ಜೀವನದಲ್ಲಿ ಖುಷಿಯನ್ನು ಯಾರು ಬಯಸಲ್ಲ ಹೇಳಿ? ಹ್ಯಾಪಿ ಜೀವನ ನಡೆಸುವುದೆಂದರೆ ಎಲ್ಲರಿಗೂ ಇಷ್ಟ. ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ನೋವು, ಕಹಿ ನೆನಪುಗಳು, ಒತ್ತಡ ಇರಬಾರದು ಅಂತಾ ಬಯಸುತ್ತಾರೆ. ಸದಾ ಖುಷಿಯಾಗಿರಬೇಕು ಅಂತಾ ಆಶಿಸುತ್ತಾರೆ.
ಕೆಲವರಂತೂ ಸದಾ ಸಂತೋಷವಾಗಿ ಇರುತ್ತಾರೆ. ತಮ್ಮ ಹ್ಯಾಪಿ ಲೈಫ್ ಮೂಲಕ ಇತರರಿಗೂ ಇಷ್ಟ ಆಗುತ್ತಾರೆ. ಈ ರೀತಿ ಇರುವವರಲ್ಲಿ ಕೆಲವು ವಿಶೇಷ ಗುಣಗಳಿರುತ್ತವೆ. ಆ ರಹಸ್ಯ ಗುಣಗಳೇನು ಗೊತ್ತಾ? ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..
Advertisement
Advertisement
1) ಖುಷಿ ಹುಡುಕುವಂಥದ್ದಲ್ಲ
ನೀವು ಖುಷಿಯನ್ನು ಹುಡುಕಲು ಹೊರಟರೆ, ಖಂಡಿತ ಅದು ನಿಮಗೆ ಸಿಗುವುದಿಲ್ಲ. ಖುಷಿಗಾಗಿ ಹುಡಕಾಟ ನಡೆಸುವ ನೀವು ಎಷ್ಟು ಅತೃಪ್ತ ಭಾವನೆ ಹೊಂದಿದ್ದೀರಿ ಎಂಬುದು ಗೊತ್ತಾಗುತ್ತದೆ. ಸದಾ ಹ್ಯಾಪಿಯಾಗಿ ಇರುವವರು ಎಂದಿಗೂ ಖುಷಿಯಾಗಿ ಹುಡುಕಾಟ ನಡೆಸುವುದಿಲ್ಲ.
Advertisement
2) ಸದಾ ಇತರರೊಂದಿಗೆ ಬೆರೆಯುವುದು
ಖುಷಿಯಾಗಿರುವವರು ಎಂದಿಗೂ ಒಬ್ಬಂಟಿಯಾಗಿರಲು ಬಯಸುವುದಿಲ್ಲ. ಇತರರೊಂದಿಗೆ ಸದಾ ಬೆರೆಯುತ್ತಾರೆ. ಜನರ ಸಂಪರ್ಕದಲ್ಲಿರಲು ಇಷ್ಟ ಪಡುತ್ತಾರೆ. ಮನುಷ್ಯ ಒಂಟಿಯಾಗಿದ್ದರೆ ಮನಸ್ಸಿನಲ್ಲಿ ನಾನಾ ಯೋಚನೆ, ಚಿಂತೆ ಮೂಡುತ್ತದೆ ಎನ್ನುತ್ತಾರೆ ಮನೋವೈದ್ಯರು. ಇತರರೊಂದಿಗೆ ಬೆರೆತಾಗ ಚಿಂತೆಗೆ ಅವಕಾಶ ಇರಲ್ಲ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?
Advertisement
3) ಸಮಸ್ಯೆಗಳತ್ತ ಗಮನ ಹರಿಸದಿರುವುದು
ಹಸನ್ಮುಖಿಗಳು ಸಮಸ್ಯೆಗಳನ್ನು ಪರಿಹರಿಸುವತ್ತ ಯಾವಾಗಲೂ ಗಮನಹರಿಸುವುದಿಲ್ಲ. ಅವರು ಚಲನಶೀಲ ಮನೋಭಾವ ಹೊಂದಿರುತ್ತಾರೆ. ತಮ್ಮ ತಪ್ಪುಗಳಿಗಾಗಿ ಪೂರ್ಣ ಹೃದಯದಿಂದ ಕ್ಷಮೆಯಾಚಿಸುತ್ತಾರೆ. ಯಾವ ವಿಷಯವನ್ನೂ ದೊಡ್ಡದು ಮಾಡಿಕೊಳ್ಳಲು ಹೋಗುವುದಿಲ್ಲ.
4) ಎಲ್ಲಾ ವಿಷಯಗಳನ್ನೂ ಲಘುವಾಗಿಯೇ ಪರಿಗಣಿಸುವುದು
ಯಾವಾಗಲೂ ಖುಷಿಯಾಗಿರಬೇಕು, ಚಿಂತೆಯಿರಬಾರದು ಎಂದು ಬಯಸುವವರು ಯಾವ ವಿಷಯವನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಎಲ್ಲವನ್ನೂ ಲಘುವಾಗಿಯೇ ಸ್ವೀಕರಿಸುತ್ತಾರೆ. ಜೀವನದಲ್ಲಿ ಕಷ್ಟಕರ ಸಂದರ್ಭಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಯಾವಾಗಲೂ ಸಕಾರಾತ್ಮಕ ಹಾದಿಯಲ್ಲೇ ನಡೆಯಲು ಪ್ರಯತ್ನಿಸುತ್ತಾರೆ.
5) ತಮ್ಮ ನ್ಯೂನತೆ, ಅಪೂರ್ಣತೆ ಬಗ್ಗೆ ಚಿಂತಿಸದಿರುವುದು
ಜೀವನದಲ್ಲಿ ಸಂತೋಷವಾಗಿರಬೇಕು ಎನ್ನುವವರು ತಮ್ಮ ಸ್ವಂತ ನ್ಯೂನತೆ ಮತ್ತು ಅಪೂರ್ಣತೆಗಳ ಬಗ್ಗೆ ಎಂದಿಗೂ ಚಿಂತಿಸುವುದಿಲ್ಲ. ಗೇಲಿ ಮನೋಭಾವದವರಾಗಿರುತ್ತಾರೆ. ಎಲ್ಲಾ ನಕಾರಾತ್ಮಕತೆಯನ್ನು ಜೀವನದ ಭಾಗವಾಗಿ ಸ್ವೀಕರಿಸುತ್ತಾರೆ.