ಕೋಲ್ಕತ್ತಾ: ಹಿಂಸಾತ್ಮಕ ಪ್ರತಿಭಟನೆಗಳು ನಡೆಯುವ ಮಾಹಿತಿಯ ಮೇರೆಗೆ ಕೋಲ್ಕತ್ತಾ (Kolkata) ನಗರದಲ್ಲಿ ಮೇ 28 ರಿಂದ 60 ದಿನಗಳ ಸುದೀರ್ಘ ಕಾಲ ಸೆಕ್ಷನ್ 144 (Section 144) ಜಾರಿಗೊಳಿಸಲಾಗಿದೆ.
ಮೇ 28 ರಿಂದ ಜು.26 ರವರೆಗೆ 60 ದಿನಗಳವರೆಗೆ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುವ ಸಾಧ್ಯತೆ ಇದೆ. ಮಾಹಿತಿ ಆಧಾರದ ಮೇಲೆ ಮುಂದಿನ ಆದೇಶದವರೆಗೆ ಐಪಿಸಿಯ ಸೆಕ್ಷನ್ 144ನ್ನು ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿಧಿಸಿದ್ದಾರೆ. ಇದನ್ನೂ ಓದಿ: ಮಾನನಷ್ಟ ಕೇಸ್- ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್ ದೋಷಿ
ಸಾರ್ವಜನಿಕ ಶಾಂತಿ ಕಾಪಾಡಲು ಈ ಆದೇಶ ಅಗತ್ಯವಾಗಿದೆ. ಇದರ ಅನ್ವಯ ಪೊಲೀಸರು (Kolkata Police) ನಿರ್ದೇಶನದ ಅನುಸಾರವಾಗಿ ಶಾಂತಿ ಕದಡುವವರ ವಿರುದ್ಧ ಕಾರ್ಯಾಚರಣೆಗಿಳಿಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- Advertisement
- Advertisement
ಬೌಬಜಾರ್ ಪೊಲೀಸ್ ಠಾಣೆ, ಹೇರ್ ಸ್ಟ್ರೀಟ್ ಪೊಲೀಸ್ ಠಾಣೆ ಮತ್ತು ಕೋಲ್ಕತ್ತಾ ಟ್ರಾಫಿಕ್ ಗಾರ್ಡ್ ಹೆಡ್‍ಕ್ವಾರ್ಟರ್‌ಗಳು ವ್ಯಾಪ್ತಿಯಲ್ಲಿರುವ ಬೆಂಟಿಕ್ ಸ್ಟ್ರೀಟ್ ಹೊರತುಪಡಿಸಿ, ಕೆಸಿ ದಾಸ್ ಕ್ರಾಸಿಂಗ್‍ನಿಂದ ವಿಕ್ಟೋರಿಯಾ ಹೌಸ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಸೆಕ್ಷನ್ 144 ಜಾರಿಗೊಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮೇ 28 ರಂದು ಕೋಲ್ಕತ್ತಾದಲ್ಲಿ ರೋಡ್ ಶೋ ನಡೆಸಲಿದ್ದಾರೆ. ಈ ರೋಡ್ ಶೋ ತಪ್ಪಿಸಬೇಕೆಂದು ಮಮತಾ ಬ್ಯಾನರ್ಜಿ ಉದ್ದೇಶ ಪೂರ್ವಕವಾಗಿ ನಿಷೇಧಾಜ್ಞೆ ಹೇರಿದ್ದಾರೆ. ಇದನ್ನು ಪ್ರಶ್ನಿಸಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಬಿಜೆಪಿ ಹೇಳಿದೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಗೂಗಲ್ ಕಂಪನಿಯ ಫೋನ್ – ಹೂಡಿಕೆ ಕಳೆದುಕೊಂಡ ಕರ್ನಾಟಕ