ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಸ್ವಾತಿ(ಎಡ), ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ಸ್ಥಾನ ಅಂಕಿತಾ(ಬಲ)
ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಮೂರು ವಿಭಾಗದಲ್ಲೂ ವಿದ್ಯಾರ್ಥಿನಿಯರೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.
Advertisement
ಕಲಾವಿಭಾಗದಲ್ಲಿ ಇಬ್ಬರು, ವಾಣಿಜ್ಯ ವಿಭಾಗದಲ್ಲಿ ಇಬ್ಬರು ಹಾಗೂ ವಿಜ್ಞಾನ ವಿಭಾಗದಲ್ಲಿ ಒಬ್ಬರು ಪ್ರಥಮ ಸ್ಥಾನ ಪಡೆದಿದ್ದಾರೆ.
Advertisement
ಕಲಾ ವಿಭಾಗದಲ್ಲಿ ಎಂದಿನಂತೆ ಬಳ್ಳಾರಿ ಕೊಟ್ಟೂರಿನ ಇಂದು ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಈ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮೊದಲ ಮೂರು ಸ್ಥಾನಗಳನ್ನು ಪಡೆದಿರುವುದು ವಿಶೇಷ. ಸ್ವಾತಿ ಎಸ್ 595 ಅಂಕ, ರಮೇಶ್ 593 ಅಂಕ, ಕಾವ್ಯಂಜಲಿ ಗೊರವರ 588 ಅಕಗಳನ್ನು ಪಡೆದಿದ್ದಾರೆ. ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ: ಶೇ.59.56 ವಿದ್ಯಾರ್ಥಿಗಳು ಪಾಸ್, ದಕ್ಷಿಣ ಕನ್ನಡ ಫಸ್ಟ್
Advertisement
ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಇಬ್ಬರು ವಿದ್ಯಾರ್ಥಿನಿಯರು ಟಾಪರ್ ಆಗಿದ್ದಾರೆ. ಮಲ್ಲೇಶ್ವರಂ ವಿದ್ಯಾಮಂದಿರ ಕಾಲೇಜಿನ ವರ್ಷಿಣಿ ಎಂ ಭಟ್ ಮತ್ತು ರಾಜಾಜಿನಗರ ಎಎಸ್‍ಸಿ ಪಿಯು ಕಾಲೇಜಿನ ಅಮೃತಾ ಎಸ್‍ಆರ್ 595 ಅಂಕಗಳನ್ನು ಗಳಿಸಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಪೂರ್ವಿಕಾ 594 ಅಂಕಗಳಿಸಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
Advertisement
ವಿಜ್ಞಾನ ವಿಭಾಗದಲ್ಲಿ ಬೆಂಗಳೂರಿನ ಬಸವೇಶ್ವರ ನಗರದ ವಿವಿಎಸ್ ಸರ್ದಾರ್ ಪಟೇಲ್ ಕಾಲೇಜಿನ ಕೃತಿ ಮುಟ್ಟಗಿ 597 ಅಂಕಗಳಿಸಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಸನದ ಮಾಸ್ಟರ್ಸ್ ಪಿಯು ಕಾಲೇಜಿನ ಮೋಹನ್ ಎಸ್‍ಎಲ್ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಗೋವಿಂದದಾಸ ಪಿಯು ಕಾಲೇಜಿನ ಅಂಕಿತಾ ಪಿ 595 ಅಂಕಗಳಿಸುವ ಮೂಲಕ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪಿಯುಸಿ ಉತ್ತರ ಪತ್ರಿಕೆ ಸ್ಕ್ಯಾನಿಂಗ್, ಮರು ಮೌಲ್ಯಮಾಪನಕ್ಕೆ ಶುಲ್ಕ ಎಷ್ಟು?
ಒಟ್ಟು 408421 ವಿದ್ಯಾರ್ಥಿಗಳು ಪಾಸ್ ಆಗಿದ್ದು, ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ ಸಿಕ್ಕಿದೆ. ಉಡುಪಿ, ಕೊಡಗು ಕ್ರಮವಾಗಿ ಎರಡು, ಮೂರನೇ ಸ್ಥಾನವನ್ನು ಪಡೆದುಕೊಂಡಿದ್ದರೆ, ಚಿಕ್ಕೋಡಿಗೆ ಕೊನೆ ಸ್ಥಾನ ಸಿಕ್ಕಿದೆ. 52.30% ಬಾಲಕರು, 67.11% ಬಾಲಕಿಯರು ತೇರ್ಗಡೆಯಾಗಿದ್ದಾರೆ.
ದಕ್ಷಿಣ ಕನ್ನಡ ಮೊದಲ ಸ್ಥಾನ.-91.49%
ಉಡುಪಿ ಎರಡನೇ ಸ್ಥಾನ-90.67%
ಕೊಡಗು ಮೂರನೇ ಸ್ಥಾನ-83.94%
ಚಿಕ್ಕೋಡಿ ಕೊನೆಸ್ಥಾನ -52.20%