ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ (Karnataka Examination Authority) ಸೀಟ್ ಬ್ಲಾಕಿಂಗ್ ಅಕ್ರಮ (Seat Blocking) ಆಗಿರುವುದು ಸತ್ಯ. ಅಕ್ರಮ ತನಿಖೆಗೆ ಸರ್ಕಾರವೇ ಕೆಇಎಗೆ (KEA) ಸೂಚನೆ ನೀಡಿ ಪೊಲೀಸರಿಗೆ ದೂರು ನೀಡುವಂತೆ ತಿಳಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಸೀಟ್ ಬ್ಲಾಕ್ ಅಕ್ರಮ ಆಗಿರುವ ಬಗ್ಗೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯೆ ನೀಡಿದ ಅವರು, ಸೀಟ್ ಬ್ಲಾಕ್ ಬಗ್ಗೆ ನಮ್ಮ ಗಮನಕ್ಕೆ ಬಂದ ಕೂಡಲೇ ಅಧಿಕಾರಿಗಳಿಂದ ಮಾಹಿತಿ ಪಡೆದು ದೂರು ನೀಡಿದ್ದೇವೆ. ಯಾವ ರೀತಿ ಅಕ್ರಮ ಆಗಿದೆ? ಈ ವರ್ಷ ಆಗಿದೆಯಾ? ಕಳೆದ ವರ್ಷ ಆಗಿದೆಯಾ? ಎಲ್ಲದರ ಬಗ್ಗೆ ತನಿಖೆಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ನಾನಿ ನಿರ್ಮಾಣದ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟ ಮೆಗಾಸ್ಟಾರ್
Advertisement
Advertisement
ಕಳೆದ ಎರಡು ವರ್ಷಗಳ ಐಪಿ ಅಡ್ರೆಸ್‌ನಲ್ಲಿ ಹೇಗೆ ಆಪ್ಶನ್ ಎಂಟ್ರಿ ಮಾಡಿದ್ದಾರೆ ಎಂದು ತನಿಖೆ ಆಗುತ್ತಿದೆ. ಸೀಟು ಪಡೆಯದ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗಿದೆ. ಕೆಲವು ಕಾಲೇಜುಗಳಲ್ಲಿ ಒಂದೇ ಐಪಿ ಅಡ್ರೆಸ್‌ನಿಂದ ಆಪ್ಶನ್ ಎಂಟ್ರಿ ಆಗಿರುವುದು ಗಮನಕ್ಕೆ ಬಂದಿದೆ. ನಾವೇ ಪ್ರಾಥಮಿಕ ತನಿಖೆ ಮಾಡಿ, ಮಾಹಿತಿ ಸಂಗ್ರಹ ಮಾಡಿ ಪೊಲೀಸರಿಗೆ ತನಿಖೆ ಮಾಡಲು ದೂರು ಕೊಟ್ಟಿದ್ದೇವೆ ಎಂದಿದ್ದಾರೆ.
Advertisement
ಈ ಅಕ್ರಮ ಜಾಲದ ಪತ್ತೆಗೆ ದೂರು ನೀಡಲಾಗಿದ್ದು, ಪೊಲೀಸರು 10 ಜನರನ್ನು ಬಂಧಿಸಿದ್ದಾರೆ. ಇದಕ್ಕೆ ಯಾರು ಕಿಂಗ್ ಪಿನ್ ಎಂದು ಪತ್ತೆ ಹಚ್ಚಬೇಕು? ಹೆಚ್ಚಿನ ತನಿಖೆ ಆಗುತ್ತಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೀವಿ. ಕೆಇಎ ಬೋರ್ಡ್ ಇದರಲ್ಲಿ ಶಾಮೀಲು ಆಗಿಲ್ಲ. ಅಲ್ಲಿ ಕೆಲಸ ಮಾಡುತ್ತಿರುವ ಅವಿನಾಶ್ ಎಂಬ ಹುಡುಗ ಮಾಹಿತಿ ಕೊಟ್ಟಿದ್ದಾನೆ. ಇದರ ಬಗ್ಗೆ ತನಿಖೆ ಆಗಬೇಕು. ಪೊಲೀಸರು ಕೊಡುವ ವರದಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೀಟ್ ಬ್ಲಾಕ್‌ನಿಂದ ಅನ್ಯಾಯವಾಗಿದೆ. ಇದನ್ನು ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತೇವೆ. ಕಾಲೇಜುಗಳ ಮೇಲೆ ಕ್ರಮಕ್ಕೆ ಪೊಲೀಸರು ವರದಿ ಕೊಡಲಿ. ಪೊಲೀಸರು ವರದಿ ಕೊಟ್ಟ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಅಪರಿಚಿತ ವಾಹನ ಹಿಟ್ ಅಂಡ್ ರನ್ – ತಾಯಿ ಸಾವು, ಮಗು ಸ್ಥಿತಿ ಗಂಭೀರ