ವಾಷಿಂಗ್ಟನ್: ಅಮೆರಿಕ (America) ಸೇನೆ ಇತ್ತೀಚಿಗೆ ಯೆಮೆನ್ (Yemen) ದೇಶದ ಮೇಲೆ ಭೀಕರ ದಾಳಿಗಳನ್ನು ನಡೆಸಿತ್ತು. ಆದರೆ ಈ ದಾಳಿಯ ಮೊದಲೇ, ಇದಕ್ಕೆ ಸಂಬಂಧಿಸಿದ ಯೋಜನೆಯ ರಹಸ್ಯ ಲೀಕ್ ಆಗಿತ್ತು ಎನ್ನುವ ವಿಚಾರ ಸಂಚಲನ ಮೂಡಿಸಿದೆ.
ಉಪಾಧ್ಯಕ್ಷ ಜೆಡಿ ವಾನ್ಸ್, ರಕ್ಷಣಾ ಮಂತ್ರಿ ಪೀಟ್ ಹೆಗ್ಸತ್ ಸೇರಿ ಪ್ರಮುಖ ಗಣ್ಯರು ಇರುವ ಸಿಗ್ನಲ್ ಆಪ್ ಗ್ರೂಪ್ ಚಾಟ್‌ನಲ್ಲಿ ಪತ್ರಕರ್ತರೊಬ್ಬರು ಇದ್ದರು. ಹೀಗಾಗಿ ದಾಳಿಗೆ ಸಂಬಂಧಿಸಿದ ವಿಷಯಗಳು ಆ ಪತ್ರಕರ್ತನಿಗೆ ಮೊದಲೇ ಗೊತ್ತಿತ್ತು ಎಂಬುದನ್ನು ಶ್ವೇತಭವನ ಒಪ್ಪಿಕೊಂಡಿದೆ. ಇದನ್ನೂ ಓದಿ: ಶಿಸ್ತು ಉಲ್ಲಂಘನೆ – ಬಿಜೆಪಿಯ ಐದು ನಾಯಕರಿಗೆ ನೋಟಿಸ್
ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಆಕಸ್ಮಿಕವಾಗಿ ಅಮೆರಿಕದ ಪ್ರಮುಖ ರಾಜಕೀಯ ಪತ್ರಕರ್ತ ಜೆಫ್ರಿ ಗೋಲ್ಡ್‌ಫೀಲ್ಡ್‌ರನ್ನ ಸಿಗ್ನಲ್ ಆಪ್ ಗ್ರೂಪ್‌ಚಾಟ್‌ಗೆ ಸೇರಿಸಿದ್ದರು ಎನ್ನಲಾಗಿದೆ. ಇದನ್ನು ಗಂಭೀರ ಸ್ವರೂಪದ ಭದ್ರತಾ ವೈಫಲ್ಯ ಎನ್ನಲಾಗುತ್ತಿದೆ. ಇದನ್ನೂ ಓದಿ: ರಾಜ್ಯದ ಹಲವೆಡೆ ಭಾರೀ ಮಳೆ | ಮರ ಬಿದ್ದು ಕಳಸ – ಮೂಡಿಗೆರೆ ಮಾರ್ಗ ಬಂದ್