ಬೆಂಗಳೂರು: ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರಿಗೆ ಡಿಸಿಎಂ ಪಟ್ಟ ನೀಡಲು ಹಿಂದೇಟು ಹಾಕಲಾಗಿದೆ ಎಂಬುದಾಗಿ ತಿಳಿದುಬಂದಿದೆ.
ಶನಿವಾರ ರಾತ್ರಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮತ್ತೊಂದು ಡಿಸಿಎಂ ಹುದ್ದೆ ನೀಡುವ ಕುರಿತು ಚರ್ಚೆ ನಡೆಸಲಾಗಿತ್ತು. ಈ ವೇಳೆ ಡಿಕೆಶಿಗೆ ಡಿಸಿಎಂ ಪಟ್ಟ ಕೊಡಲು ಹಿಂದೇಟು ಹಾಕಲಾಗಿದೆ ಎನ್ನುವ ಮಾಹಿತಿಯೊಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಡಿಕೆಶಿ ಜೊತೆ ರಾಹುಲ್, ಸೋನಿಯಾ ಗಾಂಧಿ ಪ್ರತ್ಯೇಕ ಚರ್ಚೆ
Advertisement
ಜಾತಿ ಲೆಕ್ಕಾಚಾರದ ಹಿನ್ನಲೆ ಡಿಸಿಎಂ ಹುದ್ದೆ ನೀಡಲು ನಿರಾಕರಿಸಲಾಗಿದೆ. ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಡಿ.ಕೆ ಶಿವಕುಮಾರ್ ಇಬ್ಬರು ಒಕ್ಕಲಿಗರಾದ ಹಿನ್ನೆಲೆಯಲ್ಲಿ ಎರಡು ಪ್ರಮುಖ ಹುದ್ದೆ ಒಂದೇ ಸಮುದಾಯಕ್ಕೆ ನೀಡಲು ವಿರೋಧ ವ್ಯಕ್ತವಾಗಿದೆ. ಇತರೆ ಸಮುದಾಯಕ್ಕೆ ಮತ್ತೊಂದು ಡಿಸಿಎಂ ಹುದ್ದೆ ನೀಡುವ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ನಾನು ಫುಟ್ಬಾಲ್ ಆಡೋನಲ್ಲ, ಚೆಸ್ ಆಡಿ ಚೆಕ್ ಕೊಡುವವನು: ಹೈಕಮಾಂಡ್‍ಗೆ ಡಿಕೆಶಿ ಟಾಂಗ್
Advertisement
ಈ ವೇಳೆ ರಾಹುಲ್ ಗಾಂಧಿ ಮತ್ತೊಂದು ಡಿಸಿಎಂ ಹುದ್ದೆ ಅವಶ್ಯಕತೆಯ ಕುರಿತು ಪ್ರಶ್ನಿಸಿದ್ದಾರೆ. ಮತ್ತೊಂದು ಡಿಸಿಎಂ ಹುದ್ದೆಯಿಂದ ಆಗುವ ಲಾಭ ನಷ್ಟ ಕುರಿತು ಲೆಕ್ಕಾಚಾರ ಹಾಕಿದ ಅವರು, ಮತ್ತೊಂದು ಡಿಸಿಎಂ ಹುದ್ದೆ ವಿಚಾರ ಅಂತಿಮಕ್ಕೆ ಬರಲಿಲ್ಲ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಕಪ್ ಎಚ್‍ಡಿಕೆ ಗೆದ್ರೂ ಮ್ಯಾನ್ ಆಫ್ ದಿ ಮ್ಯಾಚ್ ಡಿಕೆಶಿ!