ಬೆಂಗಳೂರು: ಓಲಾ, ಉಬರ್‌ನಲ್ಲಿ ಶೇರಿಂಗ್ ಮಾಡಿಕೊಂಡು ಓಡಾಡುವುದು ಡೌಟಾಗಿದೆ. ಯಾಕೆಂದರೆ ಬೆಂಗಳೂರಿನಲ್ಲಿ ಸೀಟ್ ಶೇರಿಂಗ್ ಸೌಲಭ್ಯವನ್ನು ರಾಜ್ಯ ಸರ್ಕಾರ ಬ್ಯಾನ್ ಮಾಡಿದೆ.
ಓಲಾ ಮತ್ತು ಉಬರ್‌ನಲ್ಲಿ ಶೇರಿಂಗ್ ಮಾಡಿಕೊಂಡು ಓಡಾಡುವುದು ನಿಯಮಬಾಹಿರವಾಗಿದೆ. ಏನೇ ಹೊಸ ಸೌಲಭ್ಯ ನೀಡುವುದಾದರೂ ಕಾನೂನು ವ್ಯಾಪ್ತಿಯಲ್ಲೇ ನೀಡಬೇಕೆಂದು ಸಾರಿಗೆ ಇಲಾಖೆ ತಿಳಿಸಿದೆ. ಅಲ್ಲದೆ ಈ ಸೌಲಭ್ಯದ ವಿರುದ್ಧ ಓಲಾ ಮತ್ತು ಊಬರ್ ಕ್ಯಾಬ್ ಡ್ರೈವರ್ ಗಳು ಕೂಡ ದೂರು ನೀಡಿದ್ದರು.
Advertisement
Advertisement
ಶೇರಿಂಗ್ ನಿಂದಾಗಿ ಮಹಿಳೆಯರ ಸುರಕ್ಷತೆಗೆ ತೊಂದರೆ ಸೇರಿದಂತೆ ಅನೇಕು ಅನಾನುಕೂಲತೆ ಆಗಿದ್ದರಿಂದ ಶೇರಿಂಗ್ ಸೌಲಭ್ಯವನ್ನು ಬ್ಯಾನ್ ಮಾಡಲಾಗಿದೆ. 2017ರಲ್ಲಿ ಶೇರಿಂಗ್ ಸೌಲಭ್ಯ ನಿಷೇಧಕ್ಕೆ ಸಾರಿಗೆ ತಜ್ಞರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದೀಗ ಮತ್ತೆ ಶೇರಿಂಗ್ ಮಾಡಿಕೊಂಡು ಓಡಾಡುವುದರ ಬಗ್ಗೆ ಕಾರು ಚಾಲಕರು ದೂರು ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬ್ಯಾನ್ ಮಾಡಿದೆ.
Advertisement
Advertisement
ಒಂದು ವೇಳೆ ಬ್ಯಾನ್ ಬಳಿಕವೂ ಕಂಪನಿಗಳು ಈ ಸೌಲಭ್ಯ ನಿಲ್ಲಿಸದಿದ್ದರೆ ಅವುಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅರ್ಜಿ ಸಲ್ಲಿಸುತ್ತೇವೆ ಎಂದು ಕಾರು ಚಾಲಕರ ಸಂಘದ ಮುಖಂಡರು ತಿಳಿಸಿದ್ದಾರೆ.