– ಸತೀಶ್‍ಗೆ ಕೆಲಸ ಕೊಡಿಸಿದ್ದರು ಸಚಿವ ಪುಟ್ಟರಂಗಶೆಟ್ಟಿ
ಚಾಮರಾಜನಗರ: ವೈದ್ಯರು ಹಾಗೂ ನರ್ಸ್ ಇಲ್ಲದ ವೇಳೆ ಗ್ಲುಕೋಸ್ ಬಾಟಲ್ ಬದಲಿಸಿ ಮಾನವೀಯತೆ ಮೆರೆದಿದ್ದ ಸೆಕ್ಯೂರಿಟಿ ಗಾರ್ಡ್ ನನ್ನು ಆಸ್ಪತ್ರೆ ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ.
ಸತೀಶ್ ಕೆಲಸ ಕಳೆದುಕೊಂಡ ಸೆಕ್ಯೂರಿಟಿ ಗಾರ್ಡ್. ಜನವರಿ 8ರಂದು ವೈದ್ಯರು ಹಾಗೂ ನರ್ಸ್ ಇಲ್ಲದ ವೇಳೆ ಸತೀಶ್ ರೋಗಿಗೆ ಗ್ಲುಕೋಸ್ ಬಾಟಲ್ ಬದಲಾಯಿಸಿದ್ದರು. ಈ ಮೂಲಕ ನರ್ಸ್ ಮಾಡುವ ಕೆಲಸವನ್ನು ಮಾಡಿ ಸತೀಶ್ ಮಾನವೀಯತೆ ಮೆರೆದಿದ್ದರು.
Advertisement
Advertisement
ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಜಿಲ್ಲಾಸ್ಪತ್ರೆಯ ಆಡಳಿತ ಮಂಡಳಿ ಸತೀಶ್ ಅವರನ್ನು ಸೆಕ್ಯೂರಿಟಿ ಗಾರ್ಡ್ ಕೆಲಸದಿಂದ ತೆಗೆದು ಹಾಕಿದೆ. ಸತೀಶ್ ತನ್ನ ಕುಟುಂಬ ನಿರ್ವಹಣೆಗೆ ಸೆಕ್ಯೂರಿಟಿ ಗಾರ್ಡ್ ಕೆಲಸವನ್ನು ಮೆಚ್ಚಿಕೊಂಡಿದ್ದರು. ಅಲ್ಲದೇ ಸಚಿವ ಪುಟ್ಟರಂಗಶೆಟ್ಟಿ ಅವರೇ ಸತೀಶ್‍ಗೆ ಸೆಕ್ಯೂರಿಟಿ ಗಾರ್ಡ್ ಕೆಲಸ ಕೊಡಿಸಿದ್ದರು. ಈಗ ಜಿಲ್ಲಾಸ್ಪತ್ರೆಯ ಡೀನ್ ರಾಜೇಂದ್ರ ಹಾಗೂ ಸರ್ಜನ್ ರಘುರಾಮ್ ಅವರಿಂದಾಗಿ ಇದೀಗ ಸತೀಶ್ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ. ಡೀನ್ ಹಾಗೂ ಸರ್ಜನ್ ಏಜೆನ್ಸಿಗೆ ಒತ್ತಡ ತರಿಸಿ ಸತೀಶ್‍ರನ್ನು ಕೆಲಸದಿಂದ ತೆಗೆಸಿದ್ದಾರೆ.
Advertisement
Advertisement
ಮಾಧ್ಯಮ ವಿರುದ್ಧ ಕಿಡಿ:
ಈ ಬಗ್ಗೆ ಡೀನ್ ರಾಜೇಂದ್ರ ಅವರನ್ನು ಪ್ರಶ್ನಿಸಿದಾಗ, ಆಸ್ಪತ್ರೆಯಲ್ಲಿ ನಡೆಯುವ ಘಟನೆಯ ಬಗ್ಗೆ ಸ್ಪಷ್ಟನೆ ಕೊಡುವ ಆಗತ್ಯ ಇಲ್ಲ. ಸರ್ಕಾರ ನಿಮಗೆ ಸ್ಪಷ್ಟನೆ ಕೊಡಿ ಎಂದು ನನ್ನಲ್ಲಿ ಹೇಳಿಲ್ಲ. ನನಗೆ ನಿಮ್ಮ ಜೊತೆ ಮಾತಾನಾಡುವುದಕ್ಕೆ ಇಷ್ಟ ಇಲ್ಲ. ಸ್ಪಷ್ಟನೆ ಕೇಳಿದರೆ ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡ್ತೀರಾ. ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಕೇಳಿದರೆ ನನಗೆ ಮಾತನಾಡಲು ಇಷ್ಟ ಇಲ್ಲ. ನೀವು ನನಗೆ ತೊಂದರೆ ಕೊಡುತ್ತಿದ್ದೀರಾ ಎಂದು ಡೀನ್ ರಾಜೇಂದ್ರ ಮಾಧ್ಯಮದವರ ವಿರುದ್ಧ ಕಿಡಿಕಾರಿದ್ದಾರೆ.
https://www.youtube.com/watch?v=aJGIl36QcOI
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv