‘ಸೀಟ್ ಎಡ್ಜ್’ (Seat Edge) ಹೀಗೊಂದು ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಕಿರುತೆರೆ ಜೊತೆಗೆ ಒಂದಷ್ಟು ಚಿತ್ರಗಳಲ್ಲಿ ನಟಿಸಿರುವ ಸಿದ್ದು ಮೂಲಿಮನಿ (Siddu Moolimani) ಹಾಗೂ ಯುವ ನಟಿ ರವೀಕ್ಷಾ ಶೆಟ್ಟಿ (Ravisha Shetty) ಜೋಡಿಯಾಗಿ ಅಭಿನಯಿಸಿರುವ ಈ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಸಿದ್ದು ಕೊಡಿಪುರ ಸಾಹಿತ್ಯದ ರೋಮ್ಯಾಂಟಿಕ್ ಗೀತೆಗೆ ಅರ್ಮಾನ್ ಮಲಿಕ್ ಧ್ವನಿ ಕುಣಿಸಿದ್ದು, ಆಕಾಶ್ ಪರ್ವ ಟ್ಯೂನ್ ಹಾಕಿದ್ದಾರೆ. ‘ಸಾರಿ ಹೇಳುವೆ ಜಗಕ್ಕೆ’ ಎನ್ನುತ್ತಾ ಸಿದ್ದು ಮೂಲಿಮನಿ ಹಾಗೂ ರವೀಕ್ಷಾ ಹೆಜ್ಜೆ ಹಾಕಿದ್ದಾರೆ. ಇದನ್ನೂ ಓದಿ:ನನ್ನ ಮದುವೆಗೆ ದರ್ಶನ್ ಅವ್ರು ಬಂದ್ರೆ ತುಂಬಾ ಸಂತೋಷ: ಡಾಲಿ ಧನಂಜಯ್
Advertisement
‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಹಾಗೂ ಕ್ರಿಟಿಕಲ್ ಕೀರ್ತನೆಗಳು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ದುಡಿದಿರುವ ಚೇತನ್ ಶೆಟ್ಟಿ ’ಸೀಟ್ ಎಡ್ಜ್’ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಮೂಲಕ ಅವರು ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಡಾರ್ಕ್ ಕಾಮಿಡಿ ಜೊತೆಗೆ ಹಾರರ್ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಕಿರಣ್ ನಾಯಕರೇ, ಪುನೀತ್ ಬಾಬು, ತೇಜು ಪೊನ್ನಪ್ಪ, ಮನಮೋಹನ್ ರೈ ನಟಿಸಿದ್ದಾರೆ.
Advertisement
Advertisement
ಎನ್ ಆರ್ ಸಿನಿಮಾ ಪ್ರೊಡಕ್ಷನ್ ಬ್ಯಾನರ್ ನಡಿ ಗಿರಿಧರ ಟಿ ವಸಂತಪುರ ಬಂಡವಾಳ ಹಾಕಿದ್ದು, ಸುಜಾತ ಗಿರಿಧರ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಆಕಾಶ್ ಪರ್ವ ಸಂಗೀತ ನಿರ್ದೇಶನ, ದೀಪಕ್ ಕುಮಾರ್ ಜೆಕೆ ಛಾಯಾಗ್ರಹಣ ಹಾಗೂ ನಾಗೇಂದ್ರ ಉಜ್ಜನಿ ಸಂಕಲನ ‘ಸೀಟ್ ಎಡ್ಜ್’ ಚಿತ್ರಕ್ಕಿ ಇದೆ.