ಸಿಡ್ನಿ: ಮೂರನೇ ಟಿ 20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಟವನ್ನು ಆಸ್ಟ್ರೇಲಿಯಾ ಬೌಲರ್ ಗಳು ನಿಲ್ಲಿಸದೇ ಇದ್ದರೂ ಗ್ರೌಂಡ್ ನಲ್ಲಿದ್ದ ಭದ್ರತಾ ಸಿಬ್ಬಂದಿ ಕ್ಯಾಚ್ ಹಿಡಿದು ಸಂಭ್ರಮಿಸಿದ್ದಾರೆ.
ಮ್ಯಾಕ್ಸ್ ವೆಲ್ ಎಸೆದ 17ನೇ ಓವರಿನ 3ನೇ ಎಸೆತವನ್ನು ಕೊಹ್ಲಿ ಸಿಕ್ಸರ್ ಗೆ ಅಟ್ಟಿದ್ದರು. ಈ ವೇಳೆ ಬೌಂಡರಿ ಲೈನಿನಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಸಿಕ್ಸ್ ಕ್ಯಾಚ್ ಪಡೆದು ಸಂಭ್ರಮಿಸಿದ್ದರು. ಭದ್ರತಾ ಸಿಬ್ಬಂದಿ ಸಂಭ್ರಮಿಸಿ ಪ್ರೇಕ್ಷಕರ ಗ್ಯಾಲರಿ ಬಳಿ ಹೋದಾಗ ಅಲ್ಲಿದ್ದ ಪ್ರೇಕ್ಷಕರು ತಲೆಯನ್ನು ಸವರಿ ಮೆಚ್ಚುಗೆ ಸೂಚಿಸಿದರು.
Advertisement
What a photo! #AUSvIND@RyanPierse | @GettySport pic.twitter.com/RwwHgpgNi5
— cricket.com.au (@cricketcomau) November 25, 2018
Advertisement
165 ರನ್ ಗಳ ಗುರಿ ಪಡೆದ ಭಾರತ 19.4 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 6 ವಿಕೆಟ್‍ಗಳ ಜಯಗಳಿಸಿತು. ವಿರಾಟ್ ಕೊಹ್ಲಿ ಔಟಾಗದೇ 61 ರನ್(41 ಎಸೆತ, 4 ಬೌಂಡರಿ, 2 ಸಿಕ್ಸರ್), ದಿನೇಶ್ ಕಾರ್ತಿಕ್ ಔಟಾಗದೇ 22 ರನ್(18 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿ ಭಾರತಕ್ಕೆ ವಿಜಯವನ್ನು ತಂದಿಟ್ಟರು. ಇದನ್ನೂ ಓದಿ: ಕೊನೆಯ ಓವರ್‌ನಲ್ಲಿ ಗೆದ್ದು ಸರಣಿ ಸಮ ಮಾಡಿಕೊಂಡ ಟೀಂ ಇಂಡಿಯಾ!
Advertisement
ಶಿಖರ್ ಧವನ್ 41 ರನ್(22 ಎಸೆತ, 6 ಬೌಂಡರಿ, 2 ಸಿಕ್ಸರ್), ರೋಹಿತ್ ಶರ್ಮಾ 23 ರನ್(16 ಎಸೆತ, 1 ಬೌಂಡರಿ, 2 ಸಿಕ್ಸರ್) ಹೊಡೆದರು. 4 ಓವರ್ ಎಸೆದು 36 ರನ್ ನೀಡಿ 4 ವಿಕೆಟ್ ಕಿತ್ತ ಕೃನಾಲ್ ಪಾಂಡ್ಯ ಅರ್ಹವಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
Advertisement
Secure hands! Virat Kohli's shot was elite, but this security guard's grab gets our Play of the Day!#AUSvIND @bet365_aus pic.twitter.com/eTMXtXwghi
— cricket.com.au (@cricketcomau) November 25, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv