ಕಾಲಿವುಡ್ ನಟ ಸೂರ್ಯ (Suriya) ನಟನೆಯ ‘ರೆಟ್ರೋ’ (Retro Film) ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ‘ರೆಟ್ರೋ’ ಚಿತ್ರದ 2ನೇ ಹಾಡಿನ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಮಾ.21ರಂದು ಸಾಂಗ್ ರಿಲೀಸ್ ಆಗಲಿದೆ. ಇದನ್ನೂ ಓದಿ:ರಜತ್ ಪತ್ನಿ ಅಕ್ಷಿತಾಗೆ ಹುಟ್ಟುಹಬ್ಬದ ಸಂಭ್ರಮ: ‘ಬಿಗ್ ಬಾಸ್’ ಸ್ಪರ್ಧಿಗಳು ಭಾಗಿ
ರೆಟ್ರೋ ಸಿನಿಮಾದಲ್ಲಿ ಸೂರ್ಯ ಮತ್ತು ಪೂಜಾ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಸೂರ್ಯ ಜೀವತುಂಬಿದ್ದಾರೆ. ಈಗಾಗಲೇ ‘ಕನ್ನಾಡಿ ಪೂವೇ’ ಎನ್ನುವ ಸಾಂಗ್‌ವೊಂದು ರಿಲೀಸ್ ಆಗಿ ಪ್ರೇಕ್ಷಕರ ಮನಗೆದ್ದಿದೆ. ಈಗ ಎರಡನೇ ಹಾಡನ್ನು ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ.
For My Boys #AnbanaFans 🙂❤️#Kanimaa
A @Music_Santhosh 🔥 🔥 Coming on 21st March #Retro#LoveLaughterWar #RetroFromMay1 @Suriya_offl @hegdepooja@2D_ENTPVTLTD @stonebenchers pic.twitter.com/HCYyY5YAgO
— karthik subbaraj (@karthiksubbaraj) March 19, 2025
ಮಾ.21ರಂದು ‘ಕನಿಮಾ’ ಎಂಬ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಲಿದೆ. ಸೂರ್ಯ ಸ್ಟೈಲೀಶ್ ಲುಕ್‌ನಲ್ಲಿರುವ ಫೋಟೋವನ್ನು ಚಿತ್ರತಂಡ ರಿವೀಲ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಇನ್ನೂ ಚಿತ್ರವನ್ನು ಕಾರ್ತಿಕ್ ಸುಬ್ಬರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಇದೇ ಮೇ.1ರಂದು ಸಿನಿಮಾ ರಿಲೀಸ್ ಆಗಲಿದೆ.
ಇನ್ನೂ ಸೂರ್ಯ ಜೊತೆ ಮೊದಲ ಬಾರಿಗೆ ಪೂಜಾ (Pooja Hegde) ನಟಿಸಿರೋದ್ರಿಂದ ‘ರೆಟ್ರೋ’ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಸತತ ಸೋಲುಗಳನ್ನೇ ಕಂಡಿರೋ ಪೂಜಾಗೆ ತಮಿಳಿನ ‘ರೆಟ್ರೋ’ ಚಿತ್ರ ಕೈಹಿಡಿಯುತ್ತಾ? ಎಂದು ಕಾದುನೋಡಬೇಕಿದೆ.