಿ ಎಲ್ಲರನ್ನೂ ಬಂಧಿಸಿದ್ದು, ಘಟನೆಯ ಹಿಂದಿನ ಉದ್ದೇಶವನ್ನು ಅರಿಯುವ ಸಲುವಾಗಿ ತೀವ್ರ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಲ್ಲೇ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ