ನವದೆಹಲಿ: ಭಾರತದ ಭದ್ರತೆ ಹಾಗೂ ವಿನಿಮಯ ಮಂಡಳಿ(SEBI) ಹೊಸ ಮಹಿಳಾ ಅಧ್ಯಕ್ಷೆಯನ್ನು ನೇಮಿಸಿದೆ. ಸೊಮವಾರ ಸೆಬಿಯ ಹೊಸ ಅಧ್ಯಕ್ಷೆಯಾಗಿ ಮಾಧಬಿ ಪುರಿ ಬುಚ್ ನೇಮಕಗೊಂಡಿದ್ದಾರೆ.
ಮಾಧಬಿ ಸೆಬಿಯ ಅಧ್ಯಕ್ಷೆಯಾಗುವುದರೊಂದಿಗೆ ಸೆಬಿಯ ಮೊದಲ ಮಹಿಳಾ ಅಧ್ಯಕ್ಷರೆನಿಸಿಕೊಂಡಿದ್ದಾರೆ.
Advertisement
ಫೆಬ್ರವರಿ 28ರಂದು ಅಜಯ್ ತ್ಯಾಗಿಯವರ ಸೆಬಿ ಅಧ್ಯಕ್ಷತೆಯ ಅವಧಿ ಪೂರ್ಣವಾಗಿದ್ದು, ಮಾಧಬಿ ಪುರಿ ಬುಚ್ ಅವರನ್ನು 3 ವರ್ಷಗಳ ಅವಧಿಗೆ ಸೆಬಿಯ ಅಧ್ಯಕ್ಷೆಯನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ಇದನ್ನೂ ಓದಿ: ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿನಿಯ ವೀಡಿಯೋ ಶೇರ್ ಮಾಡಿದ ಪ್ರಿಯಾಂಕಾ!
Advertisement
Advertisement
ಮಾಧಬಿ ಪುರಿ ಬುಚ್ ಯಾರು?
ಮಾಧಬಿ ಪುರಿ ಬುಚ್ ಸೆಬಿಯ ಮಾಜಿ ಪೂರ್ಣ ಅವಧಿಯ ಸದಸ್ಯ(ಡಬ್ಲ್ಯೂಟಿಎಮ್)ರಾಗಿದ್ದಾರೆ. ಮಾಧಬಿ 2017 ಏಪ್ರಿಲ್ 5ರಿಂದ 2021 ಅಕ್ಟೋಬರ್ 4ರ ವರೆಗೆ ಸೆಬಿಯ ಪೂರ್ಣ ಅವಧಿಯ ಸದಸ್ಯರಾಗಿದ್ದರು. ಇದನ್ನೂ ಓದಿ: ದಿಢೀರ್ ಭಾರೀ ಪ್ರಮಾಣದಲ್ಲಿ ಬಡ್ಡಿದರ ಏರಿಸಿದ ರಷ್ಯನ್ ಬ್ಯಾಕ್
Advertisement
ಮಾಧಬಿ ಅವರಿಗೆ ಹಣಕಾಸು ಮಾರುಕಟ್ಟೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಅನುಭವವಿದ್ದು, ಸೆಬಿಯಲ್ಲಿ ಹೂಡಿಕೆ, ಸಾಮೂಹಿಕ ಹೂಡಿಕೆ ಯೋಜನೆ ಹಾಗೂ ಕಣ್ಗಾವಲು ಸೇರಿದಂತೆ ವಿವಿಧ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದಾರೆ.