ಬೆಂಗಳೂರು: ಸೆಕ್ಯೂರಿಟಿ ಗಾರ್ಡ್ ವಕೀಲೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನ ಅಶೋಕನಗರದಲ್ಲಿ ನಡೆದಿದೆ.
ವಕೀಲೆ ಕಾರ್ಯ ನಿಮಿತ್ತ ತಡರಾತ್ರಿವರೆಗೂ ತಮ್ಮ ಕಚೇರಿಯಲ್ಲಿ ಉಳಿದಿದ್ದರು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಕಚೇರಿಯಿಂದ ಹೊರಟು ಪಾರ್ಕಿಂಗ್‍ಗೆ ಬಂದು ಲೈಟ್ಸ್ ಆಫ್ ಮಾಡಿದ್ದಾನೆ. ಬಳಿಕ ಸೆಕ್ಯೂರಿಟಿ ಗಾರ್ಡ್ ವಕೀಲೆಯ ಮೈ ಮುಟ್ಟಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
Advertisement
ಸೆಕ್ಯೂರಿಟಿ ಗಾರ್ಡ್ ಮೈ ಮುಟ್ಟುತ್ತಿದ್ದಂತೆ ವಕೀಲೆ ಭಯದಿಂದ ಕೂಗಿದ್ದಾರೆ. ಬಳಿಕ ಸೆಕ್ಯೂರಿಟಿ ಗಾರ್ಡ್ ಅಲ್ಲಿಂದ ಪರಾರಿ ಆಗಿದ್ದಾನೆ. ಈ ಬಗ್ಗೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಸೆಕ್ಯೂರಿಟಿ ಗಾರ್ಡ್ ನನ್ನು ಹುಡುಕುತ್ತಿದ್ದಾರೆ.
Advertisement
Advertisement
ದೂರಿನಲ್ಲಿ ಏನಿದೆ?
ನಾನು ಶುಕ್ರವಾರ ರಾತ್ರಿ ಸುಮಾರು 9.30ಕ್ಕೆ ಆಫೀಸ್ ಕೆಲಸ ಮಾಡುತ್ತಿದ್ದಾಗ ಅದೇ ಬಿಲ್ಡಿಂಗ್ ಸೆಕ್ಯೂರಿಟಿ ಗಾರ್ಡ್(ಹೆಸರು ಗೊತ್ತಿಲ್ಲ) ಆಫೀಸ್‍ವೊಳಗೆ ಬಂದಿದ್ದಾನೆ. ಬಳಿಕ ರಾತ್ರಿ ಸುಮಾರು 11.50ಕ್ಕೆ ಆಫೀಸ್‍ವೊಳಗೆ ಲೈಟ್ಸ್ ಆಫ್ ಆಗಿತ್ತು. ಆಗ ನಾನು ಮೊಬೈಲ್ ಟಾರ್ಚ್ ಹಾಕಿ ಹೊರಗೆ ಬಂದೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಅಲ್ಲಿ ಪ್ರತ್ಯಕ್ಷನಾಗಿ ದುರುಗುಟ್ಟಿ ನೋಡಿ ಡೋರ್ ಲಾಕ್ ಮಾಡಿ ಟಾರ್ಚ್ ಆಫ್ ಮಾಡಿದ್ದಾನೆ. ಬಳಿಕ ಆರೋಪಿ ನನಗೆ ಕೆಳಗೆ ಬೀಳಿಸಿ ತಲೆ ಭಾಗವನ್ನು ಒತ್ತಿದ್ದು, ಆಗ ಆತ ಕುಡಿದಂತೆ ಅನಿಸಿತ್ತು. ಆರೋಪಿ ತನ್ನ ಎದೆ, ಕೈ ಹಾಗೂ ಮೈ ಭಾಗವನ್ನು ಮುಟ್ಟಿ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ. ನಾನು ಆಗ ಜೋರಾಗಿ ಕೂಗಾಡಿದ್ದರಿಂದ ಆತ ಅಲ್ಲಿಂದ ಪರಾರಿ ಆಗಿದ್ದಾನೆ ಎಂದು ವಕೀಲೆ ದೂರಿನಲ್ಲಿ ದಾಖಲಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv