– ವೈಫಲ್ಯದ ಹೊಣೆ ಹೊತ್ತ ಸ್ಪೀಕರ್
ನವದೆಹಲಿ: ಸಂಸತ್ ಭವನದ ಮೇಲೆ ಭಯೋತ್ಪಾದಕ ದಾಳಿ ನಡೆದ ಕರಾಳ ನೆನಪಿಗೆ ಇಂದು ಭರ್ತಿ 22 ವರ್ಷ. ಇದೇ ದಿನವೇ ಸಂಸತ್ (Parliament) ಭವನದಲ್ಲಿ ಭಾರೀ ಭದ್ರತಾ ಲೋಪ (Security Breach in LokSabha) ನಡೆದಿದ್ದು, ದಾಳಿ ಪ್ರಯತ್ನ ನಡೆದಿದೆ.
Advertisement
ಲೋಕಸಭೆ (Loksabha) ಕಲಾಪ ನೋಡುವ ನೆಪದಲ್ಲಿ ವೀಕ್ಷಕರ ಗ್ಯಾಲರಿಗೆ ಬಂದಿದ್ದ ಇಬ್ಬರು ಕಿಡಿಗೇಡಿಗಳು ಮತ್ತು ಸಂಸತ್‍ನ ಟ್ರಾನ್ಸ್ ಪೋರ್ಟ್ ಭವನದ ಬಳಿ ಮತ್ತಿಬ್ಬರು ಕಿಡಿಗೆಡಿಗಳು ಹಲಚಲ್ ಸೃಷ್ಟಿಸಿದ್ದಾರೆ. ಲೋಕಸಭೆಯಲ್ಲಿ ಝೀರೋ ಹವರ್ ನಡೆಯತ್ತಿದ್ದ ಸಂದರ್ಭದಲ್ಲಿ ವೀಕ್ಷಕರ ಗ್ಯಾಲರಿಯಲ್ಲಿದ್ದ ಇಬ್ಬರು ಕಿಡಿಗೇಡಿಗಳ ಪೈಕಿ ಒಬ್ಬ ಏಕಾಏಕಿ ಸಂಸದರತ್ತ ಹಾರಿದ್ರೆ, ಮತ್ತೊಬ್ಬ ತನ್ನ ಶೂನಲ್ಲಿದ್ದ `ಸ್ಮೋಕ್ ಬಾಂಬ್’ ಸಿಡಿಸಿದ. ಇದನ್ನು ನಿರೀಕ್ಷೆ ಮಾಡದ ಸಂಸದರು ಕೂಡ್ಲೇ ಗಾಬರಿಗೊಂಡಿ ಓಡಿದ್ರು.
Advertisement
Advertisement
ಕೆಲವರು ಧೈರ್ಯ ಮಾಡಿ ಇಬ್ಬರನ್ನು ಹಿಡಿದು ಸಖತ್ತಾಗಿ ಬಾರಿಸಿದ್ರು. ಭದ್ರತಾ ಸಿಬ್ಬಂದಿ ಇಬ್ಬರನ್ನು ವಶಕ್ಕೆ ಪಡೆದರು. ಕೂಡಲೇ ಸ್ಪೀಕರ್ ಕಲಾಪವನ್ನು ಎರಡು ಗಂಟೆಗೆ ಮುಂದೂಡಿದರು. ಲೋಕಸಭೆಯಲ್ಲಿ ಹಲಚಲ್ ಸೃಷ್ಟಿಸಿದವರನ್ನು ಮೈಸೂರಿನ ಮನೋರಂಜನ್ ಮತ್ತು ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ ಸಾಗರ್ ಶರ್ಮಾ ಎಂದು ಗುರುತಿಸಲಾಗಿದೆ. ವಿಶೇಷ ಅಂದ್ರೆ ಈ ಇಬ್ಬರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ವಿಸಿಟರ್ಸ್ ಪಾಸ್ ಪಡೆದು ಸಂಸತ್‍ಗೆ ಬಂದಿದ್ರು. ಈ ಹೊತ್ತಲ್ಲಿ ಪ್ರಧಾನಿ ಮೋದಿಯಾಗ್ಲಿ (Narendra Modi), ಗೃಹ ಸಚಿವರಾಗ್ಲಿ ಇರಲಿಲ್ಲ.
Advertisement
ಇದೇ ಹೊತ್ತಲ್ಲಿ ಸಂಸತ್ ಭವನದ ಹೊರಗೆ ಕೂಡ ಇಬ್ಬರು, ಕೇಂದ್ರದ ವಿರುದ್ಧ ಘೋಷಣೆ ಕೂಗುತ್ತಾ, ಸ್ಮೋಕ್ ಬಾಂಬ್ ಸಿಡಿಸಿದರು. ಇದು ಕೂಡ ಗಾಬರಿಗೆ ಕಾರಣವಾಯ್ತು. ಕೂಡಲೇ ಭದ್ರತಾ ಸಿಬ್ಬಂದಿ ಇಬ್ಬರನ್ನು ವಶಕ್ಕೆ ಪಡೆದರು. ನಾಲ್ವರಲ್ಲದೆ, ಪರಾರಿಯಾಗಿದ್ದ ಇನ್ನಿಬ್ಬರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಅದೃಷ್ಟವಶಾತ್ ಯಾರ ಬಳಿಯೂ ಯಾವುದೇ ಶಸ್ತಾಸ್ತ್ರ ಇರಲಿಲ್ಲ. ಅವರು ಬಿಡುಗಡೆ ಮಾಡಿದ ಗ್ಯಾಸ್ ಕೂಡ ಅಪಾಯಕಾರಿ ಆಗಿರಲಿಲ್ಲ. ಇನ್ನೂ, ಸರ್ವಪಕ್ಷಗಳ ಸಭೆ ನಡೆಸಿದ ಸ್ಪೀಕರ್, ಸದ್ಯಕ್ಕೆ ವಿಸಿಟರ್ಸ್ ಪಾಸ್ ನೀಡಿಕೆಯನ್ನು ರದ್ದು ಮಾಡಿದ್ದಾರೆ. ಸಮಗ್ರ ತನಿಖೆಗೆ ಸ್ಪೀಕರ್ ಆದೇಶ ನೀಡಿದ್ದಾರೆ. ಈ ವೈಫಲ್ಯದ ಹೊಣೆ ನನ್ನದೇ ಎಂದು ಸ್ಪೀಕರ್ ತಿಳಿಸಿದ್ದಾರೆ.