ಬೆಂಗಳೂರು: ತಾಂತ್ರಿಕ ದೋಷದಿಂದ ಎಸಿ ಕಾರಿನಲ್ಲಿ ಉಸಿರುಗಟ್ಟಿ ಜೋಡಿಗಳು ಸಾವನ್ನಪ್ಪಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಸಮೀಪದ ಐಟಿಐ ಲೇಔಟ್‍ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಐಟಿಐ ಲೇಔಟ್ ನಿವಾಸಿಯಾಗಿರುವ 30 ವರ್ಷದ ವಿವಾಹಿತ ಹಾಗೂ 28 ವರ್ಷದ ಆತನ ಸಂಬಂಧಿಕ ಮಹಿಳೆ ಮೃತ ದುರ್ದೈವಿಗಳು. ಮೃತ ವ್ಯಕ್ತಿ ಸೆಕೆಂಡ್ ಹ್ಯಾಂಡ್ ಕಾರುಗಳ ಏಜೆಂಟ್ ಆಗಿದ್ದ. ಮೃತ ಮಹಿಳೆ ಆತನ ಸಂಬಂಧಿಯಾಗಿದ್ದು, ಇಬ್ಬರ ಮಧ್ಯೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ.
Advertisement
ಬುಧವಾರ ರಾತ್ರಿ ಮಹಿಳೆಯೊಂದಿಗೆ ಇನ್ನೋವಾ ಕಾರಿನಲ್ಲಿ ಗ್ಯಾರೇಜಿಗೆ ಬಂದಿದ್ದ. ಕಾರನ್ನು ನಿಲ್ಲಿಸಿ ಶೆಡ್‍ನ ಶೆಟರ್ ಎಳೆದು ಕಾರಿನೊಳಗೆ ಇಬ್ಬರು ಕುಳಿತು ಬಾಗಿಲು ಹಾಕಿಕೊಂಡು ಎಸಿ ಆನ್ ಮಾಡಿಕೊಂಡಿದ್ದರು. ಜೋಡಿಗಳು ಏಕಾಂತದ ಜೊತೆಗೆ ಆತ್ಮೀಯವಾಗಿ ಸಮಯ ಕಳೆದಿದ್ದಾರೆ. ಈ ವೇಳೆ ಕಾರಿನಲ್ಲಿ ಇಂಧನ ಖಾಲಿಯಾಗಿದ್ದು, ಎಸಿಯಿಂದ ಹೊರಸೂಸುತ್ತಿದ್ದ ಕಾರ್ಬನ್ ಮೊನಾಕ್ಸೈಡ್ ಹೊರಗೆ ಹೋಗದೇ ಕಾರಿನೊಳಗೆ ಆವರಿಸಿಕೊಂಡಿದೆ. ಅಲ್ಲದೇ ಶೆಡ್ ಹಾಗೂ ಕಾರಿನ ಬಾಗಿಲು ಬಂದ್ ಮಾಡಿದ್ದ ಪರಿಣಾಮ ಗಾಳಿ ಸಂಚಾರಕ್ಕೆ ಸಮಸ್ಯೆಯುಂಟಾಗಿದ್ದು, ಕಾರಿನಲ್ಲಿದ್ದ ಏಕಾಂತದ ಜೋಡಿಗಳು ವಿಷಾನಿಲ ಸೇವಿಸಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
Advertisement
Advertisement
ಗುರುವಾರ ಬೆಳಗ್ಗೆ ಶೆಡ್ ತೆಗೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೃತರಿಬ್ಬರು ಇತರೆ ವ್ಯಕ್ತಿಗಳನ್ನು ವಿವಾಹವಾಗಿದ್ದು, ವಿವಾಹದ ಬಳಿಕವೂ ಅನೈತಿಕ ಸಂಬಂಧವನ್ನು ಹೊಂದಿದ್ದರು. ಇಬ್ಬರಿಗೂ ಮಕ್ಕಳಿದ್ದಾರೆ. ಮೃತರ ಕುಟುಂಬದವರ ದೂರು ಆಧರಿಸಿ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಆರೋಪದಡಿ ಪ್ರಕರಣ ದಾಖಲಾಗಿದೆ.