ನವದೆಹಲಿ: ಉಕ್ರೇನ್‍ನಲ್ಲಿ ಸಿಲುಕಿದ್ದ 250 ಭಾರತೀಯ ಪ್ರಜೆಗಳನ್ನು ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‌ನಿಂದ ಏರ್ ಇಂಡಿಯಾದ ಎರಡನೇ ವಿಮಾನವು ಭಾನುವಾರ ಮುಂಜಾನೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
“Many students are staying in bunkers due to attacks against Ukraine. The situation is difficult. Thanks to govt that they evacuated us on time,” students returned from Ukraine said pic.twitter.com/bZKxAMHqQy
— ANI (@ANI) February 27, 2022
Advertisement
ಏರ್ ಇಂಡಿಯಾ (ಎಐ)-192 ವಿಶೇಷ ವಿಮಾನವು ಬೆಳಗ್ಗೆ 3 ಗಂಟೆಗೆ ‘ಆಪರೇಷನ್ ಗಂಗಾ’ ಅಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಇಳಿಸಿದೆ. ಇದನ್ನೂ ಓದಿ: ರಷ್ಯಾ ಜಾಗತಿಕ ಪಾವತಿ ವ್ಯವಸ್ಥೆ ಕಡಿತ – ಯುಎಸ್, ಮಿತ್ರರಾಷ್ಟ್ರಗಳ ಒಪ್ಪಿಗೆ
Advertisement
#WATCH | The situation is bad at many places in Ukraine, citizens have taken up arms to save their country. Stockpiling was began where I was staying, a student who returned from Ukraine said pic.twitter.com/zLb2Wzx0Bp
— ANI (@ANI) February 27, 2022
Advertisement
ಈ ವೇಳೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಅವರು, ಉಕ್ರೇನ್‍ನಿಂದ ಬುಚಾರೆಸ್ಟ್ ಮೂಲಕ ಸುರಕ್ಷಿತವಾಗಿ ಬಂದ ಭಾರತೀಯರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
Advertisement
#WATCH | Civil Aviation Minister Jyotiraditya Scindia & MoS MEA V Muraleedharan welcome the Indian nationals safely evacuated from Ukraine via Bucharest (Romania) pic.twitter.com/UsFC7f63xf
— ANI (@ANI) February 26, 2022
ಈ ವಿಮಾನದಲ್ಲಿ ಬಂದ ಭಾರತೀಯ ವಿದ್ಯಾರ್ಥಿಯೊಬ್ಬರು ಮಾಧ್ಯಮದೊಂದಿಗೆ ಮಾತನಾಡಿ, ಕೈವ್‍ನ ಹಲವಾರು ಸ್ಥಳಗಳಲ್ಲಿ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ನಾಗರಿಕರು ತಮ್ಮ ದೇಶವನ್ನು ಉಳಿಸಲು ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ತಾಯ್ನಾಡಿಗೆ ಬಂದ್ರು ಭಾರತೀಯರು – ಮುಂಬೈನಲ್ಲಿ ವಿಮಾನ ಲ್ಯಾಂಡಿಂಗ್
Three Cheers For India!
Interacted with the Indian evacuees from Ukraine at the Mumbai airport.
Urged them to convey to their friends back in Ukraine that the Govt. has their back. #OperationGanga pic.twitter.com/45jIuncIWT
— Piyush Goyal (@PiyushGoyal) February 26, 2022
ಶನಿವಾರ ರಾತ್ರಿ ಉಕ್ರೇನ್‍ನಿಂದ 219 ಭಾರತೀಯ ವಿದ್ಯಾರ್ಥಿಗಳು ಏರ್ ಇಂಡಿಯಾ ವಿಮಾನ ಮೂಲಕ ಮುಂಬೈಗೆ ಬಂದಿಳಿದಿದ್ದರು. ರೊಮೇನಿಯಾದ ರಾಜಧಾನಿ ಬುಕಾರೆಸ್ಟ್‍ನಿಂದ ಮಧ್ಯಾಹ್ನ ಭಾರತದ ಪ್ರಜೆಗಳನ್ನು ಹೊತ್ತು ವಿಮಾನ ಟೇಕಾಫ್ ಆಗಿತ್ತು. ಉಕ್ರೇನ್‍ನಿಂದ ಸುರಕ್ಷಿತವಾಗಿ ಸ್ಥಳಾಂತರಿಸಲ್ಪಟ್ಟ ಭಾರತೀಯರನ್ನು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದು ಇಳಿಸಿತ್ತು. ಈ ವೇಳೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ವಿದ್ಯಾರ್ಥಿಗಳನ್ನು ಸ್ವಾಗತಿಸಿದ್ದರು.