CinemaKarnatakaLatestSandalwood

ಸರ್ಜಾ ವಿರುದ್ಧ ಶೃತಿ ದೂರು ದಾಖಲಿಸಲು ಹಿಂದಿದ್ದ ಅಸಲಿ ಕಾರಣ ಬಯಲು!

ಬೆಂಗಳೂರು: ರಾಟೆ ಹುಡುಗಿ ಶೃತಿ ಹರಿಹರನ್ ಅವರು ಬಹುಭಾಷಾ ನಟ ಅರ್ಜುನ್ ಸರ್ಜಾ ವಿರುದ್ಧ ಠಾಣೆಯಲ್ಲಿ ಲೈಂಗಿಕ ಕಿರುಕುಳ ದೂರು ನೀಡಿರುವ ಅಸಲಿ ಕಾರಣ ಬಯಲಾಗಿದೆ.

ನಟ ಅಂಬರೀಶ್ ಮಾತು ಕೇಳದೆ ಅರ್ಜುನ್ ಸರ್ಜಾ ಇಷ್ಟೆಲ್ಲ ರಾದ್ಧಾಂತ ಮಾಡಿಕೊಂಡರು ಎನ್ನುವ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಅಷ್ಟಕ್ಕೂ ಶೃತಿ ಅವರಿಗೆ ಅರ್ಜುನ್ ಸರ್ಜಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಕೊಡುವ ಉದ್ದೇಶವಿರಲಿಲ್ಲ. ಇದಕ್ಕಾಗಿಯೇ ಸಂಧಾನಕ್ಕೆ ಹೋಗಿದ್ದರು.

ಈ ಮಧ್ಯೆ ಅಂಬರೀಶ್ ಕೂಡ ಸ್ಯಾಂಡಲ್ ವುಡ್‍ನಲ್ಲಿ ಪೊಲೀಸರ ಎಂಟ್ರಿಗೆ ಅವಕಾಶ ಕೊಡಲ್ಲ. ಸರ್ಜಾನಾ ನಾನು ಮನವೊಲಿಸ್ತೀನಿ. ನೀನು ದೂರು ಕೊಡಲ್ಲ ಅಂತಾ ಪ್ರಾಮಿಸ್ ಮಾಡು ಅಂತಾ ಶೃತಿ ಮನವೊಲಿಸಿದರು. ಜೊತೆಗೆ ಮಾಧ್ಯಮದ ಮುಂದೆ ನೀನು ಸರ್ಜಾ ಶೇಕ್‍ಹ್ಯಾಂಡ್ ಮಾಡಿ ಇಲ್ಲೆ ಎಲ್ಲಾ ಇತ್ಯರ್ಥ ಮಾಡ್ಕೋಬೇಕು ಅಂದಿದ್ದರು.

ಶೃತಿ ಇದಕ್ಕೆ ಓಕೆ ಎಂದಿದ್ದರು. ಅಲ್ಲೇ ವಕೀಲರನ್ನು ಕರೆದು ಅಂಬಿ ಮುಂದೆ ಈ ಪ್ರಕರಣ ಇಲ್ಲಿಗೆ ಮುಗಿಸೋಣ ಅಂತಾ ಶೃತಿ ಹೇಳಿದರು. ಆದರೆ ಸರ್ಜಾ ಮಾತ್ರ ಸಂಧಾನಕ್ಕೂ ಬರುವ ಮುನ್ನವೇ ಶೃತಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದರು. ಅಲ್ಲದೇ ಅಂಬಿ ಮನವೊಲಿಕೆಗೆ ಡೋಂಟ್‍ಕೇರ್ ಎಂದರು.

“ನೀನು ತಪ್ಪು ಮಾಡದೇ ಇರಬಹುದು, ಅದಕ್ಕಾಗಿಯೇ ಶೃತಿ ಬಳಿ ಇದು ನನ್ನ ಅರಿವಿಗೆ ಬಾರದೇ ಆಗಿರೋದು, ಪಾತ್ರದಲ್ಲಿ ಇನ್ವಾಲ್ ಆಗಿರುವ ಸಮಸ್ಯೆ ಇರಬಹುದು. ನನ್ನ ಮಗಳಂತೆ ನೀನು ತಪ್ಪಾಗಿ ಅರ್ಥೈಸಿಕೊಳ್ಳದೇ ಇಲ್ಲಿಗೆ ಬಿಟ್ಟು ಬಿಡು” ಅಂತಾ ಶೃತಿ ಬಳಿ ಒಂದು ಮಾತು ಹೇಳಿ ಅಂತಾ ಸರ್ಜಾಗೆ ಅಂಬಿ ಹೇಳಿದ್ದರು.

ಇದನ್ನೆಲ್ಲ ನಾನು ಹೇಳಲ್ಲ, ಆಕೆಯ ಮುಖವನ್ನು ನೋಡಲ್ಲ. ಶೇಕ್ ಹ್ಯಾಂಡ್ ನೋ ಚಾನ್ಸ್ ಅಂತಾ ಅರ್ಜುನ್ ಅಲ್ಲಿಂದ ಎದ್ದು ಬಂದರು. ಇದಕ್ಕೆ ಧ್ರುವ ಸರ್ಜಾ ಕೂಡ ನಾವು ಕೋರ್ಟ್‍ನಲ್ಲಿ ನೋಡ್ಕೋತಿವಿ ಅಂತಾ ಹೇಳಿದರು. ಇದು ಶೃತಿ ಸಿಡಿದೆಳಲು ಕಾರಣ. ಇದಕ್ಕಾಗಿಯೇ ದಿಢೀರ್ ಶನಿವಾರ ಶೃತಿ ಅವರು ಸರ್ಜಾ ವಿರುದ್ಧ ಸವಿಸ್ತಾರವಾಗಿ ದೂರು ನೀಡಿದ್ದಾರೆ ಅನ್ನೋದು ಬಯಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply

Your email address will not be published.

Back to top button