ಬೆಂಗಳೂರು: ದೇಶದ ಎರಡನೇ ಓಮಿಕ್ರೋನ್ ಸೋಂಕಿತ ವ್ಯಕ್ತಿ ಮಂಗಳವಾರ ಡಿಸ್ಚಾರ್ಜ್ ಆಗಿದ್ದಾರೆ. ನಿನ್ನೆ ಸಂಜೆ 6 ಗಂಟೆಯ ನಂತರಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಡಿ.3 ರಂದು 46 ವರ್ಷದ ಬೆಂಗಳೂರು ವೈದ್ಯನಿಗೆ ಓಮಿಕ್ರೋನ್ ಪತ್ತೆಯಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲು ಮಾಡಿ 8 ನೇ ದಿನಕ್ಕೆ ಟೆಸ್ಟ್ ಮಾಡಿದಾಗಲೂ ಪಾಸಿಟಿವ್ ಆಗಿತ್ತು. ರೋಗ ಲಕ್ಷಣ ಇಲ್ಲದಿದ್ದರು ಪಾಸಿಟಿವ್ ಆಗಿತ್ತು. ತದ ನಂತರ ಸರ್ಕಾರದ ಪ್ರೋಟೋಕಾಲ್ ಪ್ರಕಾರ ಎರಡು RTPCR ಟೆಸ್ಟ್ ಮಾಡಿಸಲಾಗಿತ್ತು. ಇದನ್ನೂ ಓದಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವ ಮೊದಲ ಓಮಿಕ್ರಾನ್ ಸೋಂಕಿತ
Advertisement
Advertisement
ಎರಡು RTPCR ಟೆಸ್ಟ್ ನಲ್ಲಿ ನೆಗೆಟಿವ್ ಬಂದಿತ್ತು. ಎರಡು RTPCR ಟೆಸ್ಟ್ ನೆಗೆಟಿವ್ ಇರುವ ಹಿನ್ನೆಲೆ ನಿನ್ನೆ ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾರ್ಜ್ ಆದ ಮೇಲೂ 8 ದಿನಗಳ ಕಾಲ ಹೊಂ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತಿದೆ. ಅಂತೆಯೇ ಸದ್ಯ ಅವರು ಹೋಂಕ್ವಾರಂಟೈನಲ್ಲಿ ಇದ್ದಾರೆ.
Advertisement