ಕೊಪ್ಪಳ: ದಾವಣಗೆರೆಯಲ್ಲಿ ಮೋದಿ (Narendra Modi) ಭದ್ರತೆ ಲೋಪ ವಿಚಾರಕ್ಕೆ ಸಂಬಂಧಿಸಿದಂತೆ ಕೊಪ್ಪಳ ತಾಲೂಕಿನ ಗುಡ್ಲಾನೂರಿನಲ್ಲಿರುವ ಯುವಕನ ಮನೆಗೆ ಬೀಗ ಜಡಿಯಲಾಗಿದೆ.
ಕುಡಿತದ ದಾಸನಾಗಿರೋ ಬಸವರಾಜ (28) ನಿತ್ಯವೂ ಕುಡಿದು ಗಲಾಟೆ ಮಾಡುತ್ತಿದ್ದ. ಸದ್ಯ ಗ್ರಾಮದಲ್ಲಿರುವ ಬಸವರಾಜ್ ಮನೆಗೆ ಬೀಗ ಹಾಕಲಾಗಿದೆ.
Advertisement
Advertisement
ನಡೆದಿದ್ದೇನು..?: ಶನಿವಾರ ಮೋದಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಗ್ರಾಮಸ್ಥರ ಜೊತೆ ಬಸ್ಸಿನಲ್ಲಿ ದಾವಣಗೆರೆಗೆ ತೆರಳಿದ್ದ. ಈ ವೇಳೆ ಅಲ್ಲಿ ಮೋದಿ ರೋಡ್ ಶೋ (Road Show) ನಡೆಸುತ್ತಿದ್ದ ಸಂದರ್ಭದಲ್ಲಿ ಮೋದಿ ವಾಹನದ ಬಳಿ ನುಗ್ಗಲು ಯತ್ನಿಸಿದ್ದಾನೆ. ತಕ್ಷಣವೇ ಆತನನ್ನು ಎಡಿಜಿಪಿ ಅಲೋಕ್ ಕುಮಾರ್ (Alok Kumar) ಹಾಗೂ ಎಸ್‍ಪಿಜಿ ಅಧಿಕಾರಿಗಳು ತಡೆದಿದ್ದಾರೆ. ಬಳಿಕ ಆತನನ್ನು ತಡೆದು ವಶಕ್ಕೆ ಪಡೆದು ವಿಚಾರಣೆಗೆ ಕರೆದೊಯ್ದಿದ್ದರು. ಇದನ್ನೂ ಓದಿ: ಪ್ರಧಾನಿ ವಾಹನದ ಬಳಿ ನುಗ್ಗಲು ಯತ್ನಿಸಿದ ಯುವಕ- ಭದ್ರತಾ ಲೋಪವಾಗಿಲ್ಲ ಅಂದ್ರು ಎಸ್‍ಪಿ
Advertisement
Advertisement
ರಿಷ್ಯಂತ್ ಸ್ಪಷ್ಟನೆ: ಮೋದಿ ರೋಡ್ ಶೋ ಭದ್ರತಾ ಲೋಪಾ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್ ಪಿ ರಿಷ್ಯಂತ್, ಮೋದಿಯವರ ರೋಡ್ ಶೋ ನಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ. ಬ್ಯಾರಿಕೇಡ್ ಬಿದ್ದ ಹಿನ್ನೆಲೆ ತಳ್ಳಾಟದಿಂದ ಯುವಕ ಮುಂದೆ ಬಂದಿದ್ದಾನೆ. ಮೋದಿಯವರಿಗೂ ಆ ಯುವಕನಿಗೂ 20 ಅಡಿ ಅಂತರವಿತ್ತು. ಯಾವುದೇ ಭದ್ರತಾ ಲೋಪವಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದರು.