-ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ
-ಕುಟುಂಬದ ಜೊತೆ ಎಸ್ಕೇಪ್ ಆಗ್ತಿದ್ದವ ಅರೆಸ್ಟ್
ಭೋಪಾಲ್: ನಿದ್ದೆ ಹಾಳು ಮಾಡಿದ ವ್ಯಕ್ತಿಯನ್ನು ಸೆಕ್ಯೂರಿಟಿ ಗಾರ್ಡ್ ಶೂಟ್ ಮಾಡಿ ಕೊಂದ ಘಟನೆ ಮಧ್ಯ ಪ್ರದೇಶದ ಗ್ವಾಲಿಯರ್ನಲ್ಲಿ ನಡೆದಿದೆ.
ಗ್ವಾಲಿಯರ್ನ ದನೋಲಿ ಪ್ರದೇಶದ ನಿವಾಸಿ ಕಬೀರ್ ತೋಮರ್(25) ಮೃತ ದುರ್ದೈವಿ. ಕಬೀರ್ನನ್ನು ಸೆಕ್ಯೂರಿಟಿ ಗಾರ್ಡ್ ಅಕ್ಕು ಶರ್ಮಾ ಶೂಟ್ ಮಾಡಿ ಕೊಲೆ ಮಾಡಿದ್ದಾನೆ. ನಿದ್ದೆಗೆಟ್ಟು ರಾತ್ರಿ ಪಾಳಿ ಕೆಲಸ ಮುಗಿಸಿ ಶರ್ಮಾ ಮನೆಗೆ ಬಂದು ಮಲಗಿದ್ದನು. ಈ ವೇಳೆ ಆತನ ಮನೆಯ ಬಳಿಯೇ ಇದ್ದ ಕಬೀರ್ ಮನೆ ಮಂದಿ ಜೊತೆ ಜಗಳವಾಡುತ್ತಾ, ಕಿರುಚಾಡುತ್ತಿದ್ದನು. ಇದರಿಂದ ಶರ್ಮಾಗೆ ನಿದ್ದೆ ಮಾಡಲು ತೊಂದರೆಯಾಗಿದೆ.
Advertisement
Advertisement
ಹೀಗಾಗಿ ಸಿಟ್ಟಿಗೆದ್ದ ಸೆಕ್ಯೂರಿಟಿ ಕಬೀರ್ಗೆ ಬುದ್ಧಿಕಲಿಸಲು ತನ್ನ ಬಳಿಯಿದ್ದ 12-ಬೋರ್ ಗನ್ ಹಿಡಿದು ಹೋಗಿದ್ದಾನೆ. ಕಬೀರ್ ಮನೆ ಬಳಿ ಹೋಗಿ ಆತನಿಗೆ ಸುಮ್ಮನಾಗುವಂತೆ ಸೆಕ್ಯೂರಿಟಿ ಹೇಳಿದರೂ ಆತ ಕೇಳದಿದ್ದಾಗ ಗನ್ನಿಂದ ಆತನಿಗೆ ಶೂಟ್ ಮಾಡಿದ್ದಾನೆ. ಹೆದರಿಸಲು ಹೋಗಿದ್ದ ಸೆಕ್ಯೂರಿಟಿ ಸಿಟ್ಟಿನಿಂದ ಕಬೀರ್ ಎದೆಗೆ ಗುಂಡು ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
Advertisement
ಘಟನೆ ನಡೆದ ಕೂಡಲೆ ಸೆಕ್ಯೂರಿಟಿ ಹೆದರಿ ಸ್ಥಳದಿಂದ ಕಾಲ್ಕಿತ್ತಿದ್ದು, ಗುಂಡಿನ ಶಬ್ದ ಕೇಳಿದ ಸ್ಥಳೀಯರು ಘಟನಾ ಸ್ಥಳಕ್ಕೆ ಬಂದು, ತಕ್ಷಣ ಕಬೀರ್ನನ್ನು ಆಸ್ಪತ್ರೆಗೆ ರವಾನಿಸಿದರೂ ಯಾವುದೇ ಪ್ರಯೋಜನೆಯಾಗಿಲ್ಲ. ಸೆಕ್ಯೂರಿಟಿ ಕಬೀರ್ನನ್ನು ಶೂಟ್ ಮಾಡಿ ಕೊಂದ ಘಟನೆ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ದೃಶ್ಯಗಳ ಆಧಾರದ ಮೇರೆಗೆ ಪೊಲೀಸರು ಆರೋಪಿ ಯಾರು ಎನ್ನುವುದು ಪತ್ತೆಹಚ್ಚಿದ್ದಾರೆ.
Advertisement
ಈ ಘಟನೆ ಬಳಿಕ ಸೆಕ್ಯೂರಿಟಿ ತನ್ನ ಕುಟುಂಬವನ್ನು ಕರೆದುಕೊಂಡು ನಗರದಿಂದ ದೂರ ಹೋಗಲು ಪ್ಲಾನ್ ಮಾಡಿದ್ದನು. ಆದರೆ ಅಷ್ಟರಲ್ಲಿ ಪೊಲೀಸರು ಸೆಕ್ಯೂರಿಟಿಯನ್ನು ಬಂಧಿಸಿದ್ದಾರೆ. ಸದ್ಯ ಆರೋಪಿ ಸಿಟ್ಟಿನಿಂದ ಕಬೀರ್ ಮೇಲೆ ಗುಂಡು ಹಾರಿಸಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ.