ಮೈಸೂರು: ದೆಹಲಿಯ ಸಂಸತ್ (Parliament) ಭವನದ ಕಲಾಪದ ವೇಳೆ ಸ್ಮೋಕ್ ಬಾಂಬ್ (Smoke Bomb) ಹಾಕಿದ್ದ ಆರೋಪಿ ಮನೋರಂಜನ್‍ನ ಮೈಸೂರಿನ ನಿವಾಸಕ್ಕೆ ಇಂದು ದೆಹಲಿಯ ಪೊಲೀಸರು ಎಂಟ್ರಿ ಕೊಟ್ಟಿದ್ರು. ಓರ್ವ ಮಹಿಳಾ ಪೊಲೀಸ್ ಸೇರಿದಂತೆ ಇಬ್ಬರು ಅಧಿಕಾರಿಗಳ ತಂಡ ಮನೋರಂಜನ್ ನಿವಾಸದಲ್ಲಿ ತಪಾಸಣೆ ಮಾಡಿದ್ರು.
ಮನೆಯಿಂದ ಹೊರಗೆ ಹೋಗಿದ್ದ ಮನೋರಂಜನ್ (Manoranjan) ತಂದೆ ದೇವರಾಜೇಗೌಡ ಮಧ್ಯಾಹ್ನದ ವೇಳೆಗೆ ಮನೆಗೆ ಬಂದ್ರು. ಈ ಮೊದಲೇ ಮನೋರಂಜನ್ ರೂಂ ಸೀಜ್ ಮಾಡಿದ್ದ ಪೊಲೀಸರು, ಕೊಠಡಿ ತೆರೆದು ಇಂಚಿಂಚು ಪರಿಶೀಲನೆ ಮಾಡಿದ್ರು. ಮನೋರಂಜನ್ ಪೋಷಕರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ ಪೊಲೀಸ್ರು, ತಂದೆ ತಾಯಿ ಇಬ್ಬರನ್ನೂ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ್ರು. ಇದನ್ನೂ ಓದಿ: ಲೋಕಸಭೆಯಿಂದ ಮತ್ತೆ 31 ಸಂಸದರು ಅಮಾನತು
ಸಾಗರ್ ಶರ್ಮ ನಿಮಗೆ ಪರಿಚಯ ಇದ್ದಾನಾ. ಎಷ್ಟು ದಿನಗಳ ಹಿಂದೆ ಸಾಗರ್ ಶರ್ಮ ಬಂದಿದ್ದ. ಸಾಗರ್ ಒಬ್ಬನೇ ಬಂದಿದ್ನಾ, ನಿಮ್ಮ ಮಗ ಎಂಜಿನಿಯರಿಂಗ್ ಯಾಕಾಗಿ ಅರ್ಧಕ್ಕೆ ನಿಲ್ಲಿಸಿದ್ದ ಕೆಲಸ ಮಾಡದ ಮೇಲೆ ಅವನಿಗೆ ಹಣ ಎಲ್ಲಿಂದ ಬರುತ್ತಿತ್ತು. ಮನೆಯಲ್ಲಿ ಯಾವ ರೀತಿ ಇರ್ತಾ ಇದ್ದ, ಅವನ ಹವ್ಯಾಸ ಏನು?. ಯಾರ ಜೊತೆಯಲ್ಲಾದ್ರೂ ಸಂಪರ್ಕ ಇತ್ತಾ ಅಂತಾ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇದನ್ನೂ ಓದಿ: ಮೈಸೂರು ಬಿಟ್ಟು ಹೊರಗಡೆ ತೆರಳಬೇಡಿ: ಮನೋರಂಜನ್ ಕುಟುಂಬಕ್ಕೆ ಗುಪ್ತಚರ ಇಲಾಖೆ ಸೂಚನೆ
ಒಟ್ಟಿನಲ್ಲಿ ಒಂದಷ್ಟು ಮಹತ್ವದ ಮಾಹಿತಿಯನ್ನ ಸಂಗ್ರಹಿಸಿರೋ ಪೊಲೀಸ್ರು, ಮನೋರಂಜನ್ ರೂಂ ನಲ್ಲಿ ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಪಾಪಿ ಪುತ್ರನ ಕಿತಾಪತಿಗೆ ಮನೋರಂಜನ್ ಪೋಷಕರು ಪೊಲೀಸ್ ವಿಚಾರಣೆಯಿಂದ ದಂಗಾಗಿ ಹೋಗಿದ್ದಾರೆ.