ನವದೆಹಲಿ: ಸಂಸತ್ ಮೇಲಿನ ದಾಳಿಯ ಪ್ರಮುಖ ರೂವಾರಿ ಎಂದೇ ಕರೆಸಿಕೊಳ್ಳುತ್ತಿರುವ ಲಲಿತ್ ಝಾ (Lalit Jha) ಹೆಚ್ಚಿನ ವಿಚಾರಣೆಗೆ ಏಳು ದಿನಗಳ ಕಾಲ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ. ಲಲಿತ್ ಝಾನನ್ನು ಶುಕ್ರವಾರ ಪಟಿಯಾಲ ಕೋರ್ಟ್ (Patiala Court) ಮುಂದೆ ಹಾಜರುಪಡಿಸಲಾಯಿತು, ಘಟನೆಯ ಪ್ರಮುಖ ಆರೋಪಿಯಾಗಿದ್ದು, ವಿಚಾರಣೆಗೆ ಹದಿನೈದು ದಿನಗಳ ಸಮಯಬೇಕು ಎಂದು ಪೊಲೀಸರ ಪರ ವಕೀಲರು ಮನವಿ ಮಾಡಿದರು.
#UPDATE | Patiala House Court in Delhi sends accused Lalit Jha to seven-day Police remand. https://t.co/lPKhL1ybIn
— ANI (@ANI) December 15, 2023
Advertisement
ಘಟನೆಯ ವಿವರ ನೀಡಿದ ಪಬ್ಲಿಕ್ ಪ್ರಾಸಿಕ್ಯೂಟರ್ ಅಖಂಡ ಪ್ರತಾಪ್ ಸಿಂಗ್ ಇಂದು ದೆಹಲಿ ಪೊಲೀಸರ ಪರವಾಗಿ ಹಾಜರಾಗಿ ಝಾನನ್ನು ಹದಿನೈದು ದಿನಗಳ ಕಸ್ಟಡಿಗೆ ಕೋರಿದರು. ಆದರೆ ಪಟಿಯಾಲ ಹೌಸ್ ಕೋರ್ಟ್ ನ್ಯಾಯಾಧೀಶರು ಏಳು ದಿನಗಳ ಪೊಲೀಸ್ ಕಸ್ಟಡಿಗೆ (Police Custody) ನೀಡುವುದಾಗಿ ಹೇಳಿದರು.
Advertisement
Advertisement
ಘಟನೆಯ ಬಳಿಕ ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಲಲಿತ್ ಝಾ ಗುರುವಾರ ರಾತ್ರಿ ಏಕಾಏಕಿ ಕರ್ತವ್ಯಪಥ್ ಪೊಲೀಸ್ ಠಾಣೆಗೆ ಬಂದು ಶರಣಾದನು. ಆತನನ್ನು ಬಂಧಿಸಿದ ಪೊಲೀಸರು ಪ್ರಕರಣ ತನಿಖೆ ನಡೆಸುತಿರುವ ಸ್ಪೇಷಲ್ ಟೀಂಗೆ ಹಸ್ತಾಂತರ ಮಾಡಿದರು. ಶನಿವಾರ ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ಸಬ್ದರ್‍ಜಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ಕೋರ್ಟ್ ಮುಂದೆ ಹಾಜರುಪಡಿಸಿದರು. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ಪ್ರಕರಣ – ಮಾಸ್ಟರ್‌ಮೈಂಡ್ ಲಲಿತ್ ಬಂಧನ
Advertisement
#WATCH | Parliament security breach accused Lalit Jha being brought out of Patiala House Court, in Delhi.
He has been sent to a 7-day Police remand. pic.twitter.com/aLGqzuuGoM
— ANI (@ANI) December 15, 2023
ಪಶ್ಚಿಮ ಬಂಗಾಳ ಮೂಲದ ಲಲಿತ್ ಝಾ ಪ್ರಮುಖ ಆರೋಪಿಯಾಗಿದ್ದು, ಈ ಮೊದಲು ಬಂಧಿತರಾಗಿರುವ ಮನೋರಂಜರ್, ಸಾಗರ್ ಶರ್ಮಾ, ಅಮುಲ್ ಶಿಂಧೆ, ನೀಲಂಕೌರ್ ಗೆ ಸಂಸತ್‍ನಲ್ಲಿ ದಾಳಿ ನಡೆಸಲು ಪ್ರೇರೆಪಿಸಿದ್ದಾರೆ ಎನ್ನಲಾಗಿದೆ. ಗುರುಗ್ರಾಮ ಮನೆಯೊಂದರಲ್ಲಿ ಎಲ್ಲರಿಗೂ ತರಬೇತಿ ನೀಡಿ ಜವಬ್ದಾರಿ ಹಂಚಿಕೆ ಮಾಡಿದ್ದ ಎನ್ನಲಾಗಿದೆ. ದಾಳಿ ಬೆನ್ನಲೆ ತಲೆಮರೆಸಿಕೊಂಡು ರಾಜಸ್ಥಾನಕ್ಕೆ ತೆರಳಿದ್ದ ಲಲಿತ್ ಝಾ, ಇತರೆ ಆರೋಪಿಗಳನ್ನು ನಾಶ ಮಾಡಿ ಸಾಕ್ಷ್ಯ ನಾಶಕ್ಕೆ ಪ್ರಯತ್ನ ಮಾಡಿದ್ದಾನೆ ಎಂದು ಮೂಲಗಳು ಹೇಳಿವೆ.